ಅನಾರೋಗ್ಯದಿಂದ ಆಸ್ಪತ್ರೆಯಲ್ಲಿದ್ದ ಶಿವಣ್ಣ ನನ್ನು ಭೇಟಿ ಮಾಡಿ ನಗು ಮೂಡಿಸಿದ ವಿಜಯ ರಾಘವೇಂದ್ರ, ಅಭಿಮಾನಿಗಳಿಂದ ಮೆಚ್ಚುಗೆ

 | 
B

 ಕೆಲ ದಿನಗಳ ಹಿಂದೆ ವಿಪರೀತ ಮಳೆಯಲ್ಲಿ ನೆನೆದಿರುವ ಕಾರಣ ಕನ್ನಡದ ಖ್ಯಾತ ನಟ ಶಿವರಾಜ್‌ ಕುಮಾರ್‌ ಅನಾರೋಗ್ಯಕ್ಕೀಡಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದರು .
ಶಿವಣ್ಣ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನಿರ್ದೇಶನದ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಮಳೆಯಲ್ಲಿ ನೆನೆದಿದ್ದರಿಂದ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ ಎನ್ನುವ ಮಾಹಿತಿ ತಿಳಿದ ಕೂಡಲೆ ವಿಜಯ್ ರಾಘವೇಂದ್ರ ಅವರು ಅಸ್ಪತ್ರೆಗೆ ಹೋಗಿ ಶಿವಣ್ಣ ಅರೋಗ್ಯ ವಿಚಾರಿಸಿದ್ದರು.

ನಟ ಶಿವರಾಜ್‌ ಕುಮಾರ್‌ ಅವರಿಗೆ ಹೆಚ್ಚು ಸುಸ್ತಾಗುತ್ತಿದ್ದಂತೆಯೇ ಕೂಡಲೇ ಬೆಂಗಳೂರಿನ ವೈದೇಹಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಅವರಿಗೆ ಜ್ವರ ಕಾಣಿಸಿಕೊಂಡಿದ್ದು, ವೈದ್ಯರು ಸೂಕ್ತ ಚಿಕಿತ್ಸೆ ನೀಡಿ, ಮನೆಗೆ ಕಳುಹಿಸಿದರು. ಸದ್ಯ ಶಿವಣ್ಣ ಮನೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ . ವೈದ್ಯರ ತಪಾಸಣೆ ಮುಗಿದ ನಂತರ ಆತಂಕ ಪಡುವಂಥದ್ದು ಏನೂ ಆಗಿಲ್ಲ ಎಂದು ವೈದ್ಯರೇ ಸ್ಪಷ್ಟನೆ ನೀಡಿದ್ದಾರೆ. 

ಈ ಹಿಂದೊಮ್ಮೆ ಶಿವಣ್ಣ ಅವರಿಗೆ ಹೃದಯ ಸಂಬಂಧಿ ಸಮಸ್ಯೆ ಕಾಣಿಸಿಕೊಂಡ ಹಿನ್ನಲೆಯಲ್ಲಿ ಸಹಜವಾಗಿಯೇ ಅಭಿಮಾನಿಗಳಿಗೆ ಆಘಾತವಾಗಿತ್ತು. ಸದ್ಯ ಶಿವಣ್ಣ ಆರಾಮಾಗಿರುವ ವಿಚಾರ ಕೇಳಿದ ಫ್ಯಾನ್ಸ್ ಕೊಂಚ ನಿರಾಳವಾಗಿದ್ದಾರೆ. ಇದಲ್ಲದೇ ಹ್ಯಾಟ್ರಿಕ್‌ ಹಿರೋ ಕೆಲವೇ ದಿನಗಳಲ್ಲಿ ಮತ್ತೆ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇದೀಗ ಮಗ ಶೌರ್ಯನ ಜೊತೆ ವಿಜಯ್ ರಾಘವೇಂದ್ರ ಅವರು ಮತ್ತೊಮ್ಮೆ ಶಿವಣ್ಣ ನ ಅರೋಗ್ಯ ವಿಚಾರಿಸಲು ಅವರ ಮನೆಗೆ ತೆರಳಿದ್ದು ಆರೋಗ್ಯದ ಕಡೆಗೆ ಗಮನ ಮಾಡುವಂತೆಯೂ ಹೆಚ್ಚಾಗಿ ವಿಶ್ರಾಂತಿ ತೆಗೆದುಕೊಳ್ಳಿ ಎಂದು ಹೇಳಿದ್ದಾರೆ ಎನ್ನಲಾಗುತ್ತಿದೆ. ಇವರಿಬ್ಬರೂ ಸಂಬಂಧಿಗಳು ಎನ್ನುವುದರ ಹೊರತಾಗಿಯೂ ರಿಷಿ ಹಾಗೂ ಮಾಸ್ ಲೀಡರ್ ಮೊದಲಾದ ಚಿತ್ರಗಳಲ್ಲಿ ಒಟ್ಟಾಗಿ ಕಾಣಿಸಿ ಕೊಂಡಿದ್ದಾರೆ.

( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.