ಗೆದ್ದ ಖುಷಿಯಲ್ಲಿ ಕಿರುಚಾಡಿದ ವಿರಾಟ್ 'ಬಡ್ಡಿ ಮಗನೇ ನಿಂದು ಜಾಸ್ತಿಆಯ್ತು ಎಂದ ಅನುಷ್ಕಾ;
ಐಪಿಎಲ್ 2024ರ ಪ್ಲೇಆಫ್‌ಗಳ ನಾಲ್ಕು ತಂಡಗಳನ್ನು ನಿರ್ಧರಿಸಲಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಕೊನೆಯ ಗುಂಪಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಸೋಲಿಸುವ ಮೂಲಕ ಪ್ಲೇಆಫ್ ಟಿಕೆಟ್ ಕಾಯ್ದಿರಿಸಿದೆ.ಪ್ಲೇಆಫ್ ತಲುಪಲು, ಆರ್‌ಸಿಬಿ ಸಿಎಸ್ಕೆ ವಿರುದ್ಧದ ಪಂದ್ಯವನ್ನು ಕನಿಷ್ಠ 18 ರನ್ ಅಥವಾ 11 ಎಸೆತಗಳಿಂದ ಗೆಲ್ಲಬೇಕಿತ್ತು.
ಈ ಪಂದ್ಯವನ್ನು ಆರ್‌ಸಿಬಿ 27 ರನ್‌ಗಳಿಂದ ಗೆದ್ದುಕೊಂಡಿತು. ಮೊದಲ 7 ಪಂದ್ಯಗಳ ಬಳಿಕ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದ ಆರ್‌ಸಿಬಿ ಈರೀತಿ ಕಮ್ಬ್ಯಾಕ್ ಮಾಡುತ್ತೆ ಎಂದು ಯಾರೂ ಊಹಿಸಿರಲಿಲ್ಲ. ಪ್ಲೇಆಫ್ ತಲುಪಿದ ಸಂದರ್ಭ ತಂಡದ ಆಟಗಾರರು ಅದ್ಧೂರಿಯಾಗಿ ಸಂಭ್ರಮಿಸಿದರು. ಅದರಲ್ಲೂ ವಿರಾಟ್ ಕೊಹ್ಲಿ ಭಾವುಕರಾದರು.
ಗೆದ್ದ ತಕ್ಷಣ ವಿರಾಟ್ ಮೈದಾನದಲ್ಲಿ ಓಡಿ ಬಂದು ಆಟಗಾರರನ್ನು ತಬ್ಬಿಕೊಂಡು ಸಂಭ್ರಮಿಸಿದರು. ಬಳಿಕ ಒಬ್ಬರೇ ನಿಂತು ಕ್ಯಾಪ್ ತೆಗೆದು ಅಳುವುದು ಕಂಡುಬಂತು. ಇವರನ್ನು ನೋಡಿ ಅತ್ತ ಪ್ರೇಕ್ಷಕ ಗ್ಯಾಲರಿಯಲ್ಲಿ ಕೂತಿದ್ದ ಅನುಷ್ಕಾ ಶರ್ಮಾ ಕೂಡ ಕಣ್ಣೀರು ಹಾಕಿದರು. ಇಬ್ಬರ ಭಾವನೆಗಳೂ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇನ್ನು ಮಹೇಂದ್ರ ಸಿಂಗ್ ದೋನಿ ಮಗಳು ಝೀವಾ ಕೂಡ RCB ಗೆ ಸಪೋರ್ಟ್ ಮಾಡಿ ಗೆಲ್ಲಲು ಚೀಯರ್ಸ್ ಮಾಡಿದ್ದಾಳೆ. ಆರ್‌ಸಿಬಿ.. ಆರ್‌ಸಿಬಿ.. ಆರ್‌ಸಿಬಿ.. ಹೀಗೆ ಎಲ್ಲೆಲ್ಲೂ ಆರ್‌ಸಿಬಿ ತಂಡ ಟ್ರೆಂಡ್ ಹುಟ್ಟುಹಾಕಿ ಹವಾ ಎಬ್ಬಿಸಿದೆ. ನಮ್ಮ ಬೆಂಗಳೂರು ತಂಡವಾದ ಆರ್‌ಸಿಬಿ ಗೆದ್ದೇ ಗೆಲ್ಲುತ್ತೆ, ಉಪಾಂತ್ಯಕ್ಕೆ ತಲುಪಲಿದೆ ಅಂತಾ ಫ್ಯಾನ್ಸ್ ಕಾಯುತ್ತಿದ್ದಾರೆ. ಇದೇ ಸಮಯದಲ್ಲಿ ಆರ್‌ಸಿಬಿ ತಂಡ ಸಕಲ ಸಿದ್ಧತೆ ಆರಂಭಿಸಿದೆ. ಹಾಗೆ ಪಂದ್ಯ ಗೆದ್ದು ಗೆಲುವಿನ ನಗೆ ಬೀರಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.