ರೇಣುಕಾಸ್ವಾಮಿ ಅಂ ಗಲಾಚಿ ಬೇಡಿಕೊಂಡ ವಿಡಿಯೋ ವೈರ ಲ್

 | 
Gi
ಕೊಲೆ ಕೇಸ್‌ನಲ್ಲಿ ನಟ ದರ್ಶನ್‌  ಮತ್ತು ಗ್ಯಾಂಗ್‌ ಅರೆಸ್ಟ್‌ ಆಗಿದ್ದು, ಕೇಸ್‌ ಸಂಬಂಧ ಚಾರ್ಜ್‌ಶೀಟ್‌ ಸಲ್ಲಿಸಲಾಗಿದೆ. ಕೊಲೆ ಕೇಸ್‌ ತನಿಖೆ ವೇಳೆ ಆರೋಪಿ ಪವನ್‌ ಫೋನ್‌ನಲ್ಲಿ ಎರಡು ಫೋಟೊಗಳು ಪತ್ತೆಯಾಗಿವೆ. ಮೊಬೈಲ್ ರಿಟ್ರೀವ್ ಮಾಡಿದಾಗ ರೇಣುಕಾಸ್ವಾಮಿಯ ಎರಡು ಫೋಟೋಗಳು ಸಿಕ್ಕಿವೆ ಎನ್ನಲಾಗಿದೆ.
ನಟ ದರ್ಶನ್ ಬರುವ ಮುಂಚೆ ಆತನ ಸಹಚರರು 8ನೇ ತಾರೀಖು ಮಧ್ಯಾಹ್ನ‌ 2.30 ರಿಂದ 4ಗಂಟೆವರೆಗೂ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ್ದರು. ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡುವಾಗ ನಟ ದರ್ಶನ್‌ ಸ್ಟೋನಿ ಬ್ರೂಕ್‌ ರೆಸ್ಟೋರೆಂಟ್‌ನಲ್ಲಿ ಪಾರ್ಟಿ ಮಾಡುತ್ತಿದ್ದರು. ಆರೋಪಿ ಪವನ್ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿ ಎರಡು ಫೋಟೊ ತೆಗೆದುಕೊಂಡು ಹೋಗಿ ದರ್ಶನ್‌ಗೆ ತೋರಿಸಿದ್ದ.
ಈ ರೀತಿ ಕರೆದುಕೊಂಡು ಬಂದು, ಆತನ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಪವನ್‌ ದರ್ಶನ್‌ಗೆ ಫೋಟೊ ತೋರಿಸಿದ್ದ. ಫೋಟೊ ನೋಡಿ ಸುಮಾರು ನಾಲ್ಕುವರೆ ದರ್ಶನ್‌ ಪಟ್ಟನಗೆರೆ ಶೆಡ್‌ಗೆ ಹೋಗಿದ್ದ. ಬಳಿಕ ರೇಣುಕಾಸ್ವಾಮಿಗೆ ದರ್ಶನ್‌ ಕೂಡ ಹಲ್ಲೆ ಮಾಡಿದ್ದ. ದರ್ಶನ್ ಹೋದಮೇಲೆ ಡಿ ಗ್ಯಾಂಗ್‌ ಮತ್ತಷ್ಟು ಕ್ರೂರವಾಗಿ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ್ದರು. ಸದ್ಯ ಘಟನೆ ಬಗ್ಗೆ ಸಂಪೂರ್ಣವಾಗಿ ಚಾರ್ಜ್ ಶೀಟ್‌ನಲ್ಲಿ ಪೊಲೀಸರು ಉಲ್ಲೇಖ ಮಾಡಿದ್ದಾರೆ.
ರೇಣುಕಾ ಸ್ವಾಮಿ ಕಳುಹಿಸಿದ ಅಶ್ಲೀಲ ಸಂದೇಶದ ಬಗ್ಗೆ ಪವನ್​ ಬಳಿ ಪವಿತ್ರಾ ಹೇಳಿಕೊಂಡಿದ್ದರು. ಮೆಸೇಜ್​ ಬಗ್ಗೆ ದರ್ಶನ್​ಗೆ ತೋರಿಸಿದ್ದಾಗ ಅವರನ್ನು ಎತ್ತಿಕೊಂಡು ಬರಲು ದರ್ಶನ್ ಸೂಚನೆ ನೀಡಿದ್ದರು. ದರ್ಶನ್ ಆಣತಿಯಂತೆ ರೇಣುಕಾ ಸ್ವಾಮಿಯನ್ನು ಎತ್ತಿಕೊಂಡು ಬಂದು ಪಟ್ಟಣಗೆರೆ ಶೆಡ್​​ನಲ್ಲಿ ಇಡಲಾಯಿತು. ಶೆಡ್​​ನಲ್ಲಿ ಇಟ್ಟ ಬಗ್ಗೆ ದರ್ಶನ್​ಗೆ ಮಾಹಿತಿ ರವಾನೆ ಆಗಿತ್ತು. ನೇರವಾಗಿ ಪವಿತ್ರಾ ಮನೆಗೆ ತೆರಳಿದ ದರ್ಶನ್ ಅವರನ್ನು ಪಿಕ್ ಮಾಡಿಕೊಂಡು ಶೆಡ್​ಗೆ ಬಂದರು.
ದರ್ಶನ್ ಬಂದು ರೇಣುಕಾ ಸ್ವಾಮಿ ಮೇಲೆ ಹಲ್ಲೆ ಮಾಡುತ್ತಾರೆ. ರಿಬ್ ಮುರಿದು ಹಾಕುವ ಅವರು, ಮರ್ಮಾಂಗಕ್ಕೆ ಹೊಡೆಯುತ್ತಾರೆ. ಲಾಠಿನಲ್ಲಿಯೂ ದರ್ಶನ್ ಹಲ್ಲೆ ಮಾಡಿದ್ದಾರೆ. ಪವಿತ್ರಾ ಚಪ್ಪಲಿಯಿಂದ ಹಲ್ಲೆ ಮಾಡುತ್ತಾರೆ. ಆ ಬಳಿಕ ದರ್ಶನ್​ ಮತ್ತೆ ಹಲ್ಲೆ ಮಾಡುತ್ತಾರೆ ಎಂದು ಚಾರ್ಜ್​ಶೀಟ್​ನಲ್ಲಿ ಹೇಳಲಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.