ಬಾಯ್ತಪ್ಪಿ ಸಂಗೀತಾ ಕಾತಿ೯ಕ್ ಸೀಕ್ರೆಟ್ ಲವ್ ಬಗ್ಗೆ ಹೇಳಿದ ವಿನಯ್ ಗೌಡ

 | 
ಹಗದ

ಬಿಗ್​ಬಾಸ್​ ಸೀಸನ್​ 10 ಮುಗಿದು ಹಲವು ದಿನಗಳೇ ಕಳೆದಿದ್ದರೂ ಇದರ ಗುಂಗಿನಿಂದ ಫ್ಯಾನ್ಸ್​ ಹೊರಕ್ಕೆ ಬರಲಿಲ್ಲ.    ಬಿಗ್​ಬಾಸ್​ ಮನೆಯಿಂದ ಬಂದ ಸ್ಪರ್ಧಿಗಳೆಲ್ಲರೂ ಬಹುದೊಡ್ಡ ಸೆಲೆಬ್ರಿಟಿಗಳಾಗಿ ಬದಲಾಗುತ್ತಾರೆ. ಅವರನ್ನು ಒಂದಿಷ್ಟು ಜನರು ನೋಡುವ ದೃಷ್ಟಿಯೇ ಬದಲಾಗುತ್ತದೆ.   ಅದರಲ್ಲಿಯೂ   ಬಿಗ್​ಬಾಸ್ ವಿನ್ನರ್​ ಎಂದರೆ ಅವರ ರೇಂಜೇ ಬೇರೆ. ಅವರ ಅಭಿಮಾನಿಗಳು ಖುಷಿ ಪಡುವ ರೀತಿಯೇ ಬೇರೆ.  

ಅದೇ ರೀತಿ ಇದೀಗ ಬಿಗ್​ಬಾಸ್​ ಸೀಸನ್​ 10 ವಿನಯ್​ ಅವರು,  ಬಹುದೊಡ್ಡ ಸೆಲೆಬ್ರಿಟಿಯಾಗಿದ್ದಾರೆ.   ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಕೆಂಡಸಂಪಿಗೆ ಸೀರಿಯಲ್​ ಜಾತ್ರೆ ಹೊಸಪೇಟೆಯಲ್ಲಿ ನಡೆದಿದ್ದು, ಅದರಲ್ಲಿ ಬಿಗ್​ಬಾಸ್​ನ ಕೆಲವು ಸ್ಪರ್ಧಿಗಳು ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ಬಿಗ್​ಬಾಸ್​ನ ವಿನಯ್​, ಕಾರ್ತಿಕ್​, ಸಂಗೀತಾ ಶೃಂಗೇರಿ ಹಾಗೂ ಡ್ರೋನ್​ ಪ್ರತಾಪ್​ ಕಾಣಿಸಿಕೊಂಡಿದ್ದಾರೆ.  ಇದೇ ವೇದಿಕೆಯ ಮೇಲೆ ಪರ್ಫಾಮ್​ ಮಾಡಿದ್ದಾರೆ. 

ಇದೀಗ ಸೀರಿಯಲ್​ ಸಂತೆ ಮುಗಿದಿದ್ದು, ಅದರ ಬಗ್ಗೆ ಮಾಹಿತಿ ನೀಡಲು ಕೆಲವು ಬಿಗ್​ಬಾಸ್​ ಸ್ಪರ್ಧಿಗಳು ನೇರಪ್ರಸಾರದಲ್ಲಿ ಬಂದಿದ್ದಾರೆ. ಈ ಬಗ್ಗೆ ಜನರ ಜೊತೆ ಮಾತನಾಡಿದ್ದಾರೆ. ಕೆಂಡಸಂಪಿಗೆ ಸೀರಿಯಲ್​ ಜಾತ್ರೆಯ ನೇರಪ್ರಸಾರದ ಕುರಿತು ಮಾತನಾಡಲು ಬಿಗ್​ಬಾಸ್​ ಆನೆ ವಿನಯ್​ ಗೌಡ ಅವರು ನೇರಪ್ರಸಾರದಲ್ಲಿಯೇ ಬಂದು ಮಾಹಿತಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು ಕೆಲವು ಮಾತುಗಳನ್ನು ಆಡಿದ್ದಾರೆ. ಆಗ ಕಾರ್ತೀಕ್ ನನ್ನ ಗೆಳೆಯ ಸಂಗೀತಾ ಅವನ ಮದ್ಯೆ ಏನಿಲ್ಲ ಅಂದಿದ್ದಾರೆ.

ಬಿಗ್​ಬಾಸ್​ನಲ್ಲಿ ತಮಗೆ ಸಪೋರ್ಟ್​ ಮಾಡಿದ, ಎಷ್ಟೊಂದು ಪ್ರೀತಿ ಕೊಡುತ್ತಿರುವ ಜನರಿಗೆ ಅವರು ಧನ್ಯವಾದ ಸಲ್ಲಿಸಿದ್ದಾರೆ. ಕಲಾವಿದನ ಒಂದೇ ಒಂದು ಆಸೆ ಇರುವುದು ಆತ ಎಲ್ಲಿಯೇ ಹೋದರೂ ಜನರು ಗುರುತಿಸಬೇಕು, ಹೆಸರು ಗೊತ್ತಿರಬೇಕು ಎನ್ನುವುದು. ಅದೆಲ್ಲವೂ ಬಿಗ್​ಬಾಸ್​ ನನಗೆ ನೀಡಿದೆ. ಎಲ್ಲಿಯೇ ಹೋದರೂ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಹೆಸರಿನಿಂದ ಕರೆಯುತ್ತಾರೆ. 

ಇದು ತುಂಬಾ ಖುಷಿಯಾಗುತ್ತದೆ ಎಂದಿದ್ದಾರೆ ವಿನಯ್​. ಇದೇ ವೇಳೆ ಆನೇ ಆನೆ ಎನ್ನುತ್ತಲೇ ಎಲ್ಲಿಯೇ ಹೋದರೂ ಆನೆಯ ಪೆಂಡೆಂಟ್​, ಫಲಕ ಇಂಥವುಗಳನ್ನೇ ಗಿಫ್ಟ್​ ಕೊಡುವುದು ಹೆಚ್ಚಾಗಿದೆ ಎಂದಿದ್ದಾರೆ. ಹೊಸಪೇಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ 15 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಅವರ ಪ್ರೀತಿ ನೋಡಿ ತುಂಬಾ ಖುಷಿಯಾಯಿತು ಎಂದಿದ್ದಾರೆ. 

ಇದೇ ಸಂದರ್ಭದಲ್ಲಿ, ಕೆಲವೊಂದು ಮಹತ್ವದ ವಿಷಯಗಳನ್ನೂ ವಿನಯ್​ ಗೌಡ ಹೇಳಿದ್ದಾರೆ. ಅದೇನೆಂದರೆ,  ಬಿಗ್​ಬಾಸ್​ನ ಸ್ಪರ್ಧಿ ಮೈಕೆಲ್​ ಜೊತೆಗೂಡಿ ಹೊಸದೊಂದು ಕೆಫೆ ತೆರೆಯುತ್ತಿರುವುದಾಗಿ ಹೇಳಿದ್ದಾರೆ. ಮಾರ್ಚ್​ 7ನೇ ತಾರೀಖು ತಮ್ಮ ಹುಟುಹಬ್ಬವಿದ್ದು ಅಂದು ಕೆಲವೊಂದು ಘೋಷಣೆಗಳನ್ನು ಮಾಡುತ್ತಿರುವುದಾಗಿ ಹೇಳಿದ ವಿನಯ್​ ಅವರು, ಹೊಸ ಸಿನಿಮಾದ ಅನೌನ್ಸ್​ಮೆಂಟ್​ ಕೂಡ ಮಾಡುವುದಾಗಿ ಹೇಳಿದ್ದಾರೆ.

 ಇದೇ ಸಂದರ್ಭದಲ್ಲಿ ಬಿಗ್​ಬಾಸ್​ನ ಇತರ ಸ್ಪರ್ಧಿಗಳ ಬಗ್ಗೆಯೂ ವಿನಯ್​ ಮಾತನಾಡಿದ್ದಾರೆ. ವಿಶೇಷವಾಗಿ ಸ್ನೇಹಿತ್​ ಕುರಿತು ಹೇಳಿದ ವಿನಯ್​, ಸ್ನೇಹಿತ್​ ನನ್ನ ಬ್ರದರ್​ ಇದ್ದ ಹಾಗೆ. ಬೆಸ್ಟ್​ ಫ್ರೆಂಡ್​ ಕೂಡ. ತುಂಬಾ ಜೆನ್ಯೂನ್​ ಮನುಷ್ಯ,ಷ್ ತುಂಬಾ ಸ್ವೀಟ್​ ಹಾರ್ಟ್​, ತುಂಬಾ ಸಪೋರ್ಟ್​ ಮಾಡಿದ್ದಾನೆ ಎಂದಿದ್ದಾರೆ. ಹೊಸಪೇಟೆಯಲ್ಲಿ ನಡೆದ ಸೀರಿಯಲ್​ ಸಂತೆಯಲ್ಲಿ ಎರಡು ಗಂಟೆ ಡ್ಯಾನ್ಸ್ ಪ್ರಾಕ್ಟೀಸ್​ ಮಾಡಿ ಡ್ಯಾನ್ಸ್​ ಮಾಡಿದ್ದು, ಅದರ ಬಗ್ಗೆ ಕಮೆಂಟ್​ ಹಾಕುವಂತೆ ತಿಳಿಸಿದ್ದಾರೆ.


( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.