ಅಣ್ಣಾವ್ರ ಬಿಡುಗಡೆ ಸಮಯದಲ್ಲಿ ವೀರಪ್ಪನ್ ಕೊಟ್ಟ ಗಿಫ್ಟ್ ಏನು ಗೊ.ತ್ತಾ

 | 
Js

ಕನ್ನಡಿಗರ ಆರಾಧ್ಯ ದೈವ, ಅಭಿಮಾನಿಗಳ ಪಾಲಿಗೆ ವರನಟ ಡಾ.ರಾಜ್‌ಕುಮಾರ್. ಇದೇ 24 ವರ್ಷಗಳ ಹಿಂದೆ ಅಣ್ಣಾವ್ರನ್ನು ಅವರ ತೋಟದ ಮನೆಯಿಂದ ಕಾಡುಗಳ್ಳ, ನರಹಂತಕ ವೀರಪ್ಪನ್ ಅಪಹರಣ ಮಾಡಿದ್ದ. ಈ ಸುದ್ದಿ ಬೆಳಕಾಗುವುದರೊಳಗೆ ಕಾಡ್ಬಿಚ್ಚಿನಂತೆ ಹಬ್ಬಿತ್ತು. ಅಭಿಮಾನಿಗಳಲ್ಲಿ ಆತಂಕ ಹೆಚ್ಚಿತ್ತು. ಆಕ್ರೋಶ, ಪ್ರತಿಭಟನೆಗಳು ಶುರುವಾಗಿದ್ದವು.

ಅಣ್ಣಾವ್ರು ನಟನೆಯಿಂದ ದೂರವಿದ್ದ ಕಾಲವದು. ಹೀಗಾಗಿ ಬೆಂಗಳೂರಿನಲ್ಲಿ ಬೇಸರವಾದರೆ, ತಮ್ಮ ಹುಟ್ಟೂರು ಗಾಜನೂರಿಗೆ ಹೋಗುತ್ತಿದ್ದರು. ಅಲ್ಲಿ ಕೆಲವು ದಿನಗಳು ಇದ್ದು ಬರುತ್ತಿದ್ದರು. ಅದು 2000ನೇ ಇಸವಿ ಜುಲೈ 30. ಡಾ.ರಾಜ್‌ಕುಮಾರ್ ಪತ್ನಿ ಪಾರ್ವತಮ್ಮ ರಾಜ್‌ಕುಮಾರ್ ಅವರೊಂದಿಗೆ ಹುಟ್ಟೂರು ಗಾಜನೂರಿಗೆ ಹೋಗಿದ್ದರು. ಈ ದಿನ ರಾತ್ರಿ ಅಣ್ಣಾವ್ರು ಊಟ ಮಾಡಿ ಕೂತಿದ್ದರು. ಈ ವೇಳೆ ವೀರಪ್ಪನ್ ತನ್ನ ಸಹಚರರೊಂದಿಗೆ ಬಂದು ಅಪರಣ ಮಾಡಿದ್ದ

ಸುಮಾರು 108 ದಿನಗಳ ಕಾಲ ಅಣ್ಣಾವ್ರು ಕಾಡುಗಳ್ಳ ವೀರಪ್ಪನ್ ಅವರೊಂದಿಗೆ ಕಾಡುನಲ್ಲಿಯೇ ಇರಬೇಕಾಯ್ತು. ಇಷ್ಟೂ ದಿನ ರಾಜ್ಯದಲ್ಲಿ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದರು. ರಾಜ್ಯದಾದ್ಯಂತ ಪ್ರತಿಭಟನೆಯನ್ನು ಮಾಡುತ್ತಿದ್ದರು. ಹೆಚ್ಚು ಕಡಿಮೆ ಮೂರುವರೆ ತಿಂಗಳುಗಳ ಕಾಲ ರಾಜ್‌ಕುಮಾರ್ ಕಾಡಿನಲ್ಲಿ ಬಂಧಿಯಾಗಿದ್ದರು. ಆದರೆ, ಮರಳುವಾಗ ವೀರಪ್ಪನ್ ಪ್ರೀತಿಯಿಂದ ಅಣ್ಣಾವ್ರಿಗೆ ಉಡುಗೊರೆಯೊಂದನ್ನು ಕೊಟ್ಟಿದ್ದ.

ಆದರೆ, ಅಣ್ಣಾವ್ರ ಜೊತೆಗೆ ಕಾಡಿಗೆ ತೆರಳಿದ್ದ ಸಂಬಂಧಿ ನಾಗೇಶ್ ಈ ಹಿಂದೆ ಕೆಲವು ಯೂಟ್ಯೂಬ್ ಚಾನೆಲ್‌ಗಳಿಗೆ ಸಂದರ್ಶನ ನೀಡಿದ್ದಾರೆ. ಈ ಸಂದರ್ಭದಲ್ಲಿ ಅಣ್ಣಾವ್ರನ್ನು ಬಿಗಿದಪ್ಪಿ ವೀರಪ್ಪನ್ ಬಿಡುಗಡೆ ಮಾಡಿದ್ದನ್ನು ನೆನಪಿಸಿಕೊಂಡಿದ್ದಾರೆ. ಈ ಅಪರಣವನ್ನು ಹತ್ತಿರದಿಂದ ಅಧ್ಯಯನ ನಡೆಸಿದವರು ಕೊನೆಯ ದಿನ ಇಂಟ್ರೆಸ್ಟಿಂಗ್ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. 

ಕೆಲವರು ಅಣ್ಣಾವ್ರನ್ನು ಬಿಡುಗಡೆಗೊಳಿಸುವ ದಿನ ಬಿಳಿ ಪಂಚೆ, ಶಾಲು ನೀಡಿ ಗೌರವಿಸಿದ್ದ. ಹಾಗೇ ವೀರಪ್ಪನ್ ಸಹಚರ ಸೇತುಕುಳಿ ಆನೆದಂತದಿಂದ ಮಾಡಿದ್ದ ಶಿವಲಿಂಗವನ್ನು ಉಡುಗೊರೆಯಾಗಿ ನೀಡಿದ್ದ ಎಂದು ಸಂದರ್ಶನವೊಂದರಲ್ಲಿ ನಾಗೇಶ್ ರಿವೀಲ್ ಮಾಡಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.