ವರ್ತೂರು ಸಂತು ಎಲ್ಲಿದ್ದಾರೆ, ಪ್ರೇಕ್ಷಕರಿಗೆ ಬಿಗ್ ಬಾಸ್ ಕೊಡುತ್ತಾ ಗುಡ್ ನ್ಯೂಸ್

 | 
Hg

ಬಿಗ್ ಬಾಸ್ ಮನೆಯಿಂದ 5ನೇ ವಾರ ಯಾರು ಹೊರಗಡೆ ಬರಲಿದ್ದಾರೆ ಎಂಬ ಪ್ರಶ್ನೆ ಇದೆ. ವರ್ತೂರು ಸಂತೋಷ್ ಅವರು ಸೇಫ್ ಆಗಿದ್ದರೂ ಕೂಡ, ನಾನು ಈ ಮನೆಯಲ್ಲಿ ಇರಲು ಸಾಧ್ಯವಾಗ್ತಿಲ್ಲ ಎಂದು ಹೇಳಿದ್ದಾರೆ. ವರ್ತೂರು ಸಂತೋಷ್ ಅವರ ನಡೆಯಿಂದ ಕಿಚ್ಚ ಸುದೀಪ್ ಕೂಡ ಬೇಸರ ಮಾಡಿಕೊಂಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಸಂಡೇ ವಿಥ್ ಸುದೀಪ ಶೋನಲ್ಲಿ ಈ ವಾರ ಹೊಸ ಟ್ವಿಸ್ಟ್ ಕಾದಿದೆ. 

ಕಲರ್ಸ್ ಕನ್ನಡ ವಾಹಿನಿಯು ಹೊಸ ಪ್ರೋಮೋವನ್ನು ರಿಲೀಸ್ ಮಾಡಿದ್ದು, ವರ್ತೂರು ಸಂತೋಷ್ ಅವರು ನಾನು ಹೊರಗಡೆ ಹೋಗ್ತೀನಿ ಎಂದು ಹೇಳಿದ್ದಾರೆ. ಕಿಚ್ಚ ಸುದೀಪ್ ಅವರು ಜನತೆಯ ವಿರುದ್ಧವಾಗಿ ನಾನು ನಿರ್ಣಯ ತೆಗೆದುಕೊಳ್ಳೋದಿಲ್ಲ ಎಂದು ಹೇಳಿದ್ದಾರೆ.
ಹೊರಗಡೆ ಒಂದು ಘಟನೆ ನಡೆಯಿತು. ಅದನ್ನು ಮರೆತು ಇಲ್ಲಿ ಆಡಬೇಕು ಅಂದರು. ನನಗೆ ಆಗ್ತಾ ಇಲ್ಲ. 

ನಾನು ಹೊರಗಡೆ ಹೋಗಬೇಕು ಎಂದು ವರ್ತೂರು ಸಂತೋಷ್ ಹೇಳಿದ್ದಾರೆ.ಆಗ ಕಿಚ್ಚ ಸುದೀಪ್ ಅವರು 34 ಲಕ್ಷ ಮತಗಳು ಬಂದಿವೆ. ಆ ಜನರ ವಿರುದ್ಧವಾಗಿ ನಾನು ಹೋಗೋಕೆ ಆಗಲ್ಲ, ಹೋಗೋದಿಲ್ಲ, ನನಗೆ ಬೇಸರವಾಗಿದೆ ಎಂದು ಹೇಳಿದ್ದಾರೆ. ವರ್ತೂರು ಸಂತೋಷ್ ಅವರು ಬಿಗ್ ಬಾಸ್ ಮನೆಯ ಗೇಟ್ ಬಳಿ ಬಂದಿದ್ದು, ಸಂಗೀತಾ ಅವರು, ಮತ್ತೆ ಈ ಅವಕಾಶ ಸಿಗೋದಿಲ್ಲ ಎಂದು ಹೇಳಿದ್ದಾರೆ. 

ಹೀಗಿದ್ದರೂ ಕೂಡ ವರ್ತೂರು ಅವರು ಯಾರ ಮಾತನ್ನೂ ಕೇಳಿಲ್ಲ. ಆದರೆ ಸಂತೋಷ್ ಅವರು ಮನೆಯಿಂದ ಹೊರಗಡೆ ಹೋಗೋದು ಡೌಟ್. ಕಿಚ್ಚ ಸುದೀಪ್, ಸ್ಪರ್ಧಿಗಳು ಸೇರಿಕೊಂಡು ಸಂತೋಷ್ ಅವರನ್ನು ಅಲ್ಲಿಯೇ ಇರಬೇಕು ಅಂತ ಮನವೊಲಿಸಿದ್ದಾರೆ ಹಾಗಾಗಿ ವರ್ತೂರ್ ಸಂತೋಷ್ ಅವರು ಇದೀಗ ಸೀಕ್ರೇಟ್ ರೂಮ್ ಸೇರಿದ್ದಾರೆ ಎನ್ನಲಾಗುತ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.