ಶೆಟ್ಟಿಯವರಿಗೆ ಅಷ್ಟೇ ಸಿನಿಮಾ ಮಾಡ್ತೀವಿ; ರಿಷಬ್ ಶೆಟ್ಟಿ ವಾ ರ್ನಿಂಗ್
ನಿನ್ನೆಯಷ್ಟೇ ವಸಿಷ್ಠ ಸಿಂಹ ನಾಯಕರಾಗಿರುವ ಲವ್ ಲೀ ಚಿತ್ರದ ಟ್ರೇಲರ್ ಹಾಗೂ ಪ್ರೀ ರಿಲೀಸ್ ಇವೆಂಟ್ ನಡೆದಿದ್ದು ನಟ ರಿಷಭ್ ಶೆಟ್ಟಿ ಚಿತ್ರದ ಟ್ರೇಲರ್ ಬಿಡುಗಡೆ ಮಾಡುವ ಮೂಲಕ ಚಿತ್ರಕ್ಕೆ ಸಾಥ್ ನೀಡಿದ್ದಾರೆ. ಇನ್ನು ಆ ಸಂದರ್ಭದಲ್ಲಿ ಮಾತನಾಡಿದ ಅವರು ಕಾಂತಾರ-1 ಕಥೆ ಬರೆದು ಮುಗಿಸಲು ಒಂದು ವರ್ಷ ಬೇಕಾಯಿತು. ಪ್ರತಿಯೊಂದು ಅಂಶವನ್ನು ಎಷ್ಟು ಚೆಂದ ಮಾಡಬಹುದು ಎಂದು ತಲೆಕೆಡಿಸಿಕೊಂಡು ಅದಕ್ಕೆ ಸಮಯ ಕೊಡಲೇ ಬೇಕು.
ಕಥೆಯ ಕುರಿತಾದ ರಿಸರ್ಚ್, ನಿರೂಪಣೆ, ತಂಡಕ್ಕೆ, ನಿರ್ಮಾಣ ಸಂಸ್ಥೆಗೆ ಕಥೆಯ ನರೇಶನ್, ಡಿಸ್ಕಶನ್, ಸೆಟ್ ವರ್ಕ್.ಈ ತರಹದ ಅಂಶಗಳಿಗೆ ಸಮಯಬೇಕು. ಜೊತೆಗೆ ಪಾತ್ರಕ್ಕೆ ಬೇಕಾದ ತಯಾರಿ, ಲುಕ್ಸ್, ಕಾಸ್ಟ್ಯೂಮ್.ಎಲ್ಲವೂ ಒಂದೊಂದು ಫ್ಯಾಕ್ಟರಿ ತರಹ ನಡೆಯುತ್ತಿದೆ. ಎಷ್ಟು ಬಾರಿ ನನಗೂ ಅನಿಸಿದೆ, ಒಂದು ಸಿನಿಮಾ ಮಾಡಿದ ನಂತರ “ಕಾಂತಾರ-1′ ಮಾಡಬಹುದಿತ್ತೆಂದು. ಆದರೆ, ಮತ್ತೆ ಅಷ್ಟೇ ಸಮಯಕೊಡಬೇಕು. ಹಾಗಾಗಿ ಕಂತಾರ -1 ಈ ವರ್ಷ ಬಿಡುಗಡೆ ಆಗುವುದಿಲ್ಲ ಎಂದಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ಕೆಲವರು ನೀವು ಶೆಟ್ಟಿಗಳಿಗೆ ಮಾತ್ರವೇ ಸಿನಿಮಾ ಮಾಡುತ್ತೀರಿ. ನಿಮ್ಮ ಸಿನಿಮಾ ಅಲ್ಲಿ ಬೇರೆಯವರು ಕಾಣಿಸುವುದು ಕಡಿಮೆ ಏಕೆ ಎಂದು ಕೇಳಿದ್ದಾರೆ. ಆಗ ಉತ್ತರ ನೀಡದ ಅವರು ಕೆಲವರು ಹೇಳುತ್ತಾರೆ.ಅವರ ತಲೆಗಳಲ್ಲಿ ಕುಳಿತು ಬಿಟ್ಟಿದೆ ನಾವು ಮಂಗಳೂರು ಜನರು ಒಟ್ಟಾಗಿ ಬಂದು ಎಲ್ಲ ಸಿನಿಮಾನೂ ಹಿಟ್ ಕೊಡುತ್ತಿದೆ ಎಂದು. ಆಮೇಲೆ ನಾವು ಇಂಡಸ್ಟ್ರಿಯನ್ನು ಸೇವ್ ಮಾಡುತ್ತಿದ್ದೀವಿ ಅನ್ನೋದು ತಲೆಯಲ್ಲಿದೆ. ಅವರು ಅಂದುಕೊಂಡಿರುವುದರಲ್ಲಿ ತಪ್ಪಿಲ್ಲ.
ಆ ಫೀಲ್ ಮತ್ತು ಪ್ರಿವಿಲೇಜ್ ಅವರಿಗೆ ಇದ್ದರೆ ತಪ್ಪಲ್ಲಿ ಆದರೆ ಅದು ತಲೆಯಲ್ಲಿ ದೊಡ್ಡದಾಗ ಕೂರ ಬಾರದು. ಈಗ ಮಾಧ್ಯಮಗಳಲ್ಲಿ ನೋಡಿರುತ್ತಾರೆ ಜನರು ಈಗ ಕನ್ನಡ ಇಂಡಸ್ಟ್ರಿನ ಸೇವ್ ಮಾಡುತ್ತಿರುವುದೇ ಶೆಟ್ಟಿ ಗ್ಯಾಂಗ್ ಅಂತ. ಅಂತಹ ಭಾವನೆ ನನಗಿಲ್ಲ ಕಥೆಗೆ ತಕ್ಕಂತೆ ಪಾತ್ರದ ಆಯ್ಕೆ ಮಾಡಲಾಗುತ್ತದೆ ಎಂದು ಕಿಡಿ ಕಾರಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.