ವಿಜಯ್ ಮಲ್ಯ ಮಗನಿಗೆ ಕಂಕಣ ಭಾಗ್ಯ; ಹುಡುಗಿ ಮಾತ್ರ ಅಪ್ಸರೆ

 | 
Ggg

ಉದ್ಯಮಿ ವಿಜಯ್ ಮಲ್ಯ ಅವರ ಮಗ ಸಿದ್ಧಾರ್ಥ್ ಮಲ್ಯ ಇಂಗ್ಲೆಂಡ್‌ನಲ್ಲಿ ಬಹುಕಾಲದ ಗೆಳತಿ ಜಾಸ್ಮಿನ್ ಜೊತೆ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ವಿಜಯ್ ಮಲ್ಯ ಅವರ ಮಗ ಸಿದ್ಧಾರ್ಥ್ ಮಲ್ಯ ಮದುವೆಗೆ ಕುಟುಂಬದ ಆಪ್ತರು ಮತ್ತು ಹಿತೈಷಿಗಳ ಹಾಜರಿದ್ದರು. ಲಂಡನ್ ಸಮೀಪದ ಐಷಾರಾಮಿ ಮ್ಯಾನ್ಷನ್‌ನಲ್ಲಿ ನಡೆದ ವಿಜಯ್ ಮಲ್ಯ ಮಗನ ಮದುವೆ ನಡೆದಿದೆ.

ಇನ್ನು, ಸಿದ್ಧಾರ್ಥ್ ಮಲ್ಯ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮದುವೆಯ ಬ್ಯೂಟಿಫುಲ್​ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದೇ ಫೋಟೋಗಳನ್ನು ನೋಡಿದ ನೆಟ್ಟಿಗರು ಮದುಗೆ ಶುಭ ಹಾರೈಸಿದ್ದಾರೆ. ಸಿದ್ಧಾರ್ಥ ಮಲ್ಯ ಮದುವೆಗೆ ಕಡು ಹಸಿರು ವೆಲ್ವೆಟ್ ಟುಕ್ಸೆಡೊ ಧರಿಸಿಕೊಂಡಿದ್ದಾರೆ. ಜಾಸ್ಮಿನ್ ಅವರು ಬಿಳಿ ಬಣ್ಣದ ಗೌನ್ ಧರಿಸಿಕೊಂಡು ಫೋಟೋಗೆ ಪೋಸ್​ ಕೊಟ್ಟಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಸಿದ್ದಾರ್ಥ್‌ ಮಲ್ಯ ಹಾಗೂ ಜಾಸ್ಮಿನ್ ಅವರ ಆಲ್ಬಂ ಫೋಟೋ ಒಂದನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. 

ಈ ಫೋಟೋ ಜೊತೆಗೆ ಸಿದ್ದಾರ್ಥ್ ಅವರು ವೆಡ್ಡಿಂಗ್ ವೀಕ್ ಆರಂಭವಾಗಿದೆ ಎಂದು ಬರೆದುಕೊಂಡಿದ್ದರು.ಮದುವೆಯ ವಾರ ಪ್ರಾರಂಭವಾಗಿದೆ ಎಂದು ಸಿದ್ಧಾರ್ಥ್ ಮಲ್ಯ ಅವರು ಪೋಸ್ಟ್‌ನಲ್ಲಿ ಬರೆದಿದ್ದಾರೆ, ಇದರಲ್ಲಿ ಅವರು ಬಿಳಿ ಸೂಟ್ ಮತ್ತು ಹೂವಿನ ಬಿಳಿ ಉಡುಪಿನಲ್ಲಿ ಮಿಂಚಿದ್ದಾರೆ.ಕಳೆದ ವರ್ಷ ನವೆಂಬರ್‌ನಲ್ಲಿ ಸಿದ್ಧಾರ್ಥ್ ಮಲ್ಯ ಅವರು ಎರಡು ಚಿತ್ರಗಳನ್ನು ಹಂಚಿಕೊಂಡಿದ್ದರು. 

ಹ್ಯಾಲೋವೆನ್ 2023 ರ ಸಂದರ್ಭದಲ್ಲಿ ಜಾಸ್ಮಿನ್‌ಗೆ ಮದುವೆಯ ಪ್ರಸ್ತಾಪ ಮಾಡಿದ್ದರು. ಅದಾದ ಬಳಿಕ ಈಗ ಮದುವೆಯಾಗಲು ಸಜ್ಜಾಗಿದ್ದಾರೆ.ಮಾಟಗಾತಿಯ ವೇಷಭೂಷಣ ತೊಟ್ಟಿದ್ದ ಜಾಸ್ಮಿನ್‌ಗೆ ಮಂಡಿಯೂರಿ ಕುಳಿತು ಪ್ರಪೋಸ್ ಮಾಡುತ್ತಿದ್ದ. ಎರಡನೇ ಫೋಟೋ ಜಾಸ್ಮಿನ್ ಅವರ ನಿಶ್ಚಿತಾರ್ಥದ ಉಂಗುರವನ್ನು ತೋರಿಸುವ ಸಂತೋಷದ ಕ್ಷಣಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಇದೀಗ ಮದುವೆಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.