ನನಗೇನಾದರು ಆದರೆ ಆ ವ್ಯಕ್ತಿಯೇ ಕಾರಣ, ತಿಮರೋಡಿಯ ಮಾತಿನಿಂದ ಕಣ್ಣೀರಿಟ್ಟ ದಕ್ಷಿಣ ಕನ್ನಡ

 | 
Hd

ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಸಂಸ್ಥಾಪಕ, ಬೆಳ್ತಂಗಡಿಯ ಮಹೇಶ್ ಶೆೆಟ್ಟಿ ತಿಮರೋಡಿಅಂದರೆ ಯಾರಿಗೂ ಗೊತ್ತಾಗಲಿಕ್ಕಿಲ್ಲ. ಅದರ ಬದಲಾಗಿ ಸೌಜನ್ಯಾ ಕೇಸ್ ನ ಮುಂದಾಳು ಎಂದರೆ ಪ್ರತಿಯೊಬ್ಬರಿಗೂ ಸುಲಭವಾಗಿ ಅರ್ಥವಾಗಿ ಬಿಡುತ್ತದೆ. ಈ ಹಿಂದೆ ಕೂಡ
ಸೌಜನ್ಯ ಪ್ರಕರಣದಲ್ಲಿ ಸಂತೋಷ್ ರಾವ್ ಗೆ ಸಿಬಿಐ ಕೋರ್ಟ್ ಕ್ಲೀನ್ ಚಿಟ್ ವಿಚಾರಕ್ಕೆ ಸಂಬಂಧಿಸಿದಂತೆ ಸೌಜನ್ಯ ಪರ ಹೋರಾಟಗಾರ, ಹಿಂದೂ ಮುಖಂಡ ಮಹೇಶ್ ಶೆಟ್ಟಿ ತಿಮರೋಡಿ ಪ್ರತಿಕ್ರಿಯೆ ನೀಡಿದ್ದರು.

ಸೌಜನ್ಯ ಪ್ರಕರಣದಲ್ಲಿ ಈವರೆಗೆ ನಡೆದ ತನಿಖೆಗಳೆಲ್ಲವೂ ಬೋಗಸ್ ಧರ್ಮಸ್ಥಳ ಅಣ್ಣಪ್ಪ ಇಲ್ಲವಾದರೆ ಮಂಜುನಾಥನೇ ಈ ಕೇಸಿನಲ್ಲಿ ನ್ಯಾಯ ಕೊಡಿಸಬೇಕು. ತನಿಖೆಗಳೆಲ್ಲ ಬೋಗಸ್, ಹತ್ತು ವರ್ಷ ಯಾರೋ ಹೇಳಿದ್ರು ಅಂತ ಆರೋಪಿಯನ್ನು ಜೈಲಿಗೆ ಹಾಕಿದ್ರು, 10 ವರ್ಷ ಅವನು ಜೈಲಲ್ಲಿದ್ದ, ಅವನ ಯೌವ್ವನ ಗತಿ ಏನಾಯಿತು? ಅವನಿಗೆ ಇನ್ನು ಯಾರು ದಿಕ್ಕು ಅಂತ ಕೇಳೋದು? ಧರ್ಮಸ್ಥಳದವರು ಇಂತವರು ಅಂತ ಹೇಳಿದ್ರೆ ಅವರೇ ಆರೋಪಿ. ಆದರೆ ಹುಡುಗಿಯ ಮನೆಯವರು ಹೇಳಿದ್ರೆ ಅವರು ಆರೋಪಿಗಳಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಈ ದೇಶದ ಸಂವಿಧಾನದಲ್ಲಿ ನಮಗೆ ನ್ಯಾಯ ಸಿಗುವುದಿಲ್ಲ. ನಮ್ಮತ್ರ ದುಡ್ಡಿಲ್ಲ , ನಮ್ಮತ್ರ ರಾಜಕೀಯ ಶಕ್ತಿಗಳಿಲ್ಲ. ಆದರೆ ನಮ್ಮ ಮನಸ್ಸಲ್ಲಿ ಆ ಬಡಪಾಯಿ ಹುಡುಗ ಹೊರಗಡೆ ಬರಲಿ ಅಂತ ಇತ್ತು. ನಾನು ಕೈಯಾರೆ 3.5 ಲಕ್ಷ ಖರ್ಚು ಮಾಡಿ ಆತನನ್ನ ಬಿಡಿಸಿಕೊಂಡು ಬಂದಿದ್ದೆ. ಯಾಕೆಂದರೆ ಆತ ತಪ್ಪು ಮಾಡಿಲ್ಲವೆಂದು ನನಗೆ ತಿಳಿದಿತ್ತು. ಹಾಗಾದರೆ ತಪ್ಪು ಮಾಡಿದವರು ಯಾರು. ಸಂತೋಷ್ ಆರೋಪಿಯಲ್ಲ ಎಂದರೆ ನಮಗೆ ಸಂತೋಷದ ಸುದ್ದಿ. 

ಹಾಗಾದರೆ ಆರೋಪಿಗಳು ಯಾರು? ನಮ್ಮ ಮೇಲೆ ಹಾಕಿದ ಕೇಸುಗಳು ಇನ್ನು ಬಾಕಿಯಿದೆ, ಎಲ್ಲಿ ನ್ಯಾಯ ಸಿಗುತ್ತೆ ನಮಗೆ, ಇನ್ನೂ ದಾಖಲೆ ಮಾಡಲು ಸಾಧ್ಯವಿಲ್ಲ ಎಂದು ಮಹೇಶ್ ಶೆಟ್ಟಿ ತಿಮರೋಡಿ ಹೇಳಿದ್ದಾರೆ.
ಧರ್ಮಸ್ಥಳದ ಸೌಜನ್ಯ ಪ್ರಕರಣದಲ್ಲಿ ‘ದೊಡ್ಡವರ’ ಒತ್ತಡಕ್ಕೆ ಮಣಿದು ಎಲ್ಲ ಸಾಕ್ಷ್ಯವನ್ನು ಪೊಲೀಸರು ನಾಶಪಡಿಸಿದ್ದಾರೆ” ಎಂದು ಸೌಜನ್ಯ ಪ್ರಕರಣದ ಹೋರಾಟದ ಮುಂಚೂಣಿಯಲ್ಲಿರುವ ಬೆಳ್ತಂಗಡಿಯ ಪ್ರಜಾಪ್ರಭುತ್ವ ವೇದಿಕೆಯ ಮುಖ್ಯಸ್ಥ ಮಹೇಶ್‌ ಶೆಟ್ಟಿ ತಿಮರೋಡಿ ಆರೋಪಿಸಿದ್ದರು. 

ಹಾಗಾಗಿ ನನ್ನನ್ನು ವೀರೇಂದ್ರ ಹೆಗ್ಗಡೆ ಅವರು ಸುಮ್ಮನೆ ಬಿಡುವುದಿಲ್ಲ ಎಂದು ನನಗೆ ತಿಳಿದಿದೆ ಹಾಗಾಗಿ ನನಗೇನಾದ್ರು ಆದರೆ ಅದು ಅವರಿಂದಲೇ ಎಂದು ಹೇಳಿಕೆ ನೀಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.