'ತೌಬಾ ತೌಬಾ' ಬಾಲಿವುಡ್ ಹಾಡಿಗೆ ಹಳ್ಳಿ ಮಹಿಳೆಯ ಭರ್ಜರಿ ‌ಡ್ಯಾ ನ್ಸ್

 | 
Y

ಈಗ ಎಲ್ಲಿ ನೋಡಿದ್ರೂ ತೌಬಾ ತೌಬಾ ಹಾಡು ಕೇಳ ಸಿಗುತ್ತದೆ. ರೀಲ್ಸ್ ಮಾಡೋರಂತೂ ಹುಕ್ ಸ್ಟೆಪ್ ಹಾಕಿ ದಿನಕ್ಕೊಂದು ರೀಲ್ಸ್ ಮಾಡ್ತಿದ್ದಾರೆ. ಹೌದು ವಿಕ್ಕಿ ಕೌಶಲ್ ಅವರು ‘ಬ್ಯಾಡ್ ನ್ಯೂಸ್’ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಸಿನಿಮಾ ಅಂದುಕೊಂಡ ಮಟ್ಟದ ವಿಮರ್ಶೆ ಪಡೆದಿಲ್ಲ. ಸಿನಿಮಾದ ಒಟ್ಟೂ ಗಳಿಕೆ 29.55 ಕೋಟಿ ರೂಪಾಯಿ ಆಗಿದೆ. ಅಂದರೆ ಸರಿ ಸುಮಾರು 30 ಕೋಟಿ ರೂಪಾಯಿ ಚಿತ್ರ ಗಳಿಕೆ ಮಾಡಿದಂತೆ ಆಗಿದೆ. 

ಆದರೆ ಸಿನಿಮಾ ಬಿಡುಗಡೆಗೂ ಮುಂಚೆ ಹೆಚ್ಚು ಫೇಮಸ್‌ ಆಗಿದು ʻತೌಬಾ ತೌಬಾʼ ಸಾಂಗ್.‌ ಹಾಡಿನ ವಿಡಿಯೊ ಬಿಡುಗಡೆಯಾದ ಕ್ಷಣದಿಂದ ರೀಲ್ಸ್ ಹಾಗೂ ಇನ್ನಿತರ ಕಾರಣಕ್ಕೆ ಜನಪ್ರಿಯವಾಗುತ್ತಿದೆ. ಪಂಜಾಬಿ ಸ್ಟ್ರೈಲ್​ನಲ್ಲಿರುವ ಇದರ ಡ್ಯಾನ್ಸ್ ಆನ್‍ಲೈನ್‍ನಲ್ಲಿ ಬಿರುಗಾಳಿ ಎಬ್ಬಿಸಿದೆ . ಹಾಗಾಗಿ ರೀಲ್ಸ್‌ ಪ್ರಿಯರು ಈ ಡ್ಯಾನ್ಸ್ ಅನ್ನು ಮರುಸೃಷ್ಟಿಸಲು ಪ್ರಯತ್ನಿಸಿದ್ದಾರೆ.  ಇದೀಗ ಸ್ಲಂನಲ್ಲಿ ವಾಸಿಸುವ ಮಹಿಳೆಯೊಬ್ಬರು ಮಕ್ಕಳೊಂದಿಗೆ ತೌಬಾ ತೌಬಾ ಸ್ಟೆಪ್ಸ್‌ ಹಾಕಿದ್ದಾರೆ. ಇನ್ನು ಈ ವಿಡಿಯೊಗೆ ವಿಕ್ಕಿ ಕೌಶಲ್‌ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

https://youtube.com/shorts/il-Tu12jy-E?si=qQ1Y1IfoDhxoOuXA

ಪಂಜಾಬಿ ಸ್ಟ್ರೈಲ್​ನಲ್ಲಿರುವ ಇದರ ಡ್ಯಾನ್ಸ್ ಆನ್‍ಲೈನ್‍ನಲ್ಲಿ ಬಿರುಗಾಳಿ ಎಬ್ಬಿಸಿದೆ. ಇದೀಗ ರೂಪಾಲಿ ಸಿಂಗ್ ಎಂಬ ಮಹಿಳೆ ತೌಬಾ ತೌಬಾಗೆ ಸಖತ್‌ ಸ್ಟೆಪ್ಸ್‌ ಹಾಕಿದ್ದಾರೆ. ಹಳದಿ ಮುದ್ರಿತ ಸೀರೆಯನ್ನು ಧರಿಸಿ ಮನೆಯ ಮುಂದೆ ಮಕ್ಕಳ ಜತೆ ಡ್ಯಾನ್ಸ್‌ ಮಾಡಿದ್ದಾರೆ. ಮಾತ್ರವಲ್ಲ ಮಹಿಳೆಯ ಸ್ಟೆಪ್ಸ್‌ಗೆ ಸ್ವತಃ ವಿಕ್ಕಿ ಕೌಶಲ್ ಫಿದಾ ಆಗಿ. ವಾವ್‌ಎಂದು ಕಮೆಂಟ್‌ ಮಾಡಿದ್ದಾರೆ.

ಅಷ್ಟಕ್ಕೂ ಈ ಪೋಸ್ಟ್ ಅನ್ನು ಹಂಚಿಕೊಂಡಾಗಿನಿಂದ, ಇದಕ್ಕೆ ಸಾವಿರಾರು ವೀಕ್ಷಣೆಗಳು ಮತ್ತು ಲೈಕ್‍ಗಳು ಬಂದಿದೆ. ಅಲ್ಲದೇ ಇದರ ವೀಕ್ಷಕರ ಸಂಖ್ಯೆಗಳು ಇನ್ನೂ ವೇಗವಾಗಿ ಹೆಚ್ಚುತ್ತಿವೆ. ಈ ವೈರಲ್ ವಿಡಿಯೊಗೆ ಹಲವರು ಕಾಮೆಂಟ್ ಕೂಡ ಮಾಡಿದ್ದಾರೆ. ಪೋಸ್ಟ್‌ನ ಕಾಮೆಂಟ್‍ಗಳ ವಿಭಾಗದಲ್ಲಿ ಅನೇಕ ಬಳಕೆದಾರರು ಹಾರ್ಟ್ ಮತ್ತು ಫಯರ್ ಎಮೋಜಿಗಳೊಂದಿಗೆ ಪ್ರತಿಕ್ರಿಯಿಸಿದ್ದಾರೆ.  (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.