ಸ್ಪಂದನಾ ಫೋಟೋ ಮುಂದೆ ಮಗನ ಬತ್೯ಡೇ ಆಚರಿಸಿದ ವಿಜಯ ರಾಘವೇಂದ್ರ, ನಿಜಕ್ಕೂ ಮನಕಲಕುವ ದೃಶ್ಯ
ಬದುಕು ಜಟಕಾ ಬಂಡಿ ಅನ್ನುತ್ತಾರೆ ವಿಧಿ ಅದರ ಸಾಹೇಬ
ವಿಧಿ ಯಾರ ಬಾಳಲ್ಲಿ ಹೇಗೆ ಕಣ್ಣ ಮುಚ್ಚಾಲೆ ಆಟ ಆಡುತ್ತೆ ಅಂತ ಊಹಿಸೋದು ಕಷ್ಟ. ಇವಗಿದ್ದೋರು ಇನ್ನೊಂದು ಕ್ಷಣಕ್ಕೆ ಇರ್ತಾರ ಅನ್ನೋದನ್ನ ನಂಬೋಕು ಕೂಡ ಕಷ್ಟವಾಗುವಂತೆ ವಿಧಿ ಸಾವಿನ ಆಟ ಆಡಿ ಎಲ್ಲವನ್ನ ಮುಗಿಸಿಬಿಡುತ್ತದೆ. ಹೌದು ಸ್ನೇಹಿತೆಯರ ಜೊತೆ ಬ್ಯಾಂಕಾಕ್ಗೆ ಪ್ರವಾಸಕ್ಕೆ ತೆರಳಿದ್ದ ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಆಗಸ್ಟ್ 6ರಂದು ನಿಧನ ಹೊಂದಿದ್ದರು.
ಹೌದು ವಿಜಯ್ ರಾಘವೇಂದ್ರ ಜೀವನವೇ ಮಡದಿ ಆಗಿದ್ರು. ಪತ್ನಿ ಇಲ್ಲದೆ ಯಾವ ಕೆಲ್ಸವು ಮಾಡದೆ ಇದ್ದ ರಾಘು ಗೆ ಆ ಒಂದು ದಿನ ಬರಸಿಡಿಲಿಂನಂತೆ ಸ್ಪಂದನ ಸಾವು ಆಕಾಶವೇ ಕಳಚಿ ಬಿದ್ದಂತಾಯಿತು. ಅಂದಿನಿಂದ ರಾಘುಗೆ ಜೀವನವೇ ಸಾಕು ಅನ್ನೋ ನಿರಾಸಕ್ತಿ ಮೂಡುತ್ತೆ. ಆದರೆ ಮಗ ಶೌರ್ಯನಿಗಾಗಿ ಎಲ್ಲವನ್ನು ಸಹಿಸಿಕೊಂಡು ರಘು ಇಂದಿಗೂ ಕೂಡ ಮಗನ ಮುಂದೆ ಖುಷಿ ಖುಷಿಯಾಗಿಯೇ ಜೀವನವನ್ನು ನಡೆಸುತ್ತಿದ್ದಾರೆ. ಆದ್ರೆ ಮಡದಿಯ ಸಾವಿನ ನೋವು ಯಂತವರನ್ನಾದರೂ ಕೂಡ ಬಾಧಿಸದೆ ಇರೋದಿಲ್ಲ ಅನ್ನೋದಕ್ಕೆ ರಾಘು ಸಂದರ್ಶನ ಒಂದರಲ್ಲಿ ಹಾಕಿದ ಕಣ್ಣೀರೆ ಸಾಕ್ಷಿ.
ಹೌದು ಮೊನ್ನೆ ಅಷ್ಟೇ ರಾಘು ತಮ್ಮ ಮುಂದಿನ ಸಿನಿಮಾದ ಪ್ರಮೋಷನ್ಗಾಗಿ ಕಾರ್ಯಕ್ರಮ ಒಂದರಲ್ಲಿ ಭಾಗಿಯಾಗಿದ್ದರು ಆ ಕಾರ್ಯಕ್ರಮದಲ್ಲೂ ಕೂಡ ಮಡದಿಯನ್ನು ನೆನೆಸಿಕೊಂಡು ಅತ್ತಿದ್ರು ಅದಾದ ನಂತರ ಒಂದೊಂದೇ ವಾಹಿನಿಯ ಸಂದರ್ಶನದಲ್ಲಿ ರಾಘು ಭಾಗಿಯಾಗ್ತಿದ್ರು. ಹೀಗೆ ಒಂದು ವಾಹಿನಿಯ ಸಂದರ್ಶನದಲ್ಲಿ ರಾಘು ಮಡದಿಯ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ. ಮಗನ ಹುಟ್ಟಹಬ್ಬದ ಸಮಯದಲ್ಲಿ ಸ್ಪಂದನ ನೆನಪಾದಳು ಅಂದಿದ್ದಾರೆ.
ಇತ್ತೀಚಿಗಷ್ಟೇ ಮಗ ಶೌರ್ಯ ನ ಹುಟ್ಟು ಹಬ್ಬವಿತ್ತು. ಸ್ಪಂದನಾ ಫೋಟೋ ಮುಂದೆ ನಿಲ್ಲಿಸಿ ಕೇಕ್ ಕಟ್ ಮಾಡಿಸಿದ ವಿಜಯ್ ರಾಘವೇಂದ್ರ ಅವರು ಅವನು ಮನೆಗೆ ಬಂದು ಅಮ್ಮಾ ಎಂದು ಕೂಗಿದಾಗ ಸಂಕಟ ವಾಗುತ್ತದೆ. ಅಲ್ಲಿಂದಲೇ ನೋಡಿ ಸ್ಪಂದನಾ ನಮ್ಮನ್ನು ಹರಸುತ್ತಾಳೆ ಎಂದು ಬೇಸರದಲ್ಲಿ ನುಡಿದಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.