ಮೊದಲ ಗಂಡನಿಗೆ ಆ ಸತ್ಯ ತಿಳಿದು ನನಿಗೆ ಕೈಕೊಟ್ರು; ಜೀವನದ ಕಹಿ ಘಟನೆ ಹಂಚಿಕೊಂಡ ಅನು

 | 
Us

ಸ್ಯಾಂಡಲ್​ವುಡ್ ನಟಿ ಅನು ಪ್ರಭಾಕರ್  ಅನೇಕ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಸ್ಟಾರ್ ಹೀರೋಗಳ ಜೊತೆ ನಟಿಸಿದ್ದಾರೆ. ಭಾರೀ ಡಿಮ್ಯಾಂಡ್ ಇರುವಾಗಲೇ ಅನು ಪ್ರಭಾಕರ್ ಹಿರಿಯ ನಟಿ ಜಯಂತಿ ಪುತ್ರನನ್ನು ಮದುವೆಯಾದ್ರು. 12 ವರ್ಷಗಳ ಬಳಿಕ ಡಿವೋರ್ಸ್ ಕೊಟ್ಟ ಬಗ್ಗೆ ನಟಿ ಇದೀಗ ಮಾತಾಡಿದ್ದಾರೆ.

90ರ ದಶಕದಲ್ಲಿ ಅನೇಕ ಅಭಿಮಾನಿಗಳ ಹೃದಯ ಗೆದ್ದಿದ್ದರು. ಕನ್ನಡ, ಇಂಗ್ಲೀಷ್ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿ ಅನು ಪ್ರಭಾಕರ್ ತಿಳಿಸಿದ್ದಾರೆ. ಮೊದಲ ಮದುವೆ ಬಗ್ಗೆ ಮೊದಲ ಬಾರಿಗೆ ನಟಿ ಮಾತಾಡಿದ್ದಾರೆ. ಸಂದರ್ಶನ ಒಂದರಲ್ಲಿ ಮಾತಾಡಿದ ಖ್ಯಾತ ನಟಿ ಅನುಪ್ರಭಾಕರ್ ಅವರು ನಟಿ ಜಯಂತಿ ಜೊತೆಗಿನ ಒಡನಾಟದ ಬಗ್ಗೆ ಮಾತಾಡಿದ್ದಾರೆ. ಮೊದಲ ಪತಿಗೆ ಡಿವೋರ್ಸ್ ನೀಡಿ 2ನೇ ಮದುವೆ ಆಗಿರುವ ನಟಿ ಅನುಪ್ರಭಾಕರ್, ಮೊದಲ ಪತಿ ಜೊತೆಗಿನ ಸಂಬಂಧದ ಬಗ್ಗೆ ಮಾತಾಡಿದ್ದಾರೆ.

ಹಿರಿಯ ನಟಿ ಜಯಂತಿ ಅವರ ಜೊತೆಗಿನ ಮಗನ ಜೊತೆಗೆ ಡಿವೋರ್ಸ್ ಬಳಿಕ ನಾನು ನನ್ನ ತಾಯಿ ಮನೆಯಲ್ಲಿದೆ. ನನ್ನ ಜೀವನದಲ್ಲಿ ನೆಗೆಟಿವ್ ಅಂತ ಹುಡುಕಿದರೆ ಸಿಗುವ ಮೊದಲ ವಿಚಾರವೇ ನನ್ನ ಡಿವೋರ್ಸ್. ನೆಗೆಟಿವ್ ಕಾಮೆಂಟ್ ನಮ್ಮ ಜೀವನದ ಒಂದು ಭಾಗ. ಅದನ್ನು ಸ್ವೀಕರಿಸಿ, ಮುಂದೆ ಸಾಗಬೇಕು. ಕೃಷ್ಣ ಕುಮಾರ್ ಅವರನ್ನು ಮದುವೆ ಆದ್ಮೇಲೆ ಸಿನಿಮಾ ಮಾಡೋದನ್ನು ನಿಲ್ಲಿಸ ಬಾರದು ಎಂದು ಜಯಂತಿ ಅಮ್ಮನವರು ಹೇಳಿದ್ದರು.

ಮದುವೆ ಆದ ವರ್ಷದಲ್ಲೇ ನಾನು 9 ಸಿನಿಮಾಗಳಲ್ಲಿ ನಟಿಸಿದೆ. ಮೊದಲಿನಿಂದಲೂ ನಾನು ತುಂಬಾ ಸಿಂಪಲ್ ಡ್ರೆಸ್ ಧರಿಸುತ್ತಿದೆ. ಗ್ರ್ಯಾಂಡ್ ಆಗಿ ರೆಡಿ ಆಗಬೇಕು ಅಂತ ಜಯಂತಿ ಅಮ್ಮ ಸಲಹೆ ಕೊಡುತ್ತಿದ್ದರು. ಮೊದಲ ಮದುವೆಯಲ್ಲಿ ಏನಾಯ್ತು, ಯಾಕಾಯ್ತು ಎನ್ನುವ ವಿಚಾರವನ್ನು ನಾನು ಮಾತನಾಡುವುದಿಲ್ಲ ಎಂದು ಅನು ಹೇಳಿದ್ದಾರೆ.

ನಾನಲ್ಲದೆ ನಮ್ಮ ದಾಂಪತ್ಯ ಜೀವನದಲ್ಲಿ ಮತ್ತೊಬ್ಬ ವ್ಯಕ್ತಿ ಪ್ರವೇಶ ಮಾಡಿದ್ದಾರಾ ಅನ್ನೋ ಪ್ರಶ್ನೆಗಳೆಲ್ಲಾ ತೀರಾ ನನ್ನ ಪರ್ಸನಲ್ ವಿಚಾರ. ಹೀಗಾಗಿ ನಾನು ಮಾತನಾಡಬಾರದೆಂದು ತೀರ್ಮಾನ ಮಾಡಿರುವೆ. ಇಬ್ಬರೂ ವ್ಯಕ್ತಿಗಳ ನಡುವೆ ಏನೇ ಭಿನ್ನಾಭಿಪ್ರಾಯವಿದ್ದರೂ ಅದು ಆ ರೂಮ್​ನ ನಾಲ್ಕು ಗೋಡೆಗಳ ನಡುವೆ ಬಿಟ್ಟರೆ ಬೇರೆ ಯಾರಿಗೂ ಗೊತ್ತಿರುವುದಿಲ್ಲ ಎಂದು ಅನು ಪ್ರಭಾಕರ್ ಹೇಳಿದ್ದಾರೆ.

ನನ್ನ ತಂದೆ, ತಾಯಿ ಅವರ ತಂದೆ ತಾಯಿಗೂ ಕರೆಕ್ಟ್ ಆಗಿ ಯಾವ ವಿಚಾರವೂ ಗೊತ್ತಿರುವುದಿಲ್ಲ ಇದೆಲ್ಲಾ ತುಂಬಾ ಪರ್ಸನಲ್ ವಿಚಾರ. ನೋವಿನಲ್ಲಿಯೇ ಜೀವನ ಸಾಗಿಸುವಂತೆ ಆಗಬಾರದು. ನಾವಿಬ್ಬರೂ ಒಟ್ಟಿಗೆ ಇರಲು ಆಗುವುದಿಲ್ಲ. ಸಂತೋಷ ಅಸಾಧ್ಯವೆಂದೆನಿಸಿದಾಗ ನೋವು ಕೊಡುವ ನಿರ್ಧಾರಗಳಾದರೂ ಸರಿ, ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೇಳಿ ತಮ್ಮ ಹಳೆಯ ಪತಿಗೆ ವಿದಾಯ ಹೇಳಿ ನಟ ರಘು ಮುಖರ್ಜಿ ಅವರನ್ನು ವಿವಾಹವಾಗಿ ಪುಟ್ಟ ಮಗಳೊಂದಿಗೆ ಜೀವನ ನಡೆಸುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.