ಕನ್ನಡದ ಈ ಚೆಲುವೆ ಈಗ ಎಲ್ಲಿದ್ದಾರೆ ಗೊ ತ್ತಾ;

 | 
Uu

ಹಲವು ವರ್ಷಗಳ ಹಿಂದೆ ಕನ್ನಡ ಕಿರುತೆರೆಯಲ್ಲಿ ಒಳ್ಳೆಯ ಹೆಸರು ಮಾಡಿದ ಅನುರೂಪ ಧಾರಾವಾಹಿಯಲ್ಲಿ ಮುದ್ದುಮುಖದ ಚೆಲುವೆಯಾಗಿ ಮಿಂಚಿದ್ದ ಐಶ್ವರ್ಯ ಪಿಸ್ಸೆ ಈಗ ಕಿರುತೆರೆ ವೀಕ್ಷಕರ ಪಾಲಿಗೆ ಪ್ರೀತಿಯ 'ಸುಂದರಿ'. ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸುಂದರಿ' ಧಾರಾವಾಹಿಯಲ್ಲಿ ನಾಯಕಿ ಸುಂದರಿ ಆಗಿ ಅಭಿನಯಿಸಿದ್ದಾರೆ ಐಶ್ವರ್ಯ ಪಿಸ್ಸೆ.

ಎರಡು ಯುವ ಜೋಡಿಗಳ ಪ್ರೀತಿ ಹಾಗೂ ಜೀವನದ ಕಥೆ ಹೊಂದಿದ್ದ ಅನುರೂಪ ಎಂಬ ಧಾರಾವಾಹಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ವರ್ಷಗಳ ಹಿಂದೆ ಪ್ರಸಾರವಾಗುತ್ತಿತ್ತು. ಈ ಧಾರಾವಾಹಿಯಲ್ಲಿ ಮುಗ್ಧತೆಯಿಂದ ನಟಿಸಿ ಎಲ್ಲರ ಮನೆ ಮಗಳಾಗಿದ್ದ ಐಶ್ವರ್ಯ ಪಿಸ್ಸೆ ಪುನರ್ ವಿವಾಹ ಎಂಬ ಸಿರೀಯಲ್ ಮೂಲಕ ಮೊದಲು ಕಿರುತೆರೆಗೆ ಕಾಲಿಟ್ಟರು.

ಶೃತಿ ನಾಯ್ಡು ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿದ್ದ 'ಪುನರ್ ವಿವಾಹ' ಧಾರಾವಾಹಿಯಲ್ಲಿ ಒಂದು ಸಣ್ಣ ಪಾತ್ರದ ಮೂಲಕ ಅಭಿನಯಕ್ಕೆ ಕಾಲಿಟ್ಟ ಐಶ್ವರ್ಯಾ ಅವರಿಗೆ ನಂತರ 'ಅನುರೂಪ' ಎಂಬ ಧಾರಾವಾಹಿಯಲ್ಲಿ ನಾಯಕ ನಟಿಯಾಗಿ ಅಭಿನಯಿಸಲು ಅವಕಾಶ ದೊರಕಿತು. ಈ ಧಾರಾವಾಹಿಯಲ್ಲಿ ಮೇಘನಾ ಎಂಬ ಪಾತ್ರದ ಮೂಲಕ ಮಿಂಚಿದ್ದ ಈಕೆ ನಂತರ ಒಂದು ಪೌರಾಣಿಕ ಧಾರಾವಾಹಿಯಲ್ಲೂ ಕಾಣಿಸಿಕೊಂಡರು.

ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಗಿರಿಜಾ ಕಲ್ಯಾಣ ಎಂಬ ಧಾರಾವಾಹಿಯಲ್ಲಿ ಅಭಿನಯಿಸಿದ ಐಶ್ವರ್ಯ ಪಿಸ್ಸೆ ಅವರು ನಂತರ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸರ್ವ ಮಂಗಳ ಮಾಂಗಲ್ಯೇ ಎಂಬ ಧಾರಾವಾಹಿಯಲ್ಲಿ ಕಾಣಿಸಿಕೊಂಡರು. ಕೋವಿಡ್ ಕಾರಣದಿಂದ ಈ ಧಾರಾವಾಹಿಯು ಅರ್ಧಕ್ಕೆ ನಿಲ್ಲಬೇಕಾಯಿತು. 

ಐಶ್ವರ್ಯ ಪಿಸ್ಸೆ ಹಿರಿತೆರೆಯಲ್ಲಿಯೂ ಮಿಂಚಿದ ಚೆಲುವೆ. ರಾಕಿಂಗ್ ಸ್ಟಾರ್ ಯಶ್ ಅವರ ಅಭಿನಯದ ಸಂತು ಸ್ಟ್ರೈಟ್ ಫಾರ್ವರ್ಡ್ ನಲ್ಲಿ ಯಶ್ ಅವರ ತಂಗಿಯಾಗಿ ಈಕೆ ಅಭಿನಯಿಸಿದ್ದರು. ಇದೀಗ ಕಸ್ತೂರಿ ಧಾರವಾಹಿ ಯಲ್ಲಿ ಮಿಂಚುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.