ಬಿಗ್ ಬಾಸ್ ಮನೆಯವರ ಮುಂದೆ ಹಾಸ್ಯ ಮಾಡುವಾಗ ದಿಡೀರ್ ಸಾ.ವು

 | 
Bs

ಸಾವು ಯಾರಿಗೆ ಯಾವಗ ಬರುತ್ತದೆ ಹೇಳಲಾಗದು . ಹೌದು ಬಿಗ್ಬಾಸ್ ಸ್ಪರ್ಧಿ ಪ್ರಖ್ಯಾತ ನಟ ಇನ್ನಿಲ್ಲವಾಗಿದ್ದಾರೆ. ಜನಪ್ರಿಯ ಹಾಸ್ಯನಟ ಬೋಂಡಾ ಮಣಿ ಮೂತ್ರಪಿಂಡ ಸಂಬಂಧಿ ಕಾಯಿಲೆಯಿಂದ ಡಿಸೆಂಬರ್ 23ರಂದು ನಿಧನರಾಗಿದ್ದಾರೆ. ಅವರಿಗೆ 60 ವರ್ಷ ವಯಸ್ಸಾಗಿತ್ತು. ಸ್ವಲ್ಪ ಸಮಯದಿಂದ ನಟ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಮಣಿ ಅವರು ಪೊಜಿಚಲೂರಿನಲ್ಲಿರುವ  ತಮ್ಮ ನಿವಾಸದಲ್ಲಿ ಮೂರ್ಛೆ ಹೋಗಿದ್ದರು ಎಂದು ಹೇಳಲಾಗಿದೆ. 

ಬಳಿಕ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಆದಾಗಲೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು ಎನ್ನಲಾಗಿದೆ.
ಬೋಂಡಾ ಮಣಿ ಅವರ ಪಾರ್ಥಿವ ಶರೀರವನ್ನು ಪೊಜಿಚಲೂರಿಯ ಅವರ ನಿವಾಸದಲ್ಲಿ ಇರಿಸಲಾಗಿತ್ತು. ಸಂಜೆ 5ರ ಸುಮಾರಿಗೆ ಕ್ರೋಂಪೇಟೆಯಲ್ಲಿರುವ  ಚಿತಾಗಾರದಲ್ಲಿ ಅವರ ಅಂತಿಮ ವಿಧಿವಿಧಾನಗಳು ನಡೆದಿವೆ ಎಂದು ಕುಟುಂಬಸ್ಥರು ಮಾಹಿತಿ ಹಂಚಿಕೊಂಡಿದ್ದಾರೆ.

ನಟ ಧನುಷ್ ಮತ್ತು ವಿಜಯ್ ಸೇತುಪತಿ ಅವರು ಬೋಂಡಾ ಮಣಿ ಅವರ ವೈದ್ಯಕೀಯ ಚಿಕಿತ್ಸೆಗಾಗಿ ಆರ್ಥಿಕವಾಗಿ ಸಹಾಯ ಮಾಡಿದ್ದರು. ಬೋಂಡಾ ಮಣಿ ತಮಿಳು ಚಿತ್ರರಂಗದ ಜನಪ್ರಿಯ ಹಾಸ್ಯನಟ. 270 ಚಿತ್ರಗಳಲ್ಲಿ ಹಲವಾರು ಹಾಸ್ಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಭಾಗ್ಯರಾಜ್ ಅವರ ಪಾವುನ್ನು ಪಾವುನುಧಾನ್ ಚಿತ್ರದ ಮೂಲಕ ಪರಿಚಯವಾದ ಅವರು ಪೊನ್ವಿಲಾಂಗು, ಪೊಂಗಲೋ ಪೊಂಗಲ್, ಸುಂದರ ಟ್ರಾವೆಲ್ಸ್, ಮರುದಮಲೈ, ವಿನ್ನರ್‌, ವೇಲಾಯುಧಂ ಹೀಗೆ ಹಲವಾರು ಚಿತ್ರಗಳಲ್ಲಿ ನಟಿಸಿದರು. 

ಬಿಗ್ಬಾಸ್ ಸ್ಪರ್ಧಿಯಾಗಿ ಬಿಗ್ಬಾಸ್ ಮನೆಗೆ ಕೂಡ ಹೋಗಿದ್ದರು. ಬೋಂಡಾ ಮಣಿ ಅವರ ನಿಧನಕ್ಕೆ ಅವರ ಫ್ಯಾನ್ಸ್‌ ಸೇರಿದಂತೆ ಸಿನಿ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.