ಲೀಲಾವತಿ ಅಮ್ಮನ ಶ.ವ ನೋಡಿ ನಡು ರಸ್ತೆಯಲ್ಲೇ ಕುಸಿದು ಬಿದ್ದ ವಿನೋದ್ ರಾಜ್

 | 
Bs

ಹಿರಿಯ ನಟಿ ಲೀಲಾವತಿ ಅವರು ಇಂದು ವಯೋಸಹಜ ಆರೋಗ್ಯ ಸಮಸ್ಯೆಯಿಂದ ಸಾವನ್ನಪ್ಪಿದ್ದಾರೆ. ನೆಲಮಂಗಲದ  ಖಾಸಗಿ ಆಸ್ಪತ್ರೆಯಲ್ಲಿ  ಲೀಲಾವತಿ ಅವರು ಸಾವನ್ನಪ್ಪಿದ್ದು, ಕಳೆದ ಎರಡು ವಾರಗಳಿಂದ ಅವರ ಅರೋಗ್ಯ ಸ್ಥಿತಿ ಗಂಭೀರವಾಗಿತ್ತು. ಆದರೂ ಕೂಡ ಆಹಾರವನ್ನು ಸೇವಿಸಿ ಬದುಕುವ ಉತ್ಸಾಹ ತೋರಿದ್ದರು.

ಲೀಲಾವತಿ ಅವರ ಸಾವಿನ ಬೆನ್ನಲ್ಲೇ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ವಿನೋದ್ ರಾಜ್ ಅವರು, ಭಗವಂತ ನನ್ನನ್ನು ಕೊನೆಗೂ ಒಂಟಿ ಮಾಡಿದ್ದಾನೆ. ನನಗೆ ಏನು ಹೇಳಬೇಕು ಅಂತ ಗೊತ್ತಾಗುತ್ತಿಲ್ಲ. ವಯೋಸಹಜ ಸಮಸ್ಯೆ, ಹೃದಯ ಸ್ತಂಭನ ಆಗಿ ಕೊನೆಯುಸಿರೆಳೆದಿದ್ದಾರೆ. ಅವರು ಜೀವನದಲ್ಲಿ ತಾವು ಇರುವ ಊರಿಗೆ ಆಸ್ಪತ್ರೆ ಕಟ್ಟಿಸಿ ಸಾಧಿಸಿಬಿಟ್ಟರು ಎಂದು ಕಣ್ಣೀರು ಇಟ್ಟಿದ್ದಾರೆ.

ಲೀಲಾವತಿ ಅವರ ಇಚ್ಛೆಯಂತೆ ಅಂತ್ಯ ಸಂಸ್ಕಾರಕ್ಕೆ ಸಿದ್ದತೆ ಮಾಡಲಾಗುತ್ತದೆ. ತೋಟದ ಮನೆ ಎದುರಿನ ಖಾಲಿ ಜಾಗದಲ್ಲಿ ಲೀಲಾವತಿ ಅವರ ಆಸೆಯಂತೆ ಅರ್ಧ ಎಕರೆ ಜಾಗದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ. ವಿನೋದ್ ರಾಜ್ ಕುಮಾರ್ ಅವರ ಹೆಂಡತಿ ಮಕ್ಕಳು ಕೂಡ ಚೆನ್ನೈ ಇಂದ ಆಗಮಿಸಿದ್ದು ಎಲ್ಲರ ಮನದಲ್ಲಿ ದುಃಖ ಮಡುವುಗಟ್ಟಿದೆ.

ಲೀಲಾವತಿ ಅವರು ಇಂದು ನಿಧನರಾಗಿದ್ದು, ಈ ಬಗ್ಗೆ ಪುತ್ರ ವಿನೋದ್ ರಾಜ್ ಪ್ರತಿಕ್ರಿಯೆ ನೀಡಿದ್ದಾರೆ. ಅವರ ಸಾವು ಒಪ್ಪಿಕೊಳ್ಳೋಕೆ ಕಷ್ಟ ಆಗ್ತಿದೆ. ಕಷ್ಟಪಟ್ಟು ಬೆಳೆದಿರೋ ಜೀವ ಅದು, ನನಗೆ 56 ವರ್ಷ ಆದ್ರೂ ಅವರ ಸಾವು ಅರಗಿಸಿಕೊಳ್ಳೋಕೆ ಆಗ್ತಿಲ್ಲ.ಅಮ್ಮನಿಗೆ ಆಸ್ಪತ್ರೆ ಕಟ್ಟಿಸಬೇಕು ಅಂತ ಆಸೆಯಿತ್ತು. ಅಲ್ಲಿಯವರೆಗೂ ಬದುಕಿದ್ದಾರೆ. 

ನಾಲ್ಕು ಸಲ ಅಮ್ಮ ವಿನೋದ್ ಅಂತ ಹೇಳಿದ್ದಾರೆ. ನಾನು ಬರೋವಷ್ಟರಲ್ಲಿ ಅವರಿಲ್ಲ. ಅವರು ಅಲ್ಲಿ ಮಲ್ಕೊಂಡಿದ್ದಾರೆ. ಮತ್ತೆಂದೂ ಅವರನ್ನ ನೋಡೋಕೆ ಆಗಲ್ಲ. ಕಡೆಯದಾಗಿ ಅವರು ನನ್ನ ಹೆಸರು ಹೇಳಿದ್ದಾರೆ. ನಾನು ಇದ್ದಿದ್ರೆ ಅವರು ಹೋಗುತ್ತಿರಲಿಲ್ಲ. ಅಮ್ಮನ ಜೀವ ಉಳಿಯುತ್ತಿತ್ತು ಎಂದು ವಿನೋದ್ ರಾಜ್ ಭಾವುಕರಾಗಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.