ತಮ್ಮನ ಡಿವೋರ್ಸ್ ಬೆನ್ನಲ್ಲೇ ಅಣ್ಣ ವಿನಯ್ ರಾಜ್ ಕುಮಾರ್ ಮದುವೆ ಫಿಕ್ಸ್

 | 
Us

ಸೊಸೈಟಿಯಲ್ಲಿ ಆಗಬಹುದಾದ ಸಡನ್ ಸುದ್ದಿಗಳಿಗೆ ಜನಸಾಮಾನ್ಯರು ಟಿವಿ, ನ್ಯೂಸ್ ಪೇಪರ್ ಗಳನ್ನು ನಂಬುವ ಕಾಲ ಮರೆಯಾಯ್ತು. ಅಂಗೈಲ್ಲಿರುವ ಮೊಬೈಲ್ ನಲ್ಲಿಯೇ ಎಲ್ಲ ಸುದ್ದಿಗಳು ಘಟಿಸಿದ ಕೆಲವೇ ಸೆಕೆಂಡುಗಳಲ್ಲಿ ತಲುಪಿಬಿಡುತ್ತದೆ. ಅಷ್ಟರಮಟ್ಟಿಗೆ ತಂತ್ರಜ್ಞಾನ ಬೆಳೆದು, ನೋಡುಗರೇ ನಿಬ್ಬೆರಗಾಗುವಂತೆ ಮಾಡುತ್ತಿದೆ.

ಇನ್ನು ಸೋಶಿಯಲ್ ಮೀಡಿಯಾವಂತೂ ಎಲ್ಲ ಮಾಧ್ಯಮಗಳನ್ನು ಸೈಡ್ ಗೆ ತಳ್ಳಿ ತನ್ನ ಕಬಂಧ ಬಾಹುವಿನಿಂದ ಆಕ್ರಮಿಸಿಕೊಂಡುಬಿಟ್ಟಿದೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಪ್ರಕಟವಾಗುವ ಸುದ್ದಿಗಳು, ವಿಚಾರಗಳು ಸತ್ಯವೋ, ಸುಳ್ಳೋ ಎಂಬುದನ್ನು ಅರಿಯುವಷ್ಟರಲ್ಲಿ ಎಲ್ಲರಿಗೂ ಸುದ್ದಿಗಳು ಹರಡಿ ಮತ್ತಾವುದೋ ಪ್ರಮಾದವನ್ನು ಸೃಷ್ಟಿಸಿ ಬಿಟ್ಟಿರುತ್ತದೆ. ಇದಕ್ಕೆ ದೊಡ್ಮನೆಯ ಕುಡಿ ವಿನಯ್ ರಾಜ್ ಕುಮಾರ್ ಅವರ ಮದುವೆ ಸುದ್ದಿಯೇ ಸದ್ಯದ ಸಾಕ್ಷಿ.

ಹೌದು, ಒಂದು ಕಡೆ ವಿನಯ್ ರಾಜ್ ಕುಮಾರ್ ಅವರ ತಮ್ಮ ಯುವರಾಜ್ ಕುಮಾರ್ ಅವರ ದಾಂಪತ್ಯದಲ್ಲಿ ಅಪಸ್ವರ ಎದ್ದಿದೆ. ವಿಷಯ ವಿಚ್ಚೇದನದ ಹಂತಕ್ಕೂ ತಲುಪಿದೆ. ಇನ್ನೊಂದು ಕಡೆ ವಿನಯ್ ರಾಜ್ ಕುಮಾರ್ ಸದ್ದಿಲ್ಲದೇ ಮದ್ವೆಯಾಗಿದ್ದಾರೆ ಎನ್ನುವ ಪುಕಾರು ಕೂಡ ಹರಡಿದೆ. ಇದಕ್ಕೆ ಪೂರಕವಾಗಿ ಸ್ವಾತಿಷ್ಠಾ ಕೃಷ್ಣನ್ ಮತ್ತು ವಿನಯ್ ರಾಜ್ ಕುಮಾರ್ ಮಧುಮಗ ಮತ್ತು ಮಧುಮಗಳ ಗೆಟಪ್ಪಿನಲ್ಲಿರುವ ಫೋಟೋಗಳು ವೈರಲ್ ಆಗಿವೆ. ಆದರೆ ಸತ್ಯಾಂಶವೇ ಬೇರೆ.

ನಿಮಗೆ ಗೊತ್ತಿರಲಿ, ಅಸಲಿಗೆ.. ವಿಕ್ರಂ ಚಿತ್ರದಲ್ಲಿ ಕಮಲ್ ಹಾಸನ್ ಸೊಸೆ ಪಾತ್ರವನ್ನು ನಿರ್ವಹಿಸಿ ಮನೆ ಮಾತಾದ ಸ್ವಾತಿಷ್ಠಾ ಕೃಷ್ಣನ್, ವಿನಯ್ ರಾಜ್ ಕುಮಾರ್ ಅವರ ಜೊತೆ ಒಂದು ಸರಳ ಪ್ರೇಮಕಥೆ ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದರು. ಈ ಚಿತ್ರದಲ್ಲಿನ ಮದುವೆ ಸಮಾರಂಭದ ಫೋಟೋಗಳನ್ನು, ಸ್ವಾತಿಷ್ಠಾ ಇತ್ತೀಚೆಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಒಂದು ಸರಳ ಪ್ರೇಮಕಥೆಯ ತೆರೆಯ ಹಿಂದಿನ ಕಥೆ ಎಂಬ ಸಾಲನ್ನೂ ಬರೆದಿದ್ದರು. ಈ ಚಿತ್ರದ ಗುಂಗಿನಿಂದ ಹೊರ ಬರಲು ಸಾಧ್ಯವೇ ಆಗುತ್ತಿಲ್ಲ ಎಂದು ತಮ್ಮ ಮನದ ಮಾತುಗಳನ್ನೂ ಹಂಚಿಕೊಂಡಿದ್ದರು.

ಸದ್ಯಕ್ಕೆ ವಿನಯ್ ರಾಜ್ ಕುಮಾರ್ ಮತ್ತು ಸ್ವಾತಿಷ್ಠಾ ಕೃಷ್ಣನ್ ಅವರ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಕೆಲವರಿಗೆ ಅಚ್ಚರಿಯನ್ನುಂಟು ಮಾಡಿ, ಇನ್ನೂ ಹಲವರಿಗೆ ಬೇಸರವನ್ನುಂಟು ಮಾಡಿವೆ. ಇನ್ನೂ ಮದುವೆಯ ಶುಭಾಶಯಗಳ ಮಹಾಪೂರ ಹರಿದು ಬಂದ ಬೆನ್ನಲ್ಲಿಯೇ, ಅಯ್ಯೋ. ನಾನು ನನ್ನ ಪೋಸ್ಟ್‌ನಲ್ಲಿಯೇ ಬಹಳ ಕ್ಲಿಯರ್‌ ಆಗಿ ಬರೆದಿದ್ದೇನೆ. 

ಇದು ಬಿಹೈಂಡ್‌ ದ ಸೀನ್ಸಸ್‌ ಅಂತಾ.. ಪ್ಲೀಸ್‌' ಎಂಬ ಮನವಿಯನ್ನೂ ಸ್ವಾತಿಷ್ಠಾ ಕೃಷ್ಣನ್ ಮಾಡಿಕೊಂಡಿದ್ದಾರೆ. ಹೀಗೆ ತಮಗೆ ಮದ್ವೆಯಾದ ವಿಚಾರ ವಿನಯ್ ರಾಜ್ ಕುಮಾರ್ ಅವರಿಗೆ ಗೊತ್ತಾ, ಗೊತ್ತಿಲ್ವಾ ಅನ್ನುವುದು ಸದ್ಯಕ್ಕೆ ಗೊತ್ತಿಲ್ಲ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.