ಪಾಪಿ'ಸ್ತಾನದ ಮಲಿಕ್ ಜೊತೆ ಡಿವೋರ್ಸ್ ಬಳಿಕ ಸಾನಿಯಾ ಮಿರ್ಜಾ ಪಡೆದ ಜೀವನಾಂಶವೆಷ್ಟು ಗೊ ತ್ತಾ

 | 
G

ಶೋಯೆಬ್ ಮಲಿಕ್ ನಟಿ ಸನಾ ಜಾವೇದ್‌ರನ್ನು ಮರು ಮದುವೆಯಾದ ನಂತರ ಸಾನಿಯಾ ಮಿರ್ಜಾ ಅವರ ವೈಯಕ್ತಿಕ ಜೀವನವು ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ವಿಷಯವಾಗಿ ಮಾರ್ಪಟ್ಟಿತ್ತು. ಆಮೂಲಕ ಸಾನಿಯಾ ಮಿರ್ಜಾ-ಶೋಯೆಬ್ ನಡುವಿನ ವಿಚ್ಛೇದನದ ವದಂತಿಗಳು ನಿಜವಾಗಿತ್ತು. ಆದರೆ ಒಂದೇ ಒಂದು ರೂ ಪಾಯಿಯನ್ನು ಪಡೆದು ಸಾನಿಯಾ ಗ್ರೇಟ್ ಅನ್ನಿಸಿಕೊಂಡಿದ್ದಾರೆ. 

ಪಾಕಿಸ್ತಾನದಲ್ಲಿ ನಟಿ ಸಾನಾ ಜಾವೇದ್‌ ಅವರೊಂದಿಗೆ ವಿವಾಹವಾಗಿದ್ದನ್ನು ಆಲ್‌ರೌಂಡರ್‌ ಕ್ರಿಕೆಟಿಗ ಶೋಯಬ್‌ ಮಲಿಕ್‌ ಖಚಿತಪಡಿಸಿದ್ದರು. ತಮ್ಮ ಮೂರನೇ ವಿವಾಹದ ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಶೋಯಬ್‌ ಹಂಚಿಕೊಂಡಿದ್ದರು. ಈ ಮೂಲಕ 41 ವರ್ಷದ ಶೋಯೆಬ್‌ ಮಲಿಕ್‌ ಹೊಸ ಇನ್ನಿಂಗ್ಸ್‌ ಅನ್ನು ಜೀವನದಲ್ಲಿ ಆರಂಭಿಸಿದ್ದರು. 13 ವರ್ಷದ ಹಿಂದೆ ಕ್ರೀಡಾ ವಲಯದ ತಾರಾ ಜೋಡಿ ಎಂದೇ ಕರೆಯಿಸಿಕೊಂಡಿರುವ ಶೋಯಬ್‌ ಮಲಿಕ್‌ ಹಾಗೂ ಸಾನಿಯಾ ಮಿರ್ಜಾ ವಿವಾಹವಾಗಿದ್ದು ಭಾರೀ ಗಮನ ಸೆಳೆದಿತ್ತು. 

ಅದೂ ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಬಂಧ ಎನ್ನುವ ರೀತಿಯಲ್ಲಿ ವರ್ಣಿಸಲಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿದ್ದವು. ಬೇರೆಯಾಗುವ ಮಾತುಗಳು ಕೇಳಿ ಬರುತ್ತಿದ್ದವು. ಅದು ಶೋಯಬ್‌ ಮಲ್ಲಿಕ್‌ ಹೊಸ ಮದುವೆಯೊಂದಿಗೆ ಅಧಿಕೃತಗೊಂಡಿದೆ. ಇತ್ತ ಹೈದ್ರಾಬಾದ್‌ನಲ್ಲಿ ಐದು ವರ್ಷದ ಪುತ್ರ ಐಜಾನ್‌ ಹಾಗೂ ಕುಟುಂಬದವರ ಜತೆಗೆ 37 ವರ್ಷದ ಸಾನಿಯಾ ಮಿರ್ಜಾ ನೆಲೆಸಿದ್ದಾರೆ. ಮಿರ್ಜಾ ಕುಟುಂಬ ಕೂಡ ಈ ವಿಚಾರದಲ್ಲಿ ಸ್ಪಷ್ಟನೆ ನೀಡಿದೆ.

ಸಾನಿಯಾ ಯಾವಾಗಲು ತನ್ನ ವೈಯಕ್ತಿಕ ಬದುಕಿನ ವಿಚಾರಗಳನ್ನು ಸಾರ್ವಜನಿಕವಾಗಿ ತೋರ್ಪಡಿಸಿದ್ದು ಅತೀ ಕಡಿಮೆ. ಇದನ್ನು ಮೊದಲಿನಿಂದಲೂ ಆಕೆ ಪಾಲಿಸಿಕೊಂಡು ಬಂದಿದ್ದಾಳೆ. ಈಗ ಆಕೆಯ ಬದುಕಿನ ಕುರಿತಾಗಿ ಚರ್ಚೆಗಳು ನಡೆಯುತ್ತಿರುವುದರಿಂದ ಇದನ್ನು ಹೇಳಬೇಕಿದೆ. ಅದರಲ್ಲೂ ಶೋಯಬ್‌ ಹಾಗೂ ಸಾನಿಯಾ ಅವರು ಕೆಲ ತಿಂಗಳ ಹಿಂದೆಯೇ ಪರಸ್ಪರ ಒಪ್ಪಂದ ಮೇಲೆಯೇ ವಿಚ್ಛೇದನ ಪಡೆದಿದ್ದಾರೆ. ಸಾನಿಯಾ ಕೂಡ ಶೋಯಬ್‌ನ ಹೊಸ ಬದುಕಿನಲ್ಲಿ ಒಳಿತಾಗಲಿ ಎಂದೇ ಹಾರೈಸಿದ್ದಾಳೆ ಎಂದು ಮಿರ್ಜಾ ಕುಟುಂಬ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.