ಪ್ರೇಕ್ಷಕರ ನೆಚ್ಚಿನ ಬಿಗ್ ಬಾಸ್ ಮನೆಯ ಬಗ್ಗೆ ಸ್ಪರ್ಧಿಯೊಬ್ಬರು ಹೇಳಿದ್ದೇನು ಗೊ.ತ್ತಾ ಇದು ನಿಜಾನಾ?
ಬಿಗ್ಬಾಸ್ ಮನೆಯಲ್ಲಿ ಸ್ಪರ್ಧಿಗಳು ದಿನಕ್ಕೊಂದು ಬಟ್ಟೆ ಹಾಕಿಕೊಳ್ಳುತ್ತಾರೆ. ಬಿಗ್ಬಾಸ್ ಅವರಿಗೆಂದೇ ದಿನಕ್ಕೊಂದು ಹೊಸ ಟಾಸ್ಕ್ ನೀಡುತ್ತವೆ. ಒಟ್ಟಿನಲ್ಲಿ ಹೇಳುವುದಾದರೆ ಬಿಗ್ಬಾಸ್ ಮನೆ ಒಂದು ರೀತಿಯಲ್ಲಿ ಇಂದ್ರನ ಅರಮನೆ. ಇಲ್ಲಿ ನೋವು ಖುಷಿ ಎಲ್ಲವೂ ಇದೆ. ಬಿಗ್ ಬಾಸ್‌ನ ಪ್ರತಿ ಎಪಿಸೋಡ್‌ನಲ್ಲೂ ಒಂದಿಲ್ಲೊಂದು ಅಚ್ಚರಿಯ ವಿಚಾರಗಳು ಹೊರಬರುತ್ತಲೇ ಇರುತ್ತವೆ. ಟಾಸ್ಕ್‌ಗಾಗಿ ಜಗಳ ಮಾಡುವುದು, ಸಣ್ಣ ಸಣ್ಣ ವಿಷಯಕ್ಕಾಗಿ ಕಿತ್ತಾಡುವುದು ಸಹಜ.
ಅವುಗಳ ಜತೆಗೆ ಒಂದಷ್ಟು ಗಂಭೀರ ಮಾತುಕತೆಗಳೂ ಜರುಗುತ್ತವೆ. ಇತ್ತೀಚೆಗೆ ಬಿಗ್ ಬಾಸ್ ಮನೆಯೊಳಗಿರುವ ನಟಿ ಆರತಿ ಸಿಂಗ್, ತಮ್ಮ ಮೇಲೆ ನಡೆದ ರೇಪ್ ಯತ್ನದ ಬಗ್ಗೆ ಮೊದಲ ಬಾರಿಗೆ ಮಾತನಾಡಿದ್ದಾರೆ. ಅದರ ಬೆನ್ನಲ್ಲೇ ಮನೆಯೊಳಗಿರುವ ಇತರ ಸದಸ್ಯರು ಕೂಡ ತಮಗೆ ಆಗಿರುವ ಕಹಿ ಅನುಭವಗಳನ್ನು ಹಂಚಿಕೊಂಡಿದ್ದಾರೆ
ಈ ವೇಳೆ ಮನೆಯೊಳಗಿದ್ದ ಸ್ಪರ್ಧಿಗಳಿಗೆ ತಮ್ಮ ಜೀವನದ ಕರಾಳ ಘಟನೆಯನ್ನು ಇತರರೊಂದಿಗೆ ಹಂಚಿಕೊಳ್ಳಬೇಕಾದ ಟಾಸ್ಕ್ ನೀಡಿದ್ದರು. ದೇವೋಂ ಕೆ ದೇವ್ ಮಹಾದೇವ್ ಧಾರಾವಾಹಿಯ ನಟಿ ಆರತಿ ಸಿಂಗ್ ಚಿಕ್ಕವರಿರುವಾಗಲೇ ತಮ್ಮ ಮೇಲಾದ ಅತ್ಯಾಚಾರದ ಬಗ್ಗೆ ಹೇಳಿಕೊಂಡಿದ್ದಾರೆ.
ನಾನು ಲಖನೌದಲ್ಲಿ ಕುಟುಂಬದವರೊಂದಿಗೆ ವಾಸವಿದ್ದೆ. ಆಗ ನನಗೆ ಮಧ್ಯಾಹ್ನ ನಿದ್ದೆ ಮಾಡುವ ಅಭ್ಯಾಸವಿತ್ತು. ಅವತ್ತು ಮನೆಯಲ್ಲಿ ನಾನೊಬ್ಬಳೇ ಇದ್ದೆ. ಅಡುಗೆ ಮನೆಯಲ್ಲಿ ಕೆಲಸದವನಿದ್ದ. ನಾನು ಮಲಗಿರುವಾಗ ಕೆಲಸದವನು ನನ್ನ ಮೇಲೆ ಅತ್ಯಾಚಾರ ಮಾಡಲು ಬಂದ. ತಕ್ಷಣವೇ ನಾನು ಗಾಬರಿಗೊಂಡು ಅವನನ್ನು ನೂಕಿ ಕಿರುಚಾಡಿಕೊಂಡು ಹೊರ ಬಂದೆ, ಎಂದು ನಡುಗುತ್ತಾ ತಮ್ಮ ಜೀವನದಲ್ಲಿ ನಡೆದ ಕರಾಳ ಘಟನೆಯನ್ನು ನೆನೆದು ಕಣ್ಣೀರಾಗಿದ್ದಾರೆ.
ಅದನ್ನು ನೆನಪಿಸಿಕೊಂಡರೆ ಈಗಲೂ ನನ್ನ ಮೈ ನಡುಗುತ್ತದೆ ಎಂದು ಹಿಂದಿ ಬಿಗ್ ಬಾಸ್ ಸೀಸನ್ 13ರಲ್ಲಿ ಸ್ಪರ್ಧಿಸುತ್ತಿರುವ ನಟಿ ಆರತಿ ಸಿಂಗ್ ಹೇಳಿದ್ದಾರೆ. ಆ ಘಟನೆ ನಡೆದ ಬಳಿಕ ಅವರು ಮಾನಸಿಕವಾಗಿ ಕುಗ್ಗಿಹೋದರಂತೆ. ಅವರು ನೆನಪಿಸಿಕೊಂಡ ಈ ಸಂಗತಿಯನ್ನು ಕೇಳಿದ ಬಳಿಕ ಬಿಗ್ ಬಾಸ್ ಮನೆಯ ಇನ್ನುಳಿದ ಸದಸ್ಯರು ಕಣ್ಣೀರು ಹಾಕಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.