ನಾನು ಇನ್ನೊಂದು ಮದುವೆ ಆಗಬೇಕಾ ಅಂತ ಮಗಳನ್ನ ಕೇಳ್ದೆ, ಆಕೆ ಬೇಡ ಅಂದ್ಲು ಎಂದು ವೇದಿಕೆಯಲ್ಲಿ ಉಮಾಶ್ರೀ ಕಣ್ಣೀರು
Feb 25, 2025, 07:29 IST
|

ಖ್ಯಾತ ನಟಿ ಉಮಾಶ್ರೀಗೆ ಈಗ 67ರ ಹರೆಯ. ಮದುವೆಯಾಗಿ, ಗಂಡ ಬಿಟ್ಟ ನಂತರದಲ್ಲಿ ಕುಡಿತಕ್ಕೂ ದಾಸರಾಗಿದ್ದರು. ಇದೆಲ್ಲವನ್ನು ಮೆಟ್ಟಿ ಮಕ್ಕಳನ್ನು ಬೆಳೆಸಬೇಕಾದಂತಹ ಅನಿವಾರ್ಯತೆ ಇತ್ತು. ಇಂದು ಉಮಾಶ್ರೀ ಏನಾಗಿದ್ದಾರೆ ಎನ್ನೋದನ್ನು ವಿಶೇಷವಾಗಿ ಹೇಳಬೇಕಾಗಿಲ್ಲ. ಆದರೆ ಅವರು ಯಾಕೆ ಎರಡನೇ ಮದುವೆ ಆಗಲಿಲ್ಲ ಎಂದು ಮುಕ್ತವಾಗಿ ಮಾತನಾಡಿದ್ದಾರೆ.
ನಟಿಯನ್ನು ಹೇಗೆ ರೂಪಿಸಿಕೊಳ್ಳಬೇಕೋ ಹಾಗೆ ರೂಪಿಸಿಕೊಂಡು ಬರುತ್ತಾ ಹೋದೆ. ನಟಿ ವಿಲಾಸದ ವಸ್ತು, ಮನರಂಜನೆ ಕೊಡುತ್ತಾಳೆ, ಆರಂಭದಲ್ಲಿ ಅಂಗಾಂಗ ಪ್ರದರ್ಶನ ಮಾಡುತ್ತ, ಪುರುಷರನ್ನು ಸೆಳೆಯುವ ಪಾತ್ರಗಳನ್ನು ಮಾಡಿದೆ. ಆಮೇಲೆ ಕಾಮಿಡಿ ಪಾತ್ರಗಳನ್ನು ಮಾಡಿದೆ. ಆರಂಭದಲ್ಲಿ ನನಗೆ ದುಡಿಯಬೇಕು, ದುಡ್ಡು ಮಾಡಬೇಕು ಎನ್ನೋದು ಮಾತ್ರ ಇತ್ತು. ಆದರೆ ವೇಶ್ಯೆ ಆಗಬಾರದು, ನನ್ನ ದೇಹವನ್ನು ಹರಾಜಿಗೆ ಹಾಕಬಾರದು, ಆತ್ಮಹತ್ಯೆ ಮಾಡಿಕೊಳ್ಳಬಾರದು. ಗಂಡನ ಮುಂದೆ ಮಕ್ಕಳನ್ನು ಬೆಳೆಸಿ ತೋರಸ್ತೀನಿ ಅಂತ ಸವಾಲು ಹಾಕಿದ್ದೆ. ಹೀಗೆ ನಾನು ಯಾರಿಗೂ ಕೇರ್ ಮಾಡದೆ ಬದುಕಿದೆ ಎಂದು ನಟಿ ಉಮಾಶ್ರೀ ಹೇಳಿದ್ದಾರೆ.
ಇನ್ನು ತನ್ನ ಗಂಡ ತನ್ನನ್ನು ಬಿಟ್ಟಾಗ ನನ್ನ ಸ್ನೇಹಿತರೆಲ್ಲರೂ ತುಂಬ ಸಲ ಎಷ್ಟು ದಿನ ಒಂಟಿಯಾಗಿ ಇರ್ತೀಯಾ? ನಿನಗೆ ಸಂಗಾತಿ ಬೇಕು, ಅರವತ್ತನೇ ವರ್ಷಕ್ಕೆ ನೀನು ಒಂಟಿ ಆಗ್ತೀಯಾ ಅಂತ ಬುದ್ಧಿ ಹೇಳಿದ್ದರು. ಅದೇ ಸಮಯಕ್ಕೆ ಟಿ ಎನ್ ಸೀತಾರಾಮ್ ಅವರು ರಮೇಶ್ ಬಂದಗದ್ದೆ ಅವರಿಗೆ ನನ್ನನ್ನು ಮದುವೆ ಮಾಡಿಕೊಡಬೇಕು ಅಂತ ಅಂದುಕೊಂಡಿದ್ದರು. ಆಗ ಮಗಳ ಬಳಿ ನಾನು ಮದುವೆ ಆಗಲಾ? ಅಂತ ಪ್ರಶ್ನೆ ಮಾಡಿದಾಗ ಅವಳು ನನ್ನ ತಾಯಿಯನ್ನು ಬೇರೆಯವರ ಜೊತೆ ಹಂಚಿಕೊಳ್ಳೋಕೆ ಇಷ್ಟ ಇಲ್ಲ ಅಂತ ಅಂದುಳು. ಹೀಗಾಗಿ ನಾನು ಬೇರೆ ಮದುವೆ ಆಗಲಿಲ್ಲ ಎಂದು ನಟಿ ಉಮಾಶ್ರೀ ಹೇಳಿದ್ದಾರೆ.
ನನ್ನ ಗಂಡ ಎರಡನೇ ಮದುವೆಯಾಗಿ ಮಕ್ಕಳಾಗಿದ್ದಾರೆ. ಆ ಬಳಿಕವೂ ನಮ್ಮ ಮನೆಗೆ ಬರುತ್ತಿದ್ದರು. ನಾನು ಅವರ ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡಿದ್ದೇನೆ. ಆಗ ಲೀಗಲಿ ಡಿವೋರ್ಸ್ ತಗೊಂಡಿರಲಿಲ್ಲ. ಇದರಿಂದ ಸಮಸ್ಯೆ ಆಗುತ್ತದೆ ಅಂತ ಲೋಕೇಶ್ ಅವರು ಹೇಳಿದರು. ಆಗ ನಾನು ಡಿವೋರ್ಸ್ ತಗೊಂಡೆ. ನಟಿಯರು ಹುಟ್ಟೋದೇ ನಮ್ಮ ಸುತ್ತಮುತ್ತಲಿನ ಜಗತ್ತಿಕ್ಕೋಸ್ಕರ. ನಾವು ನಮಗೋಸ್ಕರ ಅಲ್ಲದೇ ಹೋದ್ರೂ, ನಾವು ಕಟ್ಟಿಕೊಂಡು ಬದುಕಿಗೋಸ್ಕರ ಬದುಕಬೇಕಾಗುತ್ತದೆ. ನೀನು ಮಿನಿಸ್ಟರ್ ಕಾರ್ ಮೇಲೆ ಬರುತ್ತೀಯಾ ಅಂತ ಲೋಕೇಶ್ ಅವರು ಹೇಳಿದ್ದರು ಅದರಂತೆ ಮಿನಿಸ್ಟರ್ ಆದೆ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.