ಅಣ್ಣ ತಮ್ಮದಿಂದರ ನಡುವೆ ಗುದ್ದಾಟ ಶುರುವಾಗಿದ್ದು ಎಲ್ಲಿ ಗೊ ತ್ತಾ; ಕೋಟಿ ಒಡೆಯ ದರ್ಶನ್ ಎಂತ ಖಾತರ್ನಾಕ್ ಗೊ ತ್ತಾ

 | 
Yu

ನಟ ದರ್ಶನ್‌ ಕೊಲೆ ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ದರ್ಶನ್‌ ಜತೆಗೆ ರೇಣುಕಾಸ್ವಾಮಿ ಹತ್ಯೆಯಲ್ಲಿ ಭಾಗಿಯಾದ ಆರೋಪದಡಿ ಇನ್ನುಳಿದ 16 ಮಂದಿಯೂ ಕಂಬಿಹಿಂದಿದ್ದಾರೆ. ಹೀಗೆ ದರ್ಶನ್‌ ಮತ್ತೆ ಜೈಲು ಸೇರುತ್ತಿದ್ದಂತೆ, ಅವರ ಈ ಹಿಂದಿನ ಕಾಂಟ್ರವರ್ಸಿಗಳು ಮತ್ತೆ ಮುನ್ನೆಲೆಗೆ ಬಂದಿವೆ. ಅನ್ಯಾಯಕ್ಕೆ ಒಳಗಾದವರು ಧ್ವನಿ ಎತ್ತುತ್ತಿದ್ದಾರೆ.

ಹೊರಗಿನ ವಿಷಯವಷ್ಟೇ ಅಲ್ಲ ಅವರದೇ ಕುಟುಂಬದ ಕೆಲ ವಿಚಾರಗಳೂ ಮತ್ತೆ ಪ್ರಸ್ತುತತೆಗೆ ಬಂದಿವೆ. ಆ ಪೈಕಿ ಹೆಚ್ಚು ಚರ್ಚೆಯಾಗಿದ್ದು ದಿನಕರ್‌ ತೂಗುದೀಪ ಬಾಡಿಗೆ ಮನೆ ವಿಚಾರ. ನಟ ದರ್ಶನ್‌ ಕನ್ನಡದ ಸ್ಟಾರ್‌ ನಟ. ಕೋಟಿ ಕೋಟಿ ಸಂಭಾವನೆ ಪಡೆಯುವ ಈ ನಟನ ಸಹೋದರ ದಿನಕರ್‌ ತೂಗುದೀಪ ಇನ್ನೂ ಬಾಡಿಗೆ ಮನೆಯಲ್ಲಿಯೇ ವಾಸವಿದ್ದಾರೆ. 

ಈ ನಡುವೆ ದರ್ಶನ್‌ ಗೆಳತಿ ಪವಿತ್ರಾ ಗೌಡ ಮೂರಂತಸ್ತಿನ ಸ್ವಂತ ಐಶಾರಾಮಿ ಬಂಗಲೆಯಲ್ಲಿದ್ದಾರೆ. ಈ ಎರಡು ವಿಚಾರ ನಟ ದರ್ಶನ್‌ ಜೈಲಿಗೆ ಹೋದ ಬಳಿಕ ಚರ್ಚೆಯ ಮುನ್ನೆಲೆಗೆ ಬಂದಿವೆ. ಸಹೋದರನಿಗೆ ಒಂದು ಮನೆ ಕಟ್ಟಿಸಿಕೊಡದ ದರ್ಶನ್‌, ಪವಿತ್ರಾ ಗೌಡಗೆ ಮೂರಂತಸ್ತಿನ ಬಂಗಲೆ ಕಟ್ಟಿಸಿಕೊಟ್ಟಿದ್ದಾರೆ ಎಂದೇ ಮಾತನಾಡಿಕೊಳ್ಳುತ್ತಿದ್ದಾರೆ.

ಆದರೆ ಇದೀಗ ನಟ ದರ್ಶನ್ ಸಹೋದರ ದಿನಕರ್ ತೂಗುದೀಪ ಇನ್ನೂ ಬಾಡಿಗೆ ಮನೆಯಲ್ಲಿಯೇ ವಾಸವಿದ್ದಾರೆ. ಅದು ನಿಜ ಸಂಗತಿ. ಆದರೆ ಅವರಿರುವ ಮನೆ ಬಡವರ ಮನೆಯಂತೆನೂ ಇಲ್ಲ. 2 BHK ಮನೆಯಲ್ಲಿಯೇ ಅವರು ವಾಸವಿದ್ದಾರೆ. ಒಬ್ಬ ಸ್ಟಾರ್‌ ಮನೆ ಹೇಗಿರಬೇಕೋ ಹಾಗೆಯೇ ಇದೆ. ಅದೇ ರೀತಿ ದಿನಕರ್‌ಗೆ ಮನೆ ಬಗ್ಗೆ ಅವರದೇ ಆದ ಒಂದಷ್ಟು ಆಸೆ, ಕನಸುಗಳಿವೆ. 

ಸ್ವಂತ ಮನೆಯನ್ನು ಸ್ವಂತ ದುಡ್ಡಿನಲ್ಲಿಯೇ ಕಟ್ಟಿಸಬೇಕು ಎಂಬ ಕನಸಿದೆ. ತೆರೆಮರೆಯಲ್ಲಿಯೇ ಅದರ ಕೆಲಸ ಮಾಡುತ್ತಿದ್ದಾರೆ. ಹಾಗಾಗಿಯೇ ಇನ್ನೂ ಬಾಡಿಗೆ ಮನೆಯಲ್ಲಿದ್ದಾರೆ. ಕೆಎಲ್‌ಇ ಕಾಲೇಜು ಬಳಿ ಮನೆ ಕಟ್ಟಿಸುವ ಪ್ಲಾನ್‌ ಅವರಿಗಿದೆ. ದರ್ಶನ್‌ ಸಹ ಈ ವಿಚಾರದಲ್ಲಿ ಮಧ್ಯ ಪ್ರವೇಶ ಮಾಡಿಲ್ಲ. ಒಂದು ವೇಳೆ ದರ್ಶನ್‌ ಮುಂದಾಗಿದ್ದೇ ಆದರೆ, ಇಷ್ಟೊತ್ತಿಗೆ ದೊಡ್ಡ ಬಂಗಲೆಯಲ್ಲಿಯೇ ದಿನಕರ್‌ ಇರುತ್ತಿದ್ದರು ಎಂದು ನಿರ್ದೇಶಕ ವಾಸು ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.