ಸೆಂಚುರಿ ಸ್ಟಾರ್ ಶಿವಣ್ಣನಿಗೆ ಏನಾಯಿತು, ಜ್ವರ ಬಂದ ಬಳಿಕ ಶಿ.ವಣ್ಣನ ಸ್ಥಿತಿ ಹೇಗಿದೆ ಗೊ.ತ್ತಾ

 | 
Ghghh

ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ 61ನೇ ವಯಸ್ಸಿನಲ್ಲೂ ಎನರ್ಜಿಟಿಕ್ ಆಗಿರೋ ನಟ. ಈ ವಯಸ್ಸಿನಲ್ಲಿಯೂ ಶಿವಣ್ಣ ಆಕ್ಷನ್ ಸೀನ್‌ಗಳಲ್ಲಿ ನಿರಾಯಾಸವಾಗಿ ನಟಿಸುತ್ತಾರೆ. ಸಖತ್ ಆಗಿಯೇ ಹೆಜ್ಜೆ ಹಾಕುತ್ತಾರೆ. ಹೀಗೆ ಆಕ್ಟೀವ್ ಆಗಿರುವ ನಟ ಆರೋಗ್ಯ ವ್ಯತ್ಯಯದಿಂದ ಶಿವರಾಜ್‌ಕುಮಾರ್‌ ಆಸ್ಪತ್ರೆಗೆ ಹೋಗಿದ್ದರು.

ಶಿವಣ್ಣ ಆಸ್ಪತ್ರೆಗೆ ಹೋಗುತ್ತಿದ್ದಂತೆ ಇತ್ತ ಅವರ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದರು. ಆದರೆ, ಶಿವಣ್ಣನ ಆರೋಗ್ಯದ ಬಗ್ಗೆ ವೈದ್ಯರು ಮಾಹಿತಿ ನೀಡುತ್ತಿದ್ದಂತೆ ನಿರಾಳರಾಗಿದ್ದಾರೆ. ಅಂದ್ಹಾಗೆ, ಶಿವರಾಜ್‌ಕುಮಾರ್ ಜ್ವರದಿಂದ ಬಳಲುತ್ತಿದ್ದಾರೆ. ಹೀಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಕೆಲವು ದಿನಗಳಿಂದ ಶಿವಣ್ಣನ ಆರೋಗ್ಯದಲ್ಲಿ ಏರುಪೇರಾಗಿತ್ತು. ಹಾಗಾಗಿ ಪತ್ನಿ ಗೀತಾ ಒತ್ತಾಯದಿಂದ ಶಿವರಾಜ್‌ಕುಮಾರ್ ಆಸ್ಪತ್ರೆಗೆ ಬಂದರು ಅಲ್ಲಿ ಅವರು ಹೆಚ್ಚು ಸುಸ್ತಾಗಿ  ನಿಶ್ಯಕ್ತಿ ಹೊಂದಿದವರಂತೆ ಕಂಡು ಬಂದಿದ್ದರಿಂದ ಅವರನ್ನು ವೈದ್ಯರು ಅಡ್ಮಿಟ್ ಮಾಡಿಕೊಂಡಿದ್ದಾರೆ. ಇವರು ಹೇಗೆ ಮಲಗದೆ ಮೂರ್ನಲ್ಕು ವರ್ಷಗಳೇ ಆಗಿತ್ತು ಎಂದು ಗೀತಾ ಅವರು ಬೇಸರ ವ್ಯಕ್ತಪಡಿಸಿದ್ದಾರೆ. 

ಇನ್ನು  ಬೆಂಗಳೂರಿನ ವೈದೇಹಿ ಆಸ್ಪತ್ರೆಯಲ್ಲಿ ಶಿವಣ್ಣನಿಗೆ ತಜ್ಞ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಜ್ವರದ ಜೊತೆಗೆ ಸಾಮಾನ್ಯ ಆರೋಗ್ಯ ತಪಾಸಣೆ ಕೂಡ ಮಾಡಿದ್ದಾರೆ ಎನ್ನಲಾಗಿದೆ. ಜ್ವರಕ್ಕೆ ಸಂಬಂಧಿಸಿದಂತೆ ಚಿಕಿತ್ಸೆ ಪಡೆದ ಬಳಿಕ ಶಿವರಾಜ್‌ಕುಮಾರ್ ಅವರನ್ನು ಮಧ್ಯಾಹ್ನವೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. 

ಸದ್ಯ ಶಿವಣ್ಣ ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದಾರೆ. ಹೀಗಾಗಿ ಅಭಿಮಾನಿಗಳು ಆತಂಕ ಪಡೆಬೇಕಾದ ಅಗತ್ಯವಿಲ್ಲ ಎಂದು ವೈದ್ಯರೇ ಮಾಧ್ಯಮಗಳಿಗೆ ಮಾಹಿತಿಯನ್ನು ನೀಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.


.