ಗೀತಾ ಜೊತೆ ಪ್ರೀತಿಸಿ ಮತ್ತೊಂದು ಹುಡುಗಿಯನ್ನು ಮದುವೆಯಾದ ವಿಜಿ; ಸಿನಿ ದಿಗ್ಗಜರಿಂದ ಶುಭ ಹಾರೈಕೆ

 | 
Hu

ಸಕತ್ ಹೈಪ್ ಕ್ರಿಯೇಟ್ ಮಾಡಿದ್ದ ಗೀತಾ ಸೀರಿಯಲ್ ವೈಂಡಪ್ ಆಗಿ ತುಂಬಾ ದಿನ ಆಯ್ತು. ಒಂದು ಸೀರಿಯಲ್ ಮುಗಿದ ಮೇಲೆ ಇನ್ನೊಂದು ಕಥೆ ಶುರುವಾಗತ್ತೆ. ಆ ನಂತರ ನಿಧಾನವಾಗಿ ಜನರು ಆ ಸೀರಿಯಲ್ ಬಗ್ಗೆ ಮಾತನಾಡೋದನ್ನ ಬಿಟ್ಟು ಬಿಡ್ತಾರೆ. 

ಹಾಗಂತಾ ಸೀರಿಯಲ್ ನಟ-ನಟಿಯರನ್ನಲ್ಲಾ. ನಿಮಗಾಗಿ ಗೀತಾ ಸೀರಿಯಲ್‌ನಲ್ಲಿ ನಟಿಸಿದ್ದ ನಟನ ಕಡೆಯಿಂದ ಒಂದು ಗುಡ್‌ ನ್ಯೂಸ್‌ ಇದೆ. ಒಬ್ಬ ನಟ ಹಾಗೂ ನಟಿಯರು ಜನರ ಮನಸ್ಸು ಗೆಲ್ಲೋದು ನಿಜಕ್ಕೂ ಸುಲಭವಲ್ಲ. ಅದು ವರ್ಷಾನುಗಟ್ಟಲೆ ರಂಜಿಸೋದಂತೂ ಸುಲಭವಾದ ಮಾತು ಅಲ್ಲವೇ ಅಲ್ಲ. ಗೀತಾ ಸೀರಿಯಲ್‌ ಹಲವು ವರ್ಷಗಳ ಕಾಲ ವೀಕ್ಷಕರನ್ನು ರಂಜಿಸುತ್ತ ಬಂದಿದೆ.

ಈ ಸೀರಿಯಲ್‌ನಲ್ಲಿ ನಟಿಸಿದ್ದ ಹೀರೋ ವಿಜಯ್‌ ಅಲಿಯಾಸ್​ ಧನುಷ್ ಗೌಡ ಅವರ ರಿಯಲ್ ಬಗ್ಗೆ ಚರ್ಚೆಯಾಗುತ್ತಿದೆ. ನಟ ಧನುಷ್ ಗೌಡ ಅಭಿಮಾನಿಗಳಿಗೆ ನಿಶ್ಚಿತಾರ್ಥ ಮಾಡಿಕೊಂಡಿರೋ ವಿಚಾರ ಗೊತ್ತಿದೆ. ಖುಷಿ ವಿಚಾರ ಏನಂದ್ರೆ, ನಿನ್ನೆ ಧನುಷ್ ಗೌಡ ಮದುವೆ ನಡೆದಿದೆ. ಗುರುವಾರ ಆರತಕ್ಷತೆ ಇದ್ದು, ಶುಕ್ರವಾರ ಧನುಷ್ ಗೌಡ ಮತ್ತು ಸಂಜನಾ ಗೌಡ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಹೌದು, ಬೆಂಗಳೂರಿನಲ್ಲಿ ಈ ನಟ ದನುಷ್​ ಮದುವೆ ನಡೆಯುತ್ತಿದೆ. ಸೀರಿಯಲ್‌ ಇಂಡಸ್ಟ್ರಿಯ ಬಹುತೇಕರು ಇವರ ಮದುವೆಗೆ ಬರುವುದು ಖಚಿತ. ಈ ಮದುವೆಯಲ್ಲಿ ಗೀತಾ ಸೀರಿಯಲ್ ತಂಡದವರು ರೀ-ಯೂನಿಯನ್ ಆಗುತ್ತಿದ್ದಾರೆ. ನಟ ಧನುಷ್‌ ತಮ್ಮ ಬಹುಕಾಲದ ಗೆಳತಿ ಸಂಜನಾ ಗೌಡ ಜೊತೆ ಸಪ್ತಪದಿ ತುಳಿದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.