17ನೇ ವಯಸ್ಸಿನಲ್ಲಿದ್ದಾಗ ಆತ ಹೇಳಿದಂತೆ ಎಲ್ಲವೂ ಮಾಡಿದೆ, ಈಗ ಅದು ತಪ್ಪು ಅಂತ ಅರ್ಥ ಆಗಿದೆ; ಅಮಲಾ ಪೌಲ್

 | 
Ha
ನಟಿ ಅಮಲಾ ಪೌಲ್ ಕನ್ನಡ, ತಮಿಳು, ಮಲಯಾಳಂ ಮತ್ತು ತೆಲುಗು ಚಿತ್ರರಂಗದಲ್ಲಿ ನಟಿಸಿ ಖ್ಯಾತಿ ಪಡೆದವರು. ಗೆಲುವು ಮತ್ತು ಸವಾಲುಗಳಿಂದ ತುಂಬಿದ ಸಿನಿ ಪ್ರಯಾಣವನ್ನು ಅಮಲಾ ಪೌಲ್ ಅನುಭವಿಸಿದ್ದಾರೆ. ಕಳೆದ 15 ವರ್ಷಗಳ ಸಿನಿರಂಗದಲ್ಲಿನ ತಮ್ಮ ಅನುಭವದ ಬಗ್ಗೆ  ಅಮಲಾ ಪೌಲ್ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.  ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದ ಅಮಲಾ ಉದ್ಯಮದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. 
ನಟಿಯಾಗಿ ಮಾತ್ರವಲ್ಲದೇ  ಅಮಲಾ ಪೌಲ್ ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿದ್ದಾರೆ.ಅಮಲಾ ಪೌಲ್ ಅವರ ವೃತ್ತಿಜೀವನದ ಅತ್ಯಂತ ಕಷ್ಟಕರವಾದ ಅಧ್ಯಾಯಗಳಲ್ಲಿ ಒಂದು ಸಿಂಧು ಸಮವೇಲಿ ಸಿನಿಮಾ. ಈ ಸಿನಿಮಾ ಸಿಕ್ಕಾಪಟ್ಟೆ ವಿವಾದಕ್ಕೆ ಕಾರಣವಾಗಿತ್ತು.  ಅಮಲಾ ಪೌಲ್ ಬೋಲ್ಡ್‌ ಪಾತ್ರವನ್ನು ನಿರ್ವಹಿಸಿದ ಈ ಚಿತ್ರವು ಗಮನಾರ್ಹವಾದ ಹಿನ್ನಡೆಯನ್ನು ಉಂಟುಮಾಡಿತು. ಇದು ಅವರ ವೈಯಕ್ತಿಕ ಜೀವನ ಮತ್ತು ಆರಂಭಿಕ ವೃತ್ತಿಜೀವನ ಎರಡರ ಮೇಲೂ ಪರಿಣಾಮ ಬೀರಿತು.
ನಟಿ ಅಮಲಾ ಪೌಲ್ ಚಿತ್ರರಂಗಕ್ಕೆ ಬಂದ ಆರಂಭದ ದಿನಗಳಲ್ಲಿ ನಟಿಸಿದ ಸಿಂಧು ಸಮವೇಲಿ ಸಿನಿಮಾ ಬಗ್ಗೆ ಮೌನ ಮುರಿದಿದ್ದಾರೆ. ನಾನು ಅಂದು ಆ ಸಿನಿಮಾದಲ್ಲಿ ನಟಿಸಿ ತಪ್ಪು ಮಾಡಿದೆ. ನನಗೆ ಆಗ 17 ವರ್ಷ ವಯಸ್ಸು ಅಷ್ಟೇ. ನಿರ್ದೇಶಕರು ಹೇಳಿದಂತೆ ಕೇಳಿದೆ. ಬಳಿಕ ತಪ್ಪಿನ ಅರಿವಾಯಿತು ಎಂದು ಮಾತೃಭೂಮಿ ಚಾನಲ್‌ ಸಂದರ್ಶನದಲ್ಲಿ ನಟಿ ಅಮಲಾ ಪೌಲ್‌ ಮಾತನಾಡಿದ್ದಾರೆ.  
ಅದರ ನಂತರ ನಾವು ಅಂತಹ ಪಾತ್ರವನ್ನು ಮಾಡಬಾರದು. ಅದು ಕೆಟ್ಟದು ಅಥವಾ ಅದು ನಮ್ಮ ಸಮಾಜವು ಸ್ವೀಕರಿಸುವ ವಿಷಯವಲ್ಲ ಎಂದು ನಮಗೆ ಅರಿವಾಯಿತು. ನಾವು ಕಲಿಯುವುದು ಹೀಗೆಯೇ ಎಂದು ಅಮಲಾ ಹೇಳಿದ್ದಾರೆ.ಚಿತ್ರ ಬಿಡುಗಡೆಯಾಗಿ ನೆಗೆಟಿವ್ ಕಾಮೆಂಟ್ ಬಂದಾಗ ತುಂಬಾ ಹೆದರಿದ್ದೆ. ನನ್ನ ಅಪ್ಪ ಕೂಡ ಸಿನಿಮಾ ನೋಡಿ ಬೇಸರಗೊಂಡಿದ್ದರು. ಈ ಸಿನಿಮಾ ತಮ್ಮ ವೃತ್ತಿ ಜೀವನ ಹಾಗೂ ವೈಯಕ್ತಿಕ ಜೀವನದ ಮೇಲೆ ಪರಿಣಾಮ ಬೀರಿತು ಎಂದು ತಿಳಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.