ಶಾಲೆಯಲ್ಲಿ ಓದುವಾಗ ಆ ಕೆಲಸವನ್ನು ಸರಿಯಾಗಿ ಮಾಡಿಸುತ್ತಿದ್ದೆ ಎಂದು ನಾಚಿಕೆ‌ ಬಿಟ್ಟು ‌ಹೇಳಿದ ದರ್ಶನ್ ಜೊತೆ ನಟಿಸಿದ ನ.ಟಿ

 | 
Hjj

ನಟಿ ಅಭಿರಾಮಿ ಬಗ್ಗೆ ಕನ್ನಡಿಗರಿಗೆ ಹೆಚ್ಚು ಪರಿಚಯಿಸುವ ಅಗತ್ಯವಿಲ್ಲ. ಹೌದು ದರ್ಶನ್​ ಅಭಿನಯದ ಲಾಲಿಹಾಡು, ಶಿವರಾಜ್​ಕುಮಾರ್​ ನಟನೆಯ ಶ್ರೀರಾಮ್​, ಉಪೇಂದ್ರ ಅವರ ರಕ್ತ ಕಣ್ಣೀರು ಮತ್ತು ಸುದೀಪ್​ ಅಭಿನಯದ ಕೋಟಿಗೊಬ್ಬ 3 ಸೇರಿದಂತೆ ಕನ್ನಡ ಸೂಪರ್​ ಹಿಟ್​ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಸದ್ಯ ಕನ್ನಡ, ತಮಿಳು ಹಾಗೂ ಮಲಯಾಳ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಿಗೆ ಬಣ್ಣ ಹಚ್ಚುತ್ತಿದ್ದಾರೆ. ಸ್ಟಾರ್​ ನಟರೊಂದಿಗೆ ನಟಿಸಿರುವ ಅಭಿರಾಮಿ 1990-2000 ದಶಕದಲ್ಲಿ ಸ್ಟಾರ್​ ನಟಿಯಾಗಿ ಮಿಂಚಿದರು. ಸಿನಿಮಾ ಕ್ಷೇತ್ರದಲ್ಲಿ ಉತ್ತುಂಗದಲ್ಲಿರುವಾಗಲೇ 2009ರಲ್ಲಿ ರಾಹುಲ್​ ಪವನ್​ ಎಂಬುವರನ್ನು ಮದುವೆಯಾಗಿ ಸಿನಿಮಾದಿಂದ ಕೆಲವು ವರ್ಷಗಳ ಕಾಲ ಅಂತರ ಕಾಯ್ದುಕೊಂಡರು.

 2005ರಿಂದ 2013ರವರೆಗೆ ಯಾವುದೇ ಸಿನಿಮಾಗಳಲ್ಲಿ ನಟಿಸದ ಅಭಿರಾಮಿ 2014ರಲ್ಲಿ ಮತ್ತೆ ಬಣ್ಣದ ಜಗತ್ತಿಗೆ ಮರು ಪ್ರವೇಶ ಮಾಡಿದರು. ಇದೀಗ ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಅಭಿರಾಮಿ ಕಲ್ಕಿ ಹೆಸರಿನ ಮಗುವನ್ನು ದತ್ತು ಪಡೆದಿದ್ದಾರೆ.

ಕುಟುಂಬದ ಜತೆಗೆ ಸಿನಿಮಾ ವೃತ್ತಿಯನ್ನು ಮುಂದುವರಿಸಿರುವ ಅಭಿರಾಮಿ, ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ತಮ್ಮ ಇನ್​ಸ್ಟಾಗ್ರಾಂನಲ್ಲಿ 2.9 ಲಕ್ಷ ಫಾಲೋವರ್ಸ್​ ಹೊಂದಿದ್ದು, ಅಭಿಮಾನಿಗಳ ಜತೆ ನಿರಂತರ ಸಂಪರ್ಕದಲ್ಲಿ ಇರುತ್ತಾರೆ. ಆಗಾಗ ಸೆಲೆಬ್ರಿಟಿಗಳು ಇನ್​ಸ್ಟಾಗ್ರಾಂನಲ್ಲಿ ಪ್ರಶ್ನೋತ್ತರ ಚಟುವಟಿಕೆ ನಡೆಸುವುದನ್ನು ನೀವು ನೋಡಿರುತ್ತೀರಿ. 

ಅದೇ ರೀತಿ ಅಭಿರಾಮಿ ಕೂಡ ಇತ್ತೀಚೆಗೆ ನೆವರ್​ ಹ್ಯಾವ್ ಐ ಎವರ್​ ಅವೃತ್ತಿಯ​ ಹೌದು ಅಥವಾ ಇಲ್ಲ ಎಂದು ಉತ್ತರಿಸುವ ಪ್ರಶ್ನೋತ್ತರ ಚಟುವಟಿಕೆ ನಡೆಸಿದರು. ಈ ವೇಳೆ ಆಸಕ್ತಿದಾಯಕ ಪ್ರಶ್ನೆಗಳಿಗೆ ಬೋಲ್ಡ್​ ಆಗಿಯೇ ಉತ್ತರಿಸಿದ್ದಾರೆ. ಬ್ರೇಕಪ್​ ಬಳಿಕ ಮಾಜಿ ಬಾಯ್​ಫ್ರೆಂಡ್​ಗೆ ಕಿಸ್​ ಮಾಡಿದ್ದೀರಾ? ಮತ್ತು ಸಹ ಕಲಾವಿದರೊಂದಿಗೆ ಕಿಸ್​​ ಮಾಡಿದ್ದೀರಾ? ಈ ಪ್ರಶ್ನೆಗೆ ಉತ್ತರಿಸಿದ ಅಭಿರಾಮಿ. 

ಶಾಲೆಯಲ್ಲಿ ಇರುವಾಗ ಯಾರಿಗಾದರೂ ಕಿಸ್​ ಮಾಡಿದ್ದೀರಾ ಎಂಬ ಪ್ರಶ್ನೆಗೆ ಹೌದು ಎನ್ನುವ ಮೂಲಕ ಕಿಸ್​ ಮಾಡಿರುವುದಾಗಿ ಒಪ್ಪಿಕೊಂಡರು. ಇದು ಯೆಸ್​ ಆರ್​ ನೌ ಪ್ರಶ್ನೋತ್ತರ ಚಟುವಟಿಕೆಯಾದ್ದರಿಂದ ಹೆಚ್ಚು ವಿವರಣೆ ಸಿಗಲಿಲ್ಲ.ಅಭಿರಾಮಿ ಅವರ ಈ ಪ್ರಶ್ನೋತ್ತರ ಚಟುವಟಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಅಭಿಮಾನಿಗಳು ತರಹೇವಾರಿ ಕಾಮೆಂಟ್​ಗಳನ್ನು ಹರಿಬಿಡುತ್ತಿದ್ದಾರೆ. ಇದ್ಯಾವುದಕ್ಕೂ ಅಭಿರಾಮಿ ತಲೆ ಕೆಡಿಸಿಕೊಂಡಿಲ್ಲ.