ದೇಶದ ಯುವ ವಿಜ್ಞಾನಿ ಪ್ರತಾಪ್ ಬಗ್ಗೆ ವಿಜಯ್ ರಾಘವೇಂದ್ರ ಮೆಚ್ಚುಗೆಯ ಮಾತು

 | 
ರಾ

ಈಗಾಗಲೇ ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 10 ಅದ್ದೂರಿಯಾಗಿ ನಡೆಯುತ್ತಿದ್ದು. 10 ವಾರಗಳನ್ನು ಯಶಸ್ವಿಯಾಗಿ ಕಳೆದಿದೆ.ಆದರೆ ಈ ಐದು ವಾರಗಳಲ್ಲಿ ಕಿಚ್ಚ ಸುದೀಪ್  ಅವರು ಎರಡು ಸಲ ಮನ ಮೆಚ್ಚಿ ಚಪ್ಪಾಳೆ ನೀಡಿದ್ದಾರೆ. ಹೌದು ಈ ಹಿಂದೆ ಬಳೆ ವಿಚಾರದ ಬಗ್ಗೆ ಮಾತನಾಡಿ ಸುದೀಪ್ ಚಪ್ಪಾಳೆ ಮೂಲಕ ಮೆಚ್ಚುಗೆ ಸಲ್ಲಿಸಿದ್ದರು. ಹಾಗೆಯೇ ಈ ವಾರ ಕೂಡ ಸುದೀಪ್ ಚಪ್ಪಾಳೆ ನೀಡಿ ಮೆಚ್ಚುಗೆ ನೀಡಿದ್ದಾರೆ. ಅದೂ ಜನರ ಮನಗೆದ್ದ ಪ್ರತಾಪ ಅವರಿಗೆ.

ಈ ಹಿಂದೆ ಕಿಚ್ಚ ಸುದೀಪ್ ಅವರು ನನಗೆ ಇಷ್ಟು ವಾರಗಳಲ್ಲಿ ಮನೆಯೊಳಗೆ ಯಾರ ವ್ಯಕ್ತಿತ್ವವೂ ಇಷ್ಟ ಆಗಿಲ್ಲ ಎಂದು ಹೇಳಿದ್ದರು. ಆದರೆ ಈ ವಾರ ಕಿಚ್ಚ ಸುದೀಪ್ ಅವರು ಡ್ರೋನ್ ಪ್ರತಾಪ್ ಅವರ ವ್ಯಕ್ತಿತ್ವವನ್ನು ಮೆಚ್ಚಿ ಅವರಿಗೆ ಚಪ್ಪಾಳೆ ನೀಡಿದ್ದಾರೆ. ಹೌದು, ಡ್ರೋಣ್ ಪ್ರತಾಪ್ ಅವರು ಈ ವಾರ ಅತ್ಯುತ್ತಮವಾಗಿ ಆಟವಾಡಿದ್ದಾರೆ. ಅಷ್ಟೇ ಅಲ್ಲದೆ ಇಡೀ ತಂಡವೇ ಎದುರಾದರೂ ಪ್ರಾಮಾಣಿಕವಾಗಿ ಆಟವಾಡಿದ್ದಾರೆ ಮತ್ತು ತಮ್ಮ ತಂಡವನ್ನು ಮುನ್ನಡುಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೇ ಕಾರಣಕ್ಕೆ ಅವರನ್ನು ಮನಸಾರೆ ಮೆಚ್ಚಿ ಕಿಚ್ಚ ಸುದೀಪ್ ಮೆಚ್ಚುಗೆಯ ಚಪ್ಪಾಳೆಯನ್ನು ನೀಡಿದ್ದಾರೆ.

ಅಷ್ಟೇ ಅಲ್ಲ ಅಭಿಮಾನಿಗಳು ಕೂಡ ಡ್ರೋನ್ ಪ್ರತಾಪ್ ಅವರ ಒಳ್ಳೆಯತನಕ್ಕೆ ಮರುಳಾಗಿದ್ದು ಅವರಿಗೆ ವೋಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೌದು ಅಲ್ಲದೆ ನಟ ವಿಜಯ್ ರಾಘವೇಂದ್ರ ಕೂಡ ಡ್ರೋನ್ ಪ್ರತಾಪ್ ಅವರನ್ನು ಮೆಚ್ಚಿದ್ದು ಬಿಗ್ಬಾಸ್ ಮನೆಯಲ್ಲಿರುವ ಒಳ್ಳೆಯ ಸ್ಪರ್ಧಿ ಅವರು ಎಂದು ಕೊಂಡಾಡಿದ್ದಾರೆ.

ಕಿಚ್ಚ ಸುದೀಪ್ ಹಾಗೂ ವಿಜಯ್ ರಾಘವೇಂದ್ರ ಅವರ ಮೆಚ್ಚುಗೆಗೆ ಪಾತ್ರವಾಗಿರುವ ಡ್ರೋಣ್ ಪ್ರತಾಪ್ ಅವರಿಗೆ ಅಭಿಮಾನಿಗಳಿಗೆ ಬೆಂಬಲವೂ ವ್ಯಕ್ತವಾಗುತ್ತಿದೆ. ಪ್ರತಾಪ್ ಅವರ ಒಳ್ಳೆಯತನಕ್ಕೆ  ಅಭಿಮಾನಿಗಳು ಸಂತಸದಲ್ಲಿ ಕುಣಿದಾಡಿದ್ದಾರೆ. ಪ್ರತಾಪ್ ಗೆದ್ದಷ್ಟೇ ಖುಷಿಯಾಯ್ತು, ಹಾಗೆಯೇ ಈ ಸೀಸನ್ ಅನ್ನು ಪ್ರತಾಪ್ ಅವರು ಗೆಲ್ಲಬೇಕು ಎಂದು ಅಭಿಮಾನಿಗಳು ಕಾಮೆಂಟ್ ಮೂಲಕ ತಿಳಿಸುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.