ಮೊದಲ ಬಾರಿ ಮಗು ಆದಾಗ ನಾನೇ ತೆಗಿಸಿದೆ; ಎರಡನೇ ಬಾರಿ ಮಗು ಬಂದಿದ್ದೆ ಗೊತ್ತಾಗಲಿಲ್ಲ ಎಂದ ನಯನಾ

 | 
Huu

ನಗಿಸುವವರ ಹಿಂದೆ ನೋವಿರುತ್ತದೆ ಎನ್ನುವ ಮಾತು ನೂರಕ್ಕೆ ನೂರರಷ್ಟು ಸತ್ಯ ಎಂದು ಅನೇಕರು ಪದೇ ಪದೇ ಹೇಳುತ್ತಾರೆ. ತೆರೆ ಮೇಲೆ ಎಲ್ಲರನ್ನು ನಗಿಸುವ ನಟಿಯೊಬ್ಬರ ಜೀವನದಲ್ಲಿ ನಡೆದ ಕಹಿ ಘಟನೆ, ನಟಿ ಎನ್ನುವುದಕ್ಕಿಂತೂ ಒಂದು ಹೆಣ್ಣಿನ ಜೀವನದಲ್ಲಿ ನಡೆದ ಕಹಿ ಘಟನೆಯ ಬಗ್ಗೆ ಈ ಸುದ್ದಿಯಲ್ಲಿ ವಿವರಿಸಲಾಗಿದೆ. ಈ ಸುದ್ದಿ ಓದುತ್ತಾ ನಮ್ಮನೆಲ್ಲಾ ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುವ ಈಕೆ ಜೀವನದಲ್ಲಿ ಇಷ್ಟೆಲ್ಲಾ ನೋವಿದೆಯಾ ಅಂತಾ ನಿಮಗೆ ಅನಿಸುವುದು ಸಹಜ.

ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟಿ ನಯನಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಪಟಪಟ ಮಾತು.ನಕ್ಕು ನಗಿಸುವ ಪಂಚ್‌ ಡೈಲಾಗ್‌ಗಳು, ನಗು ಮುಖ.ನೋಡಿದ ಎಂತವರಾದರೂ ಎಷ್ಟು ಚಂದದ ಲವಲವಕೆಯ ಜೀವನ ಎಂದುಕೊಳ್ಳುವಂತೆ ನಯನಾ ತೆರೆ ಮೇಲೆ ಕಾಣಿಸಿಕೊಳ್ಳುತ್ತಾರೆ. ಆದರೆ ಆಕೆಯ ಜೀವನದಲ್ಲಿ ಎಂದೂ ಮರೆಯದ ಕಹಿ ಘಟನೆಗಳು ನಡೆದಿದ್ದು, ಕೇಳಿದರೆ ಖಂಡಿತಾ ಕಣ್ಣೀರಾಗುತ್ತೇವೆ.

ತಮ್ಮ ಜೀವನದಲ್ಲಿ ನಡೆದ ಆ ಘಟನೆಯ ಬಗ್ಗೆ ಸ್ವತಃ ನಯನ ಇತ್ತೀಚಿಗೆ ನಡೆದ ಸಂದರ್ಶವೊಂದರಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ. ನಾನು ೨೨ ವರ್ಷ ಇರುವಾಗಲೇ ಮದುವೆಯಾದೆ. ಜೀವನದಲ್ಲಿ ಎಲ್ಲಾ ಚೆನ್ನಾಗೆ ಇತ್ತು. ಒಳ್ಳೆ ಆಫರ್‌ಗಳು ಬರುತ್ತಿದ್ದವು. ಶರತ್‌ ಅವರು ನನಗೆ ತುಂಬಾ ಸಪೋರ್ಟ್ ಆಗಿ ನಿಂತುಕೊಂಡಿದ್ದರು. ಹೀಗಾಗಿ ಒಂದು ಸಮಯದಲ್ಲಿ ನಾವು ಒಂದು ಮಗು ಮಾಡಿಕೊಳ್ಳೋಣ ಎಂದ ತಕ್ಷಣ ಕೊರೊನಾ ಶುರುವಾಯ್ತು. ನಾವು ಉಳಿಸಿದ್ದೆಲ್ಲಾ, ಕೊರೊನಾದಲ್ಲಿ ಖರ್ಚಾಯ್ತು. ಆಮೇಲೆ ನನಗೂ ಕೊರೊನಾ ಬಂತು.

ಇದೇ ಸಮಯದಲ್ಲಿ ನಾನು ಗರ್ಭಿಣಿಯಾದೆ. ಎರಡು ತಿಂಗಳು ಇರುವಾಗ ಆರೋಗ್ಯ ಬೇರೆ ಹದಗೆಟ್ಟಿತ್ತು. ನನಗಿರುವ ಸಮಸ್ಯೆಗಳು ಮಗುಗೆ ಬರಬಹುದು ಎಂದರು ಹೀಗಾಗಿ ಆ ಮಗುವನ್ನು ತೆಗೆಸಬೇಕಾಗಿ ಬಂತು. ಗಟ್ಟಿ ಮನಸ್ಸು ಮಾಡಿ ಆ ಮಗುವನ್ನು ತೆಗೆದರು. ಆಸ್ಪತ್ರೆಯಿಂದ ಮನೆಗೆ ಹೋಗೋದೆ ದೊಡ್ಡ ಟಾಸ್ಕ್‌ ಆಗಿತ್ತು. ಕೊರೊನಾ ಬೇರೆ ಬಂದಿತ್ತು ಎಂದು ತಮ್ಮ ಮೊದಲ ಮಗು ಕಳೆದುಕೊಂಡ ಘಟನೆ .

ನಾನು ಯಾರಿಗೆ ಮುಖ್ಯ ಅಂತಾ ತಿಳಿದುಕೊಂಡೆ. ಜೀವನ ಅಂದ್ರೆ ಇದು ಅಂತಾ ತಿಳಿದುಕೊಂಡೇ. ತುಂಬಾ ಆಲೋಚನೆಗಳು ಕಾಡುತ್ತಿದ್ದವು. ಆ ಸಮಯದಲ್ಲಿ ನನಗೆ ಹೆಲ್ತ್‌ ಸಮಸ್ಯೆ ಇತ್ತು. ಎರಡನೇ ಮಗು ನನಗೆ ಗೊತ್ತಿಲ್ಲದೇ ಹೋಗಿಬಿಡ್ತು. ಇಷ್ಟು ಮುದ್ದೆ ತರ ಬಂದು ಬಿಡ್ತು ಮಗು. ಅದನ್ನು ನೋಡಿ ಜೋರಾಗಿ ಕಿರುಚಿಕೊಂಡೆ. ಅದನ್ನು ನೆನಪು ಮಾಡಿಕೊಳ್ಳೋಕು ನನಗೆ ಇಷ್ಟ ಇಲ್ಲ. ಆಗ ನಮ್ಮ ಅಜ್ಜಿ ಬಂದು ನೀರು ಹಾಕಿ. ಏನು ಆಗಿಲ್ಲ ಅಂತಾ ಸಮಾಧಾನ ಮಾಡಿದರು ಎಂದು ತಮ್ಮ ಒಳಗಿನ ನೋವನ್ನು ಹಂಚಿಕೊಂಡರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.