ವಯಸ್ಸಿಗೆ ಬಂದೆ ಅಂತ ಆಶ್ರಯದಲ್ಲಿ ಬಿಟ್ರು, ವಾರಕ್ಕೆ ಒಬ್ಬನಂತೆ ಹತ್ತಿರ ಬಿಟ್ರು; ಪಾರು ಧಾರಾವಾಹಿ ನಟಿ
Jun 27, 2025, 11:04 IST
|

ನಿಮಗೆಲ್ಲಾ ಗೊತ್ತೇ ಇರುವ ಹಾಗೆ ಪಾರು ಧಾರಾವಾಹಿ ಮೂಲಕ ಪ್ರೇಕ್ಷಕರ ಮನಗೆದ್ದಿರುವ ಕಿರುತೆರೆ ನಟಿ ಸಿತಾರಾ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ನಟಿ ಸಿತಾರಾ ಹೆಚ್ಚಾಗಿ ವಿಲನ್ ಪಾತ್ರಗಳಲ್ಲೇ ಕಾಣಿಸಿಕೊಳ್ಳುವ ಮೂಲಕ ನಟನೆಯಲ್ಲಿ ಸೈ ಎನಿಸಿಕೊಂಡಿದ್ದಾರೆ. ಪಾರು ಧಾರಾವಾಹಿಯಲ್ಲಿ ಸಿತಾರಾ ಅವರು ನಟ ಆದಿತ್ಯ ಚಿಕ್ಕಮ್ಮ ದಾಮಿನಿ ಪಾತ್ರದಲ್ಲಿ ಕಾಣಿಸಿಕೊಂಡರು. ಇದಕ್ಕೂ ಮುನ್ನ ಕಸ್ತೂರಿ ನಿವಾಸ, ಅಗ್ನಿಸಾಕ್ಷಿ ಧಾರಾವಾಹಿಯಲ್ಲೂ ನೆಗಟಿವ್ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದರು.
ಪರದೆ ಮೇಲೆ ವಿಲನ್ ಆಗಿ ಮಿಂಚಿರುವ ಅವರು ತಮ್ಮ ಬದುಕಿನಲ್ಲಿ ನಡೆದಿರುವ ಕೆಟ್ಟ ವಿಚಾರವನ್ನು ರಿವೀಲ್ ಮಾಡಿದ್ದಾರೆ. ಸಿನಿಮಾ ಸೀರಿಯಲ್‌ಗಳಲ್ಲಿ ತಮಗೆ ಕರಾಳ ಅನುಭವಗಳನ್ನು ಸಹ ಅವರು ಹಂಚಿಕೊಂಡಿದ್ದಾರೆ.ಈಗ ಎಲ್ಲರೂ ನನ್ನ ಮನೆಗೆ ಕರೆಯುತ್ತಾರೆ. ನಾನು ನನ್ನ ಮನೆಯಲ್ಲಿ ತುಂಬಾ ಜನರನ್ನು ಸಾಕಿದ್ದೆ. ಹೆಣ್ಣು ಗಂಡು ಅನ್ನೋ ವ್ಯತ್ಯಾಸ ಇಲ್ಲದೆ ಕಷ್ಟದಲ್ಲಿದ್ದವರನ್ನು ಸಾಕಿದ್ದೇನೆ. ನನ್ನ ಜೊತೆಯಲ್ಲೇ ಇದ್ದು, ನಮ್ಮ ಮನೇಲೇ ತಿಂದು ಹೊರಗಡೆ ಹೋಗಿ ನನ್ನ ಬಗ್ಗೆಯೇ ಕೆಟ್ಟದಾಗಿ ಮಾತನಾಡಿದ್ದಾರೆ.
ಇದರಿಂದ ನನಗೆ ತುಂಬಾ ನೋವಾಯ್ತು. ಆಗ ನನ್ನ ಸಂಬಂಧಿಕರು ನನ್ನ ಹೊರಗೆ ಹಾಕಿದ್ದೇ ಒಳ್ಳೇದಾಯ್ತು ಅನಿಸಿತು. ಒಬ್ಬಳೇ ಬೆಳೆದಿದ್ದರಿಂದ ನನಗೆ ಇದೆಲ್ಲ ಚೆನ್ನಾಗಿ ಅರ್ಥ ಆಯ್ತು. ಇನ್ನೊಬ್ಬರಿಗೆ ಹರ್ಟ್ ಆಗುತ್ತೆ ಅಂತ ಗೊತ್ತಿದ್ರೂ ಏನಂದ್ರೆ ಅದು ಮಾತನಾಡುವವರಿದ್ದಾರೆ ಎಂದು ಸಿತಾರಾ ಬೇಸರ ಹಂಚಿಕೊಂಡಿದ್ದಾರೆ. ನನಗೆ ಸಾಮಾನ್ಯವಾಗಿ ಭಾವುಕ ಸಂದರ್ಭಗಳಲ್ಲಿ ಕಣ್ಣೀರು ಬರುತ್ತದೆ. ಹಲವರು ನನ್ನ ಬಗ್ಗೆ ಒಳ್ಳೆಯ ಅಭಿಪ್ರಾಯ ಹೊಂದಿದ್ದಾರೆ. ಆದರೆ ಜೊತೆಯಲ್ಲಿದ್ದವರೇ ನನ್ನ ಮೊಸಳೆ ಕಣ್ಣೀರು ಎಂದು ಹಾಸ್ಯ ಮಾಡುತ್ತಾರೆ. ನನಗೆ ವಾರಕ್ಕೊಬ್ಬ ಬಾಯ್‌ಫ್ರೆಂಡ್ ಅಂತೇ, ಹಾಗಂತ ಕಲಾಕ್ಷೇತ್ರದಲ್ಲಿ ಜನ ಮಾತನಾಡಿಕೊಳ್ತಿದ್ದಾರೆ ಅಂತ ನನ್ನ ಸ್ನೇಹಿತೆಯೊಬ್ಬಳು ಹೇಳಿದಳು.
ಇದು ನನಗೆ ನಿಜಕ್ಕೂ ಅರ್ಥವಾಗಲಿಲ್ಲ. ಅದು ಹೇಗೆ ಒಬ್ಬ ವ್ಯಕ್ತಿ ಬಗ್ಗೆ ಜನ ಹೀಗೆಲ್ಲ ಮಾತನಾಡ್ತಾರೆ. ಇದು ನನಗೆ ತುಂಬಾ ನೋವಾಗಿರುವ ವಿಷಯ ಎಂದು ಕಣ್ಣೀರು ಹಾಕಿದ್ದಾರೆ. ಸೀರಿಯಲ್ ಹಾಗೂ ಸಿನಿಮಾದಲ್ಲಿ ಹೀಗೆಲ್ಲ ನಡೆಯಲ್ಲ. ಅಲ್ಲಿ ಬೇರೆಯೇ ನಡೆಯುತ್ತೆ. ಅಲ್ಲಿ ಬೇರೆ ರೀತಿ ಹರ್ಟ್ ಮಾಡ್ತಾರೆ. ಸೀರಿಯಲ್ ಹಾಗೂ ಸಿನಿಮಾಗಳಲ್ಲಿ ನಮ್ಮನ್ನ ಕುಗ್ಗಿಸುವ ಕೆಲಸ ಮಾಡ್ತಾರೆ. ಪರದೆ ಮುಂದೆ ಮತ್ತೆ ಬರಲೇಬಾರದು ಆ ರೀತಿ ನಮ್ಮನ್ನ ಕುಗ್ಗಿಸ್ತಾರೆ. ಸ್ಕ್ರೀನ್‌ನಲ್ಲಿ ನೀನು ಹೇಗೆ ಬರ್ತೀಯೋ ನೋಡ್ತೀನಿ ಅಂತಾರೆ.
ಇದಕ್ಕೆ ಹೆದರಿ ಎಷ್ಟೋ ಜನ ಸುಮ್ಮನೆ ನೋವು ನುಂಗಿಕೊಂಡು ಇದ್ದಾರೆ. ಯಾವ ತರ ಅಂದ್ರೆ ನೀವು ಏನ್ ಹೇಳಿದ್ರೂ ಓಕೆ ಅಂತಾರೆ. ಇದಕ್ಕೆ ಜೊತೆಯಲ್ಲಿರುವವರು ಇವಳು ಎಲ್ಲದಕ್ಕೂ ಓಕೆ ಅಂದಿರ್ತಾಳೆ ಅದಕ್ಕೆ ಎಲ್ಲ ಸೀರಿಯಲ್‌ನಲ್ಲಿ ಇರುತ್ತಾಳೆ, ಇವಳಿಗೆ ಯಾರ ಜೊತೆನೋ ಸಂಬಂಧ ಇದೆ ಎಂದು ಮಾತನಾಡಿಕೊಳ್ತಾರೆ. ಆದರೆ ನಮ್ಮ ಕಷ್ಟ ನಮಗೆ ಮಾತ್ರ ಗೊತ್ತಿರುತ್ತೆ ಎಂದು ಸೀತಾರಾ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.