ಇವತ್ತಿಗೂ ಬೆಣ್ಣೆಯಂತಿರುವ ಲಕ್ಷ್ಮಿ ಹೆಬ್ಬಾಳ್ಕರ್ ಅವರ ನಿಜವಾದ ವಯಸ್ಸು ಎಷ್ಟು, ಅವರ ಬಾಯಲ್ಲೇ ಕೇಳಿ
Mar 12, 2025, 18:06 IST
|

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು, ರಸ್ತೆ ಅಪಘಾತ ಇದು ನನ್ನ ಮೊದಲ ಕಾರ್ಯಕ್ರಮ. ವೇದಿಕೆಯಲ್ಲಿರುವ ಸೌಮ್ಯ ರೆಡ್ಡಿ 16 ಮತದಾನದಲ್ಲಿ ಸೋತಿದ್ದರು. ಅವಳದ್ದೇ ತಪ್ಪಿನಿಂದ ಸೋತಿದ್ದಳು. ಆದರೆ ನನ್ನ ಪಾಲಿಗೆ ಅವಳು ಶಾಸಕಿನೇ. ನಾನು ಹುಟ್ಟಿದ್ದು 1975ರಲ್ಲಿ, ನನಗೆ 50 ವರ್ಷ, ಆದರೆ ನಾನು ಹಾಗೆ ಕಾಣಿಸುತ್ತೀನಾ? ವಯಸ್ಸು ಮುಖ್ಯ ಅಲ್ಲ ಎಂದು ಹೇಳಿದರು.
ರಾಜಕಾರಣದಲ್ಲಿ ಇಂದಿರಾಗಾಂಧಿ ಮಹಿಳೆಯರ ಶಕ್ತಿಯ ಪ್ರತೀಕವಾಗಿದ್ದರು. ವಾಜಪೇಯಿಯವರೇ ವೀಕ್ಷಿಸಿದರು ತಾವೇ ಇಂದಿರಾಗಾಂಧಿಯನ್ನು ದುರ್ಗಾಮಾತೆ ಎಂದಿದ್ದರು. ನಾನು ಕಿತ್ತೂರು ರಾಣಿ ಚೆನ್ನಮ್ಮನ ವಂಶಸ್ಥಳು. ನನಗೆ ಬಹಳ ಹೆಮ್ಮೆ ಇದೆ. ನಾನು ಕಲಿತದ್ದು ತುಂಬಾ ಕಡಿಮೆಯಾಗಿರಬಹುದು, ಆದರೆ ಅನುಭವ ಪಾಠ ನನಗೆ ಕಲಿಸಿದೆ ಎಂದು ಹೇಳಿದರು.
ವೈಯಕ್ತಿಕ ಮತ್ತು ವೃತ್ತಿಪರ ಕರ್ತವ್ಯಗಳನ್ನು ಸಮತೋಲನಗೊಳಿಸುತ್ತಾ ಮಹಿಳೆಯರು ಪುರುಷರಿಗಿಂತ ಹೆಚ್ಚಿನ ಜವಾಬ್ದಾರಿಗಳನ್ನು ಹೊರುತ್ತಾರೆ. ಮಹಿಳೆಯರು ಸ್ವಾಭಿಮಾನದ ಸಂಕೇತವಾಗಿದ್ದು, ಪ್ರತಿಯೊಂದು ಕ್ಷೇತ್ರದಲ್ಲೂ ಗಮನಾರ್ಹ ಪ್ರಗತಿ ಸಾಧಿಸುತ್ತಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಶನಿವಾರ ಹೇಳಿದರು.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಹಿಳಾ ಅಭಿವೃದ್ಧಿಗೆ ನೀಡಿದ ಕೊಡುಗೆಗಾಗಿ ಒಟ್ಟು 20 ಮಹಿಳಾ ಸಾಧಕಿಯರು ಮತ್ತು ಆರು ಸಂಸ್ಥೆಗಳಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗಳನ್ನು ನೀಡಿದ್ದಾರೆ .
ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಮಹಿಳೆಯರು ತಮ್ಮ ಜವಾಬ್ದಾರಿಗಳಿಂದ ಹಿಂದೆ ಸರಿಯುವುದಿಲ್ಲ. ಮನೆಯಲ್ಲಿ ಮತ್ತು ಹೊರಗೆ ಬಹು ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಾರೆ. ಪ್ರತಿಯೊಬ್ಬ ಮಹಿಳೆಯೂ ತನ್ನ ಯಶಸ್ಸಿನ ಹಿಂದೆ ಪರಿಶ್ರಮದ ಕಥೆಯನ್ನು ಹೊಂದಿರುತ್ತಾಳೆಂದು ಹೇಳಿದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.