ವಿನಯ್ ಕೈಗೆ ಬಿಗ್ ಬಾಸ್ ಟ್ರೋಫಿ ಸಿಗಲು ದಿನನಿತ್ಯ ದೇವರ ಧ್ಯಾನ ಮಾಡುತ್ತಿರುವ ಪತ್ನಿ

 | 
ಪೇ

ಬಿಗ್ ಬಾಸ್ ಕನ್ನಡ 10 ಶೋನಲ್ಲಿ ವಿನಯ್ ಗೌಡ ಅವರು ಪ್ರಬಲ ಸ್ಪರ್ಧಿ. ಇವರ ಆಟದ ಬಗ್ಗೆ ಪಾಸಿಟಿವ್, ನೆಗೆಟಿವ್ ಪ್ರತಿಕ್ರಿಯೆಗಳು ಎರಡೂ ಇವೆ. ವಿನಯ್ ಅವರನ್ನು ನೋಡಿದರೆ ಸಾಕ್ಷಾತ್ ಶಿವನನ್ನು ನೋಡಿದ ಹಾಗೆ ಆಗುತ್ತದೆ ಎಂದು ನಟಿ ನಿಶಿತಾ ಗೌಡ ಅವರು ಹೇಳಿ ಎಲ್ಲರ ಗಮನ ಸೆಳೆದಿದ್ದರು.

ಇದೀಗ ಈ ವರ್ಷದ ಮೊದಲ ಹಬ್ಬ ಸಂಕ್ರಾಂತಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸಿ ವಿನಯ್ ಗೌಡ ಅವರನ್ನು ಮಿಸ್ ಮಾಡಿಕೊಳ್ಳುತ್ತಿರುವ ಬಗ್ಗೆ ಮಾತಾಡಿದ್ದಾರೆ.ವಿನಯ್ ನಮ್ಮ ಮನೆಯ ಹುಡುಗ ಅಂತ ಹೇಳ್ತಿಲ್ಲ. ನಿಮಗೂ ಗೊತ್ತಿರುವ ಹಾಗೆ ವಿನಯ್ ಅವರು ನನ್ನ ಸೋದರ ಮಾವನ ಮಗ, ನನ್ನ ತಂಗಿಯ ಗಂಡ. ವಿನಯ್ ಅವರನ್ನು ಅಗ್ರೆಸ್ಸಿವ್ ಅಂತ ಹೇಳುತ್ತಾರೆ, ನನಗೆ ಆ ರೀತಿ ಅನಿಸಿಲ್ಲ. 

ಇತ್ತೀಚೆಗೆ ಟಾಸ್ಕ್‌ನಲ್ಲಿ ವಿನಯ್ ಗೌಡ ಅವರ ಕೈಗೆ ಪೆಟ್ಟಾದರೂ ಕೂಡ ಅವರು ಅದನ್ನು ಯಾರಿಗೂ ತೋರಿಸಿಕೊಳ್ಳದ ಹಾಗೆ ನಡೆದುಕೊಂಡರು. ಅದನ್ನು ಅವರು ದೊಡ್ಡ ವಿಷಯ ಮಾಡಲಿಲ್ಲ ಎಂದು ನಿಶಿತಾ ಗೌಡ ಹೇಳಿದ್ದಾರೆ. ನಾಮಿನೇಶನ್ ವಿಚಾರ ಏನೇ ಇರಲಿ ವಿನಯ್ ಅವರು ತುಂಬ ಈಸಿಯಾಗಿ ತಗೊಂಡು ಆಡ್ತಾರೆ. ಇತ್ತೀಚೆಗೆ ಸಮಾರಂಭವೊಂದಕ್ಕೆ ಹೋದಾಗ ವಿನಯ್ ಅವರನ್ನು ಶಿವ ನೋಡಿದ ಹಾಗೆ ಆಗತ್ತೆ ಅಂತ ವಯಸ್ಸಾದ ದಂಪತಿ ಹೇಳಿದ್ದರು.

ಪ್ರತಿಯೊಂದು ಸಂದರ್ಭವನ್ನು ಪ್ರಸನ್ನತೆ ಆ ಮುಖದಲ್ಲಿ ಕಾಣುತ್ತದೆ, ಕೋಪ ಬಂದಾಗ ಅಗ್ರೆಸ್ಸಿವ್ ಆಗಿ ಕಾಣುತ್ತಾರೆ. ಕೋಪ ಮಾಡಿಕೊಂಡಾಗ ಅಗ್ರೆಶನ್‌ಗೆ ಹೋಗೋದು ತಪ್ಪು ಅಂತ ಕೆಲವರು ಕಾಮೆಂಟ್ ಮಾಡುತ್ತಾರೆ. ಅದು ಅವರ ಅಭಿಪ್ರಾಯ. ಶಿವ ಹೇಗೆ ವಿಷಯವನ್ನು ಹ್ಯಾಂಡಲ್ ಮಾಡುತ್ತಾನೋ ಹಾಗೆ ವಿನಯ್ ಕೂಡ ಆಟ ಆಡುತ್ತಿದ್ದಾನೆ. ಬಿಗ್ ಬಾಸ್ ವಿಷಯದ ಬಗ್ಗೆ ತುಂಬ ಮಾತಾಡೋಕಿದೆ, ಆದರೆ ಮಾತಾಡೋಕೆ ಆಗಲ್ಲ. ವಿನಯ್ ಅವರಿಗೆ ಬೆಂಬಲ ನೀಡಿ ಗೆಲ್ಲಿಸಿ ಎಂದು ವಿನಯ್ ಗೌಡ ಪರವಾಗಿ ನಿಶಿತಾ ಗೌಡ ಅಭಿಮಾನಿಗಳಲ್ಲಿ ಕೇಳಿ ಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.