ಮಾಲಾಡಿ ಮನೆಗೆ ಹುಲಿಕಲ್ ನಟರಾಜ್ ಬರ್ತಾರೆ ಅಂದಾಗ ಎದ್ದುಬಿದ್ದು ಓಡಿಹೋದ ದೆವ್ವ
Feb 12, 2025, 21:53 IST
|

ಸಮಸ್ಯೆ ಕಂಡು ಬಂದ ಬಳಿಕ ಮನೆ ತೊರೆದಿದ್ದ ಕುಟುಂಬ ಮತ್ತೆ ಮನೆಗೆ ವಾಪಸಾಗಿದೆ.ಕತ್ತಲಾಗುತ್ತಿದ್ದಂತೆ ಬಟ್ಟೆಗಳಿಗೆ ಬೆಂಕಿ ಹಿಡಿಯುವುದು, ಪಾತ್ರೆ- ಪಗಡೆ ಬೀಳುವುದು, ಯಾರೋ ಚಲಿಸಿದಂತಾಗುವುದು ಹೀಗೆ ಹಲವು ರೀತಿಯ ವಿಚಿತ್ರ ಘಟನೆ ನಡೆಯುತ್ತಿರುವುದಾಗಿ ಮನೆ ಮಂದಿ ಹೇಳಿದ್ದರು. ಆದರೆ ಈಗ ಅವೆಲ್ಲ ನಿವಾರಣೆಯಾಗಿದೆ. ಇದಕ್ಕೆ ಪರಿಹಾರ ಮಾಡಿಕೊಳ್ಳಲಾದ ಬಳಿಕ ಯಾವುದೇ ಸಮಸ್ಯೆ ಇಲ್ಲ ಎಲ್ಲವೂ ಸರಿಯಾಗಿದೆ ಎಂದು ಮನೆಯವರು ತಿಳಿಸಿದ್ದಾರೆ.
https://www.youtube.com/live/iBOvfile4sc?si=ObQraaQeLxIh3eHg
ಬೀಗ ಹಾಕಿದ್ದ ಕಪಾಟಿನಲ್ಲಿದ್ದ ಚಿನ್ನವು ನಾಪತ್ತೆಯಾಗಿತ್ತೆಂದು ಮನೆಯವರು ಹೇಳಿದ್ದರು ಆದರೆ ಅದು ಈಗ ದೇವರ ಫೋಟೋದ ಹಿಂದೆ ಪತ್ತೆಯಾಗಿದೆ ಎಂದು ಮನೆಯವರೆ ತಿಳಿಸಿದ್ದಾರೆ. ಜನ ಸೇರಿದಾಗ ಏನೂ ಆಗ್ತಿರಲಿಲ್ಲ. ವಿಶೇಷ ಎಂದರೆ ಸುದ್ದಿ ತಿಳಿದು ಇಲ್ಲಿ ಜನ ಸೇರಿದಾಗ ಇಂತಹ ಯಾವುದೇ ಘಟನೆಗಳು ನಡೆಯುತ್ತಿರಲಿಲ್ಲ. ಒಟ್ಟಿನಲ್ಲಿ ಇದೊಂದು ವಿಚಿತ್ರ ಘಟನೆಯಾಗಿದ್ದು ಇದರ ಸತ್ಯಾಸತ್ಯತೆ ಇನ್ನೂ ನಿಗೂಢವಾಗಿಯೇ ಮುಂದುವರಿದಿದೆ. ಹಾಗೂ ಮನೆಯವರ ಮೇಲೆ ಅನುಮಾನ ಮೂಡುವಂತೆ ಮಾಡಿದೆ.
ಇನ್ನೇನು ಹುಲಿಕಲ್ ನಟರಾಜ್ ಅವರು ಬರಬೇಕು ಅನ್ನುವಷ್ಟರಲ್ಲಿ ಎಲ್ಲ ಸಹಜ ಸ್ಥಿತಿಗೆ ತಲುಪಿದೆ.ವಿಮರ್ಶಕರು ಕೂಡ ಇದೊಂದು ಸಮೂಹ ಸನ್ನಿ ಪ್ರಕರಣ ಇರಬಹುದೆಂದು ಸಂಶಯ ವ್ಯಕ್ತಪಡಿಸಿದ್ದಾರೆ. ಬೆಳ್ತಂಗಡಿಯ ಮಾಲಾಡಿ ಮನೆಯ ಪ್ರೇತಕಾಟದ ಸುದ್ದಿಯನ್ನು ಹರಡಿದವರು ಕೂಡ ಗಮನಿಸಬೇಕಾಗಿತ್ತು. ಇಂಥ ಪ್ರಕರಣ ನಡೆದ ಕೂಡಲೇ ಇದರ ಸತ್ಯಾಸತ್ಯತೆಯನ್ನು ಗಮನಿಸದೆ ಸುದ್ದಿಗಳೂ ವೈರಲ್ ಆಗಿ ವ್ಯಾಪಕವಾಗಿ ಸಾಮಾಜಿಕ ಜಾಲತಾಣದಲ್ಲಿ ಬಿತ್ತರಗೊಂಡು ಮತ್ತಷ್ಟು ಗೊಂದಲ ಸೃಷ್ಟಿ ಆಗಿತ್ತು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Wed,21 May 2025
ರಾಧಿಕಾ ಕುಮಾರಸ್ವಾಮಿ ಮಗಳು ಎಷ್ಟು ಮುದ್ದಾಗಿದ್ದಾರೆ, ತಾಯಿಗೆ ತಕ್ಕ ಮಗಳು
Tue,20 May 2025