ಡ್ರೋನ್ ಪ್ರತಾಪ್ ಮುಖ ನೋಡಿ ರೊಚ್ಚಿಗೆದ್ದ ವಿನಯ್, ಇಷ್ಟು ಅವಮಾನ ಯಾಕೆ ಎಂದ ನೆಟ್ಟಿಗರು

 | 
ರುು

ಬಿಗ್ ಬಾಸ್ ಕನ್ನಡ 10 ಕಾರ್ಯಕ್ರಮದಲ್ಲಿ ಅದ್ಯಾಕೋ ವಿನಯ್ ಗೌಡ ಹಾಗೂ ಡ್ರೋನ್ ಪ್ರತಾಪ್ ಮಧ್ಯೆ ಎಲ್ಲವೂ ಸರಿ ಇಲ್ಲ. ಡ್ರೋನ್ ಪ್ರತಾಪ್ ಕಂಡ್ರೆ ಸಾಕು ವಿನಯ್ ಗೌಡ ಉರಿದುಬೀಳ್ತಿದ್ದಾರೆ. ನಿನ್ನೆಯ ಸಂಚಿಕೆಯಲ್ಲೂ ಡ್ರೋನ್ ಪ್ರತಾಪ್ ಹಾಗೂ ವಿನಯ್ ಗೌಡ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಡ್ರೋನ್ ಪ್ರತಾಪ್‌ಗೆ ಏಯ್ ತಿಕ್ಲಾ.. ಒಂದ್ಸಲಿ ತಲೆ ಚೆಕ್ ಮಾಡಿಸ್ಕೋ ಎಂದಿದ್ದಾರೆ ವಿನಯ್. 

ಇದನ್ನೆಲ್ಲಾ ನೋಡಿದ ವೀಕ್ಷಕರು ವಿನಯ್‌ಗೆ ವಿನಯವೇ ಇಲ್ವಾ? ಎಂದು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ. ನಾಲ್ಕನೇ ವಾರದ ನಾಮಿನೇಷನ್ ಟಾಸ್ಕ್‌ ಅನ್ನು ವಿಭಿನ್ನವಾಗಿ ಬಿಗ್ ಬಾಸ್ ನಡೆಸುತ್ತಿದ್ದಾರೆ. ಇದರ ಅನುಸಾರ, ಎಲ್ಲರಿಗೂ ನಾಮಿನೇಟ್ ಮಾಡುವ ಅಧಿಕಾರವನ್ನು ಬಿಗ್ ಬಾಸ್ ಕೊಟ್ಟಿಲ್ಲ. ನಾಮಿನೇಷನ್‌ ಅಧಿಕಾರ ಸಿಗಬೇಕು ಅಂದ್ರೆ ಸ್ಪರ್ಧಿಗಳು ಬಲೂನ್‌ಗಳನ್ನ ಒಡೆಯುವ ಮೂಲಕ ನಾಮಿನೇಷನ್ ಪಾಸ್‌ಗಳನ್ನು ಪಡೆಯಬೇಕಿತ್ತು. 

ಟಾಸ್ಕ್‌ನ ಮೊದಲ ಹಂತದಲ್ಲಿ ಮನೆಯ ತುಂಬೆಲ್ಲಾ ಹರಡಿದ್ದ ಬಲೂನ್‌ಗಳನ್ನು ಒಡೆದು ನಾಮಿನೇಷನ್ ಪಾಸ್‌ಗಳನ್ನು ಸ್ಪರ್ಧಿಗಳು ಹುಡುಕಬೇಕಿತ್ತು. ಹಾಗೇ, ನಾಮಿನೇಷನ್ ಪಾಸ್‌ ಸಿಕ್ಕಾಗ ಬೇರೆಯವರು ಅದನ್ನು ಕಸಿದುಕೊಳ್ಳದಂತೆ ಕಾಪಾಡಿಕೊಂಡು ತಮ್ಮ ಜೊತೆಗೆ ಇಟ್ಟುಕೊಳ್ಳಬೇಕು. ನಂತರ ಉಳಿದ ಪಾಸ್‌ಗಳನ್ನು ಮತ್ತೆ ಹುಡುಕಬೇಕು ಎಂದು ಬಿಗ್ ಬಾಸ್ ತಿಳಿಸಿದ್ದರು.
ಈ ಟಾಸ್ಕ್‌ನಲ್ಲಿ ಬಹಳ ಚುರುಕಿನಿಂದ ಆಟವಾಗಿದ್ದು ಡ್ರೋನ್ ಪ್ರತಾಪ್. 

ಹೀಗಾಗಿ, ನಾಲ್ಕೂ ಪಾಸ್‌ಗಳು ಡ್ರೋನ್ ಪ್ರತಾಪ್‌ ಕೈಗೆ ಲಭಿಸಿತು. ಬೇರೆಯವರು ಕಸಿದುಕೊಳ್ಳಬಹುದು ಅಂತ ‘ಬಿಗ್ ಬಾಸ್‌’ ಹೇಳಿದ್ರಿಂದ, 4 ರಲ್ಲಿ 3 ಪಾಸ್‌ಗಳನ್ನು ಮೈಕ್‌ನಲ್ಲಿ ಬಚ್ಚಿಟ್ಟುಕೊಂಡು, ಉಳಿದ ಒಂದನ್ನು ಜೇಬ್‌ನಲ್ಲಿ ಇಟ್ಟುಕೊಂಡಿದ್ದರು. ಆ 1 ಪಾಸ್‌ ಅನ್ನು ಕಾರ್ತಿಕ್ ಕಸಿದುಕೊಂಡರು. ಅಷ್ಟಕ್ಕೂ ಡ್ರೋನ್ ಪ್ರತಾಪ್‌ ಬಳಿ 4 ಪಾಸ್‌ಗಳಿವೆ ಅಂತ ಯಾರಿಗೂ ಗೊತ್ತಾಗಲೇ ಇಲ್ಲ. ನೀತು ಬಿಟ್ರೆ ಇನ್ಯಾರಿಗೂ ಡ್ರೋನ್ ಪ್ರತಾಪ್ ಹೇಳಲಿಲ್ಲ.

ಉಳಿದ ಸ್ಪರ್ಧಿಗಳಂತೂ ಪಾಸ್‌ಗಳನ್ನ ಹುಡುಕುವಲ್ಲಿ ಬೇಗ ಸುಸ್ತಾದರು. ಇನ್ನೂ ಬಲೂನ್‌ಗಳು ಉಳಿದಿದ್ದರೂ, ಆಟವನ್ನ ಕೈಚೆಲ್ಲಿ ಸಂಗೀತಾ ಕುಳಿತುಬಿಟ್ಟರು. ವಿನಯ್ ಕೂಡ ಹೆಚ್ಚಿನ ಗಮನ ಹರಿಸಲಿಲ್ಲ. ಪಾಸ್‌ ಇರುವ ಬಲೂನ್‌ನನ್ನು ಸಂಗೀತಾ, ವಿನಯ್ ಮತ್ತು ಸ್ನೇಹಿತ್ ಒಡೆದಿದ್ದರು. ಆದರೆ ಈ ಮೂವರೂ ಪಾಸ್‌ ಬಗ್ಗೆ ಗಮನ ಹರಿಸಲೇ ಇಲ್ಲ!

ಇಷ್ಟೆಲ್ಲ ಮಾತಾದ್ಮೇಲೂ ಸ್ವಲ್ಪ ಹೊತ್ತಿನ ಬಳಿಕ ವಿನಯ್ ಮತ್ತೆ ರೊಚ್ಚಿಗೆದ್ದರು. ಡ್ರೋನ್ ಪ್ರತಾಪ್ ಜೊತೆಗೆ ಜಗಳಕ್ಕಿಳಿದರು. ಏಯ್‌.. ನೀನು ನನ್ನ ಹತ್ತಿರ ಬಾಯಿ ಕೊಡ್ಬೇಡಾ ಮಚ್ಚಾ.. ನಿನ್ನ ತಪ್ಪು ಇಟ್ಟುಕೊಂಡು ನನ್ನತ್ರ ಬಾಯಿ ಕೊಡ್ಬೇಡ. ನೀನು ಎಲ್ರ ತರಹ ಅಂದುಕೊಳ್ಳಬೇಡ ನನ್ನನ್ನ ಎಂದು ಕೂಗಡಿದ್ದಾರೆ.
ಅದನ್ನು ಟ್ರೊಲ್ ಪೇಜ್ ಗಳಲ್ಲಿ ಹಾಕಿ ವಿನಯ್ ಅವರನ್ನು ಚೆನ್ನಾಗಿ ಟ್ರೊಲ್ ಮಾಡಲಾಗಿದೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.