ರಿಯಾಲಿಟಿ ಶೋ ಬಿಗ್ ಬಾಸ್ ಮನೆಯಲ್ಲಿ ನಿಜಕ್ಕೂ ಏನು ನಡೆಯುತ್ತಿದೆ, ಪ್ರೇಕ್ಷಕರ ಕುತೂಹಲಕ್ಕೆ ಇಲ್ಲಿದೆ ಉತ್ತರ

 | 
Hb

ಭಾರತದಲ್ಲಿ ಈಗ ಬಿಗ್‌ಬಾಸ್‌ ರಿಯಾಲಿಟಿ ಶೋಗಳ ಋತು. ಕಲರ್ಸ್‌ ಕನ್ನಡದಲ್ಲಿ ಬಿಗ್‌ಬಾಸ್‌ ಸೀಸನ್‌ 10 ನಡೆಯುತ್ತಿದ್ದು, ಪ್ರತಿನಿತ್ಯ ಏನಾಯಿತು ಎಂದು ಸಾಕಷ್ಟು ಜನರು ಕುತೂಹಲದಿಂದ ಕಾಯುತ್ತ ಇರುತ್ತಾರೆ. ಇದೇ ಸಮಯದಲ್ಲಿ ಬಿಗ್‌ಬಾಸ್‌ ಸೀಸನ್‌ 16 ಶೋ ಹಿಂದಿಯಲ್ಲಿ ಆರಂಭವಾಗಿದೆ. ತೆಲುಗು ಮತ್ತು ತಮಿಳು ಭಾಷೆಯಲ್ಲೂ ಬಿಗ್‌ಬಾಸ್‌ ನಡೆಯುತ್ತಿದೆ. 

ಕನ್ನಡ ವೀಕ್ಷಕರು ಬಿಗ್‌ಬಾಸ್‌ ಕನ್ನಡ ಸೀಸನ್‌ 10 ಇಷ್ಟಪಟ್ಟು ನೋಡಬಹುದು. ಹಿಂದಿ ವೀಕ್ಷಕರು ಬಿಗ್‌ಬಾಸ್‌ ಸೀಸನ್‌ 16ರಲ್ಲಿ ಇಂದೆನಾಗುತ್ತದೆ ಎಂದು ಕಾಯುತ್ತಿರಬಹುದು. ಇದೇ ಸಮಯದಲ್ಲಿ ಕೆಲವರು ಬಿಗ್‌ಬಾಸ್‌ ಎಂದರೆ ಕೆಕ್ಕರಿಸಿ ನೋಡುತ್ತಾರೆ. ಕೆಲವರಿಗೆ ಬಿಗ್‌ಬಾಸ್‌ ಇಷ್ಟವಾಗದೆ ಇರಲು ಹಲವು ಕಾರಣಗಳಿವೆ. ಹೌದು ಬಿಗ್‌ಬಾಸ್‌ನಲ್ಲಿ ಮನರಂಜನೆ ಹೆಸರಿನಲ್ಲಿ ಕ್ರೌರ್ಯ, ಹೊಡೆದಾಟ, ಜಗಳ ಇರುತ್ತದೆ. 

ಒಬ್ಬರನ್ನೊಬ್ಬರು ಕೆಟ್ಟಪದಗಳಿಂದ ನಿಂದಿಸುತ್ತಾರೆ. ಇದನ್ನು ನೋಡಲು ಕೆಲವರು ಇಷ್ಟಪಡುವುದಿಲ್ಲ. ಈಗಾಗಲೇ ಹಿಂದಿ ಮತ್ತು ಕನ್ನಡ ಬಿಗ್‌ಬಾಸ್‌ನಲ್ಲಿ ಇಂತಹ ನಿಂದನೆ, ಜಗಳ ಶುರುವಾಗಿದೆ. ಬಿಗ್‌ಬಾಸ್‌ ಸ್ಪರ್ಧೆಯು ಸಂಪೂರ್ಣವಾಗಿ ಸ್ಕ್ರಿಪ್ಟ್‌ ಅಲ್ಲ. ಆದರೆ, ಪ್ರತಿವಾರ ಯಾವ ದಿಕ್ಕಿನಲ್ಲಿ ಸಾಗಬೇಕು ಎಂದು ನಿರ್ಧರಿಸಲಾಗುತ್ತದೆ ಎಂದು ಸುಳ್ಳಲ್ಲ. ಕೆಲವು ಜನರಿಗೆ ಬಿಗ್‌ಬಾಸ್‌ ಎನ್ನುವುದು ಸ್ಕ್ರಿಪ್ಟೆಡ್‌ ಎಂಬ ಅಭಿಪ್ರಾಯವಿದೆ. 

ಹೀಗಾಗಿ, ಈ ಶೋ ಅವರು ಇಷ್ಟಪಡೋದಿಲ್ವಂತೆ. ಬಿಗ್‌ಬಾಸ್‌ ಕನ್ನಡ ಆರಂಭಕ್ಕೆ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಕಿಚ್ಚ ಸುದೀಪ್‌ಗೂ ಈ ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ಅವರು ಮನೆಯೊಳಗೆ ಇರುವವರಿಗೆ ಹೀಗೆ ಮಾಡಿ ಎಂದು ಹೇಳುವುದು ಹೇಗೆ. ಒಬ್ಬರು ಏನಾದರೂ ಹೇಳಿದಾಗ ಅದಕ್ಕೆ ಅವರ ಮುಂದಿರುವವರು ಅವರೇ ಪ್ರತಿಕ್ರಿಯೆ ನೀಡಬೇಕು. ನಾವು ಹೇಳಿಕೊಡಲು ಸಾಧ್ಯವೇ ಎನ್ನುವ ಅರ್ಥದಲ್ಲಿ ವಿವರಿಸಿದ್ದರು.

ಆದರೆ ಸಾಧಾರಣವಾಗಿ ಇಬ್ಬರು ವ್ಯಕ್ತಿಗಳು ಗೆಳೆಯರಾಗಲು ಕನಿಷ್ಟ 1ತಿಂಗಳಾದರೂ ಬೇಕು ಆದರೆ ಇಲ್ಲಿ ಹೇಗೆ ಬಂದ 1ವಾರದ ಒಳಗಾಗಿ ತಲೆ ಒರೆಸಿ ಕೊಡುವಷ್ಟು ಹತ್ತಿರವಾಗುತ್ತಾರೆ. ಪ್ರತಿ ಎಪಿಸೋಡ್ ಅಲ್ಲಿ ಒಬ್ಬಿಬ್ಬರು ಹುಡುಗರು. ಒಬ್ಬಿಬ್ಬರು ಹುಡುಗಿಯರು ಒಂದು ಕೊಂಟ್ರಾವರ್ಸಿ ಆಗಿರುವವರು ಒಂದು ಪತ್ರಕರ್ತರು ಹಾಗೂ ಒಂದೆರಡು ವಯಸ್ಸಾದವರನ್ನು ತಂದು ಈ ಮನೆಯಲ್ಲಿ ಬಿಟ್ಟು  ಇವರಿಗೆ ಬೇಕಾದಂತೆ ಅವರನ್ನು ಆಡಿಸುತ್ತಾರೆ ಎನ್ನುವ ಅಭಿ ಪ್ರಾಯ ಹಲವರದು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.