ವಿನಯ್ ಹಾಗೂ ರಜತ್ ಗೆ ಸರಿಯಾಗಿ ಲಾಠಿ ರುಚಿ ತೋರಿಸಿದ ಅಧಿಕಾರಿಗಳು, ಫ್ಯಾನ್ಸ್ ಮುಂದೆ ಕಂಗಾಲು
Mar 30, 2025, 11:16 IST
|

ರಿಲೀಸ್ ಬಳಿಕ ವಿನಯ್ ಗೌಡ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಶೇರ್ ಮಾಡಿಕೊಂಡು ಮಹತ್ವದ ವಿಚಾರಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.ವಿಡಿಯೋದಲ್ಲಿ ಸುದೀರ್ಘವಾಗಿ ಮಾತನಾಡಿರುವ ವಿನಯ್, ಕರ್ನಾಟಕದ ಪ್ರತಿಯೊಬ್ಬರಿಗೂ ನನ್ನ ಕಡೆಯಿಂದ ಕ್ಷಮೆ ಕೇಳುತ್ತೇನೆ. ದಯವಿಟ್ಟು ನನ್ನನ್ನು ಕ್ಷಮಿಸಿಬಿಡಿ. ಕಳೆದ ನಾಲ್ಕು ದಿನಗಳಿಂದ ನೀವು ಟಿವಿ, ಯೂಟ್ಯೂಬ್‌ಗಳಲ್ಲಿ ನೋಡಿರಬಹುದು. ಅಲ್ಲಿ ಒಂದು ಮಚ್ಚಿನ ಕಥೆ ನಡೀತಿದೆ. ಅದಕ್ಕಾಗಿ ನಾನು ಕ್ಷಮೆ ಕೇಳಬೇಕು. ವಿಶೇಷವಾಗಿ ನನ್ನ ಅಭಿಮಾನಿಗಳಿಗೆ, ನನ್ನ ಕುಟುಂಬಕ್ಕೆ ಪ್ರತಿಯೊಬ್ಬರಿಗೂ ಈ ವಿಡಿಯೋ ಮೂಲಕ ಸಾರಿ ಕೇಳುತ್ತಿದ್ದೇನೆ ಎಂದಿದ್ದಾರೆ.
ಮೊದಲನೆಯದಾಗಿ ನನ್ನಿಂದ ನನ್ನ ಫ್ಯಾಮಿಲಿಗೆ ತೊಂದರೆ ಆಗಿದೆ. ನನ್ನ ಹೆಂಡತಿ, ಮಗನಿಗೆ ನೋವಾಗಿದೆ. ನನ್ನ ಸ್ನೇಹಿತರಿಗೂ ತುಂಬಾ ತೊಂದರೆಯಾಗಿದೆ. ಅವರೆಲ್ಲ ಹಗಲು ರಾತ್ರಿ ಎನ್ನದೆ ನನಗಾಗಿ ಪೊಲೀಸ್ ಸ್ಟೇಷನ್ ಬಳಿ, ಸೆಂಟ್ರಲ್ ಜೈಲು ಹತ್ತಿರ ನಿಂತಿದ್ದರು. ನಮಗಾಗಿ ಕಾಯುತ್ತಾ ತುಂಬಾ ಹೆಲ್ಪ್ ಮಾಡಿದ್ದಾರೆ. ಈ ವೇಳೆ ನಮ್ಮ ಅಕ್ಕ ಅಪರ್ಣ ಹಾಗೂ ಬಾವ ಕೂಡ ತುಂಬಾ ಓಡಾಡಿದ್ದಾರೆ. ಹಾಗೆಯೇ ನನ್ನ ಪ್ರೀತಿಯ ಮಾಧ್ಯಮಮಿತ್ರರಿಗೂ ನಾನು ಕ್ಷಮೆ ಕೇಳುತ್ತೇನೆ ಎಂದು ವಿನಯ್ ವಿಡಿಯೋದಲ್ಲಿ ತಿಳಿಸಿದ್ದಾರೆ.
ನನ್ನಿಂದ ತಪ್ಪಾಗಿ, ಮಾಡಬಾರದ್ದನ್ನ ಮಾಡಿದ್ದೇನೆ, ಮಚ್ಚು ಹಿಡಿದುಕೊಂಡು ಮಾಡಿರುವ ವಿಡಿಯೋದಿಂದ ಇಷ್ಟೆಲ್ಲ ತೊಂದರೆ ಆಯ್ತು. ನನಗೆ ನಿಜವಾಗಿಯೂ ಈ ಒಂದು ವಿಷಯ ಇಷ್ಟು ದೊಡ್ಡದಾಗಿ ಬೆಳೆಯುತ್ತೆ ಅಂದುಕೊಂಡಿರಲಿಲ್ಲ. ಇದರಲ್ಲೂ ನನ್ನದೂ ತಪ್ಪಿದೆ, ಇಲ್ಲ ಅಂತ ಹೇಳ್ತಿಲ್ಲ. ಏಕೆಂದರೆ ನನ್ನ ಎಚ್ಚರಿಕೆಯಲ್ಲಿ ನಾನು ಇರಬೇಕಿತ್ತು.
ನನ್ನ ಫಾಲೋವರ್ಸ್‌ಗೆ ಇಂತಹ ಮಾಹಿತಿಯನ್ನ ನಾನು ಕೊಡಬಾರದಿತ್ತು. ಇದಕ್ಕಾಗಿ ದಯವಿಟ್ಟು ಕ್ಷಮಿಸಿ, ನೀವೆಲ್ಲ ನನಗೆ ಸಾಕಷ್ಟು ಸಪೋರ್ಟ್ ಕೂಡ ಮಾಡಿದ್ದೀರಿ. ನೀವು ನಿಮ್ಮ ಕೆಲಸ ಮಾಡಿದ್ದೀರಿ, ನನಗೆ ಏನೂ ಬೇಜಾರಿಲ್ಲ ಎಂದು ವಿನಯ್ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023