ದಿಗ್ಗಜ ನಟರ ನಡುವೆ ಏನಾಯಿತು, ಕಾವೇರಿ ಹೋರಾಟದಲ್ಲಿ ಧ್ರುವ ಹಾಗೂ ದರ್ಶನ್ ಆತ್ಮೀಯತೆ ಯಾಕಿರಲಿಲ್ಲ
ಸೆಪ್ಟೆಂಬರ್ 29 ರಂದು ನಡೆದ ಕಾವೇರಿ ಪ್ರತಿಭಟನೆಯಲ್ಲಿ ಚಿತ್ರರಂಗದ ಹಲವಾರು ಗಣ್ಯರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ನಟ ದರ್ಶನ್ ಹಾಗು ಧ್ರುವ ಸರ್ಜಾ ಒಂದೇ ವೇದಿಕೆ ಮೇಲಿದ್ದರೂ ಸಹ ಒಬ್ಬರನೊಬ್ಬರು ನೋಡುವುದಿರಲಿ ಮಾತನಾಡಿಸಲೇ ಇಲ್ಲ. ಇದರಿಂದ ಇವರ ಮಧ್ಯ ಎಲ್ಲವೂ ಸರಿಯಾಗಿಲ್ಲ ಎನ್ನುವ ಊಹಾಪೋಹಗಳು ಹರಿದಾಡುತ್ತಿದೆ.
ಹೌದು... ತಮಿಳು ನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಕರ್ನಾಟಕ ಬಂದ್‌ಗೆ ವಿವಿಧ ಸಂಘಟನೆಗಳು ಕರೆ ನೀಡಿದ್ದವು. ಸೆಪ್ಟೆಂಬರ್ 29ರಂದು ಕಾವೇರಿಗಾಗಿ ಕರುನಾಡು ಸ್ತಬ್ಧವಾಗಿತ್ತು. ಅಲ್ಲದೆ, ಈ ಹೋರಾಟಕ್ಕೆ ಸ್ಯಾಂಡಲ್‌ವುಡ್ ಕಲಾವಿದರು ಒಂದಾಗಿ ಒಗ್ಗಟ್ಟಿನ ಮಂತ್ರ ಜಪಿಸಿದರು.
ಶಿವಣ್ಣ, ಧ್ರುವ ಸರ್ಜಾ, ವಸಿಷ್ಠ ಸಿಂಹ, ದುನಿಯಾ ವಿಜಯ್ ಪ್ರತಿಭಟನೆಯಲ್ಲಿ ಭಾಗಿಯಾದರು. ನಟ ದರ್ಶನ್ ಸ್ವಲ್ಪ ತಡವಾಗಿ ಬಂದರು. ರೆಡ್ ಕಾರು ಹತ್ತಿ ಬಂದ ದಾಸ ವೇದಿಕೆ ಮೇಲೆ ಏಂಟ್ರಿ ಕೊಟುತ್ತಿದ್ದಂತೆ ಶಿವರಾಜ್‌ಕುಮಾರ್ ಅವರ ಕಾಲಿಗೆ ಬಿದ್ದು ನಮಸ್ಕರಿಸಿದರು, ಹಾಗೆ ಪಕ್ಕದಲ್ಲಿ ಇದ್ದ ವಸಿಷ್ಠ ದಚ್ಚುಗೆ ಜಾಗ ಮಾಡಿಕೊಟ್ಟರು. ಉಮಾಶ್ರೀ ಸಹ ಎದ್ದು ನಿಂತು ಚಾಲೆಂಜಿಂಗ್ ಸ್ಟಾರ್‌ನನ್ನು ಬರಮಾಡಿಕೊಂಡರು.
ಆದರೆ ಧ್ರುವ ಮಾತ್ರ ದರ್ಶನ್ ಅವರನ್ನು ನೋಡಿದರೂ ನೋಡದಂತೆ ನಿಂತಿದ್ದರು. ಅಲ್ಲದೆ, ದರ್ಶನ್ ಶಿವಣ್ಣನನ್ನು ಮಾತನಾಡಿಸುವಾಗ ಕಾಟಾಚಾರಾಕ್ಕೆ ಎದ್ದು ನಿಂತರು. ನಂತರ ದರ್ಶನ್ ಮೈಕ್ ಮುಂದೆ ನಿಂತು ಮಾತನಾಡುವಾಗ ಆಕ್ಷನ್ ಪ್ರೀನ್ಸ್ ವೇದಿಕೆಯಿಂದ ಕೆಳಗೆ ಇಳಿದು ಹೊರಟರು. ಈ ಎಲ್ಲಾ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇಬ್ಬರ ನಡುವೆ ಏನಾಗಿದೆ ಎಂದು ಯೋಚಿಸುವಂತೆ ಮಾಡಿವೆ.
ಆದ್ರೆ ಇಬ್ಬರ ನಡುವೆ ಅಂತಹುದು ಏನೂ ಆಗಿಲ್ಲ, ಎಲ್ಲವೂ ಸರಿಯಾಗಿದೆ. ಏನೇನೋ ಕಲ್ಪಿಸೋದು ಸರಿಯಲ್ಲ. ಚಿತ್ರರಂಗದವರು ಎಲ್ಲಾರು ಒಟ್ಟಾಗಿ ಚೆನ್ನಾಗೆಯೇ ಇದ್ದಾರೆ. ಅರ್ಜುನ್ ಸರ್ಜಾ ನಿರ್ದೇಶನದ ʼಪ್ರೇಮ ಬರಹʼ ಸಿನಿಮಾದ ಹಾಡಿನಲ್ಲಿ ದರ್ಶನ್ ಕಾಣಿಸಿಕೊಂಡಿದ್ದರು. ʼಜೈ ಹನುಮಾನʼ ಹಾಡಿನಲ್ಲಿ ಅರ್ಜುನ್ ಸರ್ಜಾ, ಚಿರಂಜೀವಿ ಸರ್ಜಾ, ಧ್ರುವ ಸರ್ಜಾ ಜೊತೆ ದರ್ಶನ್ ಹೆಜ್ಜೆ ಹಾಕಿದ್ದರು. ದರ್ಶನ್ ಹಾಗು ಸರ್ಜಾ ಕುಟುಂಬದ ಮಧ್ಯೆ ಒಳ್ಳೆಯ ಒಡನಾಟವಿದೆ.
ಈ ರೀತಿ ಸುಳ್ಳು ಸುದ್ದಿ ಹಬ್ಬಿಸುವು ಒಳ್ಳೆಯದಲ್ಲ ಅಂತ ದಚ್ಚು ಹಾಗೂ ಧ್ರುವ ಅಭಿಮಾನಿಗಳು ವಾದಿಸುತ್ತಿದ್ದಾರೆ.
ಆದ್ರೆ ಒಂದೇ ವೇದಿಕೆ ಮೇಲಿದ್ರೂ ಸಹ ಕನಿಷ್ಠ ಪಕ್ಷ ನೋಡಿ ಮಾತನಾಡುವುದು ಇರಲಿ ಒಂದು ಸ್ಮೈಲ್ ಕೂಡ ಮಾಡಿಲ್ಲ ಅಂದ್ರೆ ಇಬ್ಬರ ನಡುವೆ ಏನೋ ನಡೆದಿದೆ ಎಂದು ಅಂದುಕೊಳ್ಳುತ್ತಿರಬೇಕಾದರೆ.
ಇದೀಗ ಧ್ರುವ ಸರ್ಜಾ ಚಿರು ಅಭಿನಯಿಸಿದ್ದ ರಾಜ ಮಾರ್ತಾಂಡ ಸಿನಿಮಾದ ಪೋಸ್ಟರ್ ಹಂಚಿಕೊಂಡಿದ್ದು ಅದರಲ್ಲಿ ದರ್ಶನ್ ಜೊತೆ ಧ್ರುವ ಸರ್ಜಾ ನಿಂತಿರುವ ಫೋಟೋ ನೋಡುಗರ ಸೆಳೆಯುವಂತಿದೆ. ಒಟ್ಟಿನಲ್ಲಿ ಧ್ರುವ ಸರ್ಜಾ ಅವರು ನಮ್ಮಿಬ್ಬರ ನಡುವೆ ಅಂತಹ ಭಿನ್ನಾಭಿಪ್ರಾಯ ಇಲ್ಲವೆಂದು ಈ ಪೋಸ್ಟರ್ ಮೂಲಕ ತಿಳಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.