ಬಿಗ್ ಬಾಸ್ ಮನೆಗೆ ಒಮ್ಮೆಲೇ ಎಂಟ್ರಿ ಕೊಟ್ಟ ವಿನಯ್ ಪತ್ನಿ, ಸಂಗೀತ ಚಳಿಬಿಡಿಸಿದ ವಿನಯ್ ಪತ್ನಿ

 | 
Hju

ಪ್ರತಿದಿನವನ್ನೂ ಬಿಗ್‌ಬಾಸ್‌ ಒಂದು ಹಾಡಿನೊಂದಿಗೆ ಶುರುಮಾಡುತ್ತಾರೆ. ಆ ಹಾಡಿಗೆ ಖುಷಿಯಿಂದ ಕುಣಿಯುತ್ತ ಸ್ಪರ್ಧಿಗಳು ಬೆಳಗನ್ನು ಬರಮಾಡಿಕೊಳ್ಳುತ್ತಾರೆ. ಇದು ವಾಡಿಕೆ. ಆದರೆ ಬಿಗ್‌ಬಾಸ್‌ ಮನೆಯಲ್ಲಿ ಈ ಬೆಳಗು ಬರೀ ಹಾಡಿನ ಬೆಳಗಾಗಿರಲಿಲ್ಲ. ಅದೇನು ಎಂಬುದು ಜಿಯೋ ಸಿನಿಮಾ ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಜಾಹೀರಾಗಿದೆ. ಬಿಗ್‌ ಬಾಸ್‌ ಮನೆಗೆ ಸ್ಪರ್ಧಿಗಳ ಕುಟುಂಬದವರ ಆಗಮನವಾಗುತ್ತಿದೆ. 

ಒಬ್ಬೊಬ್ಬರಾಗಿ ಗಪ್‌ಚುಪ್‌ ಆಗಿ ಎಂಟ್ರಿ ನೀಡುತ್ತಿದ್ದಾರೆ. ಇದೀಗ ವಿನಯ್‌ ಗೌಡ ಅವರ ಪತ್ನಿ ಅಕ್ಷತಾ ಗೌಡ ಅವರ ಆಗಮನ ಕೊಂಚ ವಿಶೇಷವಾಗಿದೆ.ಉಳಿದ ಸ್ಪರ್ಧಿಗಳಿಗಿಂತ ವಿನಯ್‌ ಗೌಡ ಅವರಿಗಂತೂ ಈ ಬೆಳಗು ತುಂಬ ವಿಶೇಷವೂ, ಸ್ಮರಣೀಯವೂ ಆಗಿದೆ. ಏಕೆಂದರೆ ಬೆಳಗಿನ ಹಾಡಿಗೆ ಮುಸುಕಿನೊಳಗೆ ಮಲಗಿದ್ದಾಗಲೇ ಅವರ ಪತ್ನಿಯ ತೋಳು ಬಂದು ಅವರನ್ನು ತಬ್ಬಿ ಎಬ್ಬಿಸಿದೆ. 

ಬೆಳಗಿನೊಟ್ಟಿಗೆ ಬಂದ ಹೆಂಡತಿಯನ್ನು ನೋಡಿ ವಿನಯ್ ಅವರ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. ಪತ್ನಿಯನ್ನು ಬರಸೆಳೆದು ಮುದ್ದಿಸಿದ್ದಾರೆ ವಿನಯ್.‌ ವಿನಯ್‌ ಮುಖವೂ ನಗುವಿನಿಂದ ಅರಳಿದೆ. ಇತ್ತ ವಿಲನ್‌ ಮುಖದಲ್ಲೀಗ ಹೀರೊ ಕಳೆ ಬಂದಿದೆ ಎಂದು ತನಿಷಾ ಛೇಡಿಸಿದ್ದಾರೆ.ಮನೆಯ ಸ್ಪರ್ಧಿಗಳನ್ನೆಲ್ಲ ಮಾತಾಡಿಸಿದ ವಿನಯ್ ಪತ್ನಿ, ಸಂಗೀತಾ ಅವರ ಬಳಿ ಪ್ರತ್ಯೇಕವಾಗಿ ಮಾತಾಡಬೇಕು ಎಂದು ಕರೆದಿದ್ದಾರೆ. 

ಹಾಗಾದರೆ ಅವರು ಸಂಗೀತಾ ಬಳಿ ಏನು ಮಾತಾಡಿದ್ದಾರೆ? ಅದಕ್ಕ ಸಂಗೀತಾ ಹೇಗೆ ಪ್ರತಿಕ್ರಿಯಿಸುತ್ತಾರೆ? ಸಂಗೀತಾ- ವಿನಯ್ ಜಗಳ ಎರಡನೇ ವಾರದಿಂದಲೇ ಶುರುವಾಗಿ ನಿರಂತರವಾಗಿ ಮುಂದುವರಿದುಕೊಂಡು ಬಂದಿದೆ. ಹಲವು ಸಲ ಇದು ಅತಿರೇಕಕ್ಕೂ ಹೋಗಿದೆ. ಈ ಬಗ್ಗೆ ವಿನಯ್‌ ಪತ್ನಿ ಮನೆಯ ಹೊರಗಡೆಯೂ ನೋವು ತೋಡಿಕೊಂಡಿದ್ದರು. 

ಈ ವಿಷಯದ ಬಗ್ಗೆ ಅವರು ಸಂಗೀತಾ ಬಳಿ ಮಾತಾಡುತ್ತಾರಾ? ವಿನಯ್ ಪತ್ನಿ ಜೊತೆಗಿನ ಮಾತುಕತೆ ಸಂಗೀತಾ ಅವರನ್ನು ಕುಗ್ಗಿಸುತ್ತದೆಯೇ? ಈ ವಾರದಲ್ಲಿ ಅನ್ಯೋನ್ಯವಾಗಿಯೇ ಇದ್ದ ವಿನಯ್-ಸಂಗೀತಾ ಮಧ್ಯೆ ಮತ್ತೆ ಬಿರುಕು ಮೂಡಲಿದೆಯೇ? ನೋಡಬೇಕಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.