ಬರೋಬ್ಬರಿ 6ತಿಂಗಳ ನಂತರ ಗಂಡನ ಬತ್೯ಡೇಯನ್ನು ಅದ್ಧೂರಿಯಾಗಿ ಆಚರಿಸಿದ ವಿಜಯಲಕ್ಷ್ಮಿ, ಕೆಂ ಡಾಮಂಡಲವಾದ ಪವಿತ್ರಾ ಅಕ್ಕ

 | 
Nx
 ನಟ ದರ್ಶನ್ ತೂಗುದೀಪ ನಿನ್ನೆ ತಮ್ಮ ಹುಟ್ಟುಹಬ್ಬವನ್ನು ತುಂಬಾ ಸರಳವಾಗಿ ಆಚರಿಸಿಕೊಂಡಿದ್ದಾರೆ. ಪ್ರತಿ ವರ್ಷವೂ ಚಾಲೆಂಜಿಂಗ್ ಸ್ಟಾರ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಅವರ ಮನೆ ಮುಂದೆ ನಿಂತು ದಾಸನ ದರ್ಶನ ಮಾಡಿ, ಬರ್ತ್‌ಡೇ ವಿಶ್ ಮಾಡುವುದು ವಾಡಿಕೆ ಆಗಿತ್ತು. ಅದೆಷ್ಟೇ ಅಭಿಮಾನಿಗಳು ಮನೆಮುಂದೆ ಜಮಾಯಿಸಿದ್ದರು, ತಮ್ಮ ಹುಟ್ಟುಹಬ್ಬದ ದಿನವನ್ನು ಅಭಿಮಾನಿಗಳಿಗೆ ದಾಸ ಮೀಸಲಿಡುತ್ತಿದ್ದರು. ಆದರೆ ಈ ಬಾರಿ ಅದಕ್ಕೆ ಅವಕಾಶವಿಲ್ಲದೆ ಇರುವುದು ದರ್ಶನ್ ಸೆಲಬ್ರಿಟೀಸ್‌ಗೆ ಈ ಬಗ್ಗೆ ಕೊಂಚ ಬೇಸರವೂ ಇದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿಗೆ ಹೋಗಿಬಂದ ನಂತರ ಇದು ದರ್ಶನ್ ಅವರ ಮೊದಲ ಹುಟ್ಟುಹಬ್ಬ. ಹಾಗಾಗಿ ದರ್ಶನ್ ಕುಟುಂಬಸ್ಥರಿಗೆ ಸಂಭ್ರಮವೇ ಸರಿ. ದಾಸನ ಹುಟ್ಟುಹಬ್ಬಕ್ಕೆ ಸ್ಯಾಂಡಲ್‌ವುಡ್‌ ಸ್ಟಾರ್‌ಗಳೆಲ್ಲರೂ ಇನ್ಸ್ಟಾಗ್ರಾಂನಲ್ಲಿ ವಿಶ್ ಮಾಡುತ್ತಿದ್ದಾರೆ. ಇದೀಗ ದರ್ಶನ್ ಪತ್ನಿ ವಿಜಯಲಕ್ಷ್ಮಿ ಕೂಡ ಗಂಡನ ಹುಟ್ಟುಹಬ್ಬಕ್ಕೆ ವಿಶೇಷವಾದ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.
ಪತಿ ದರ್ಶನ್‌ ಹೆಗಲ ಮೇಲೆ ವಿಜಯಲಕ್ಷ್ಮಿ ತಲೆಯಿಟ್ಟು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಫೋಟೋದಲ್ಲಿ ನಟ ದರ್ಶನ್‌ ತೂಗುದೀಪ ಚಿಕ್ಕ ಸ್ಮೈಲ್‌ ನೀಡಿದ್ದಾರೆ. ಇದಕ್ಕೆ ಅಭಿಮಾನಿಗಳೆಲ್ಲಾ, ಇದೊಂದು ಫೋಟೋ ಸಾಕು ನಮಗೆ. ಇದೇ ಬಾಸ್‌ ಬರ್ತ್‌ಡೇ ಗಿಫ್ಟ್. ಯಾರ ಕಣ್ಣು ಬೀಳದೇ ಇರಲಿ ಈ ಜೋಡಿ ಮೇಲೆ. ವಿಜಯಲಕ್ಷ್ಮಿ ಅತ್ತಿಗೆ ನೀವು ಅದೆಷ್ಟೋ ಹೆಣ್ಣುಮಕ್ಕಳಿಗೆ ಸ್ಪೂರ್ತಿ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.
ಅಪ್ಪನ ಹುಟ್ಟುಹಬ್ಬಕ್ಕೆ ಮಗ ವಿನೀಶ್ ಕೂಡ ವಿಶ್ ಮಾಡಿದ್ದಾರೆ. ತಾನು ಚಿಕ್ಕವನಿದ್ದಾಗ ಅಪ್ಪ ದರ್ಶನ್ ಜೊತೆ ತೆಗೆಸಿಕೊಂಡಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಅಭಿಮಾನಿಯ ಆಟೋ ಮೇಲೆ ದರ್ಶನ್ ಫೋಟೋ ಜೊತೆಗೆ ವಿನೀಶ್ ಅಂತ ಬರೆದಿದೆ. ಈ ಆಟೋ ಮುಂದೆ ನಿಂತು ದರ್ಶನ್ ಮತ್ತು ಅವರ ಮಗ ವಿನೀಶ್ ಪೋಸ್ ನೀಡಿದ್ದರು. ಈ ಫೋಟೋವನ್ನು ಶೇರ್ ಮಾಡಿ, ಹ್ಯಾಪಿ ಬರ್ತ್‌ಡೇ ಅಪ್ಪ. ಐ ಲವ್ ಯೂ. ನೀವು ಎಂದಿಗೂ ನನ್ನ ಬೆಸ್ಟ್ ಫ್ರೆಂಡ್" ಅಂತ ವಿನೀಶ್ ಕ್ಯಾಪ್ಶನ್ ಬರೆದುಕೊಂಡಿದ್ದಾರೆ. ಈ ಫೋಟೋಗೆ ಅಭಿಮಾನಿಗಳು ಭಾವುಕರಾಗಿ ಬಗೆಬಗೆಯ ಕಮೆಂಟ್‌ಗಳನ್ನು ಹಾಕಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.