ದರ್ಶನ್ ಜೀವನದಲ್ಲಿ ಬಿರುಗಾಳಿ ಎಬ್ಬಿಸಿದ್ದು ಯಾರು, ಒಬ್ಬ ಒಳ್ಳೆಯ ನಟನ ಬಾಳಲ್ಲಿ ಸುಂಟರಗಾಳಿ
ಸಿನಿಮಾಗಳ ಜೊತೆ ಜೊತೆಗೆ ವಿವಾದಗಳಿಂದಲೂ ಭಾರಿ ಸದ್ದು ಸುದ್ದಿ ಮಾಡಿದ್ದ ನಟ ದರ್ಶನ್ ಹಾಗೂ ನಟಿ ನಿಖಿತಾ ಒಂದೇ ವೇದಿಕೆಯಲ್ಲಿ ಮಿಂಚಿದ್ದರು.ನಟಿ ನಿಖಿತಾ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಡುವೆ ಏನಿತ್ತೋ, ಏನಿಲ್ವೋ ಯಾರಿಗೂ ಗೊತ್ತಿಲ್ಲ. ಆದ್ರೆ, ಅವರಿಬ್ಬರ ಕುರಿತು ಗಾಂಧಿನಗರದಲ್ಲಿ ಏನೇನಾಯ್ತು ಅಂತ ಇಡೀ ಕರ್ನಾಟಕಕ್ಕೆ ಗೊತ್ತು. ಹಿಂದೊಮ್ಮೆ ನಾನೇನು ಮಾಡ್ಲಿಲ್ಲ ಅಂತ ನಟಿ ನಿಖಿತಾ ಮಾಧ್ಯಮಗಳ ಮುಂದೆ ಸಾರಿ ಸಾರಿ ಹೇಳಿ ಕಣ್ಣೀರಿಟ್ಟಿದ್ದರು.
ಅದಾದ ಮೇಲೆ ನಿಖಿತಾ ದರ್ಶನ ಆಗ್ಲಿಲ್ಲ ಆದರೆ ಈಗ ಕ್ಯಾತೆ ತೆಗೆದಿದ್ದು ಪವಿತ್ರ ಗೌಡ. ಪವಿತ್ರಾ ಗೌಡ ದರ್ಶನ್ ಅವರನ್ನು ಮೊದಲ ಬಾರಿಗೆ ಭೇಟಿಯಾಗಿದ್ದು ಜಗ್ಗು ದಾದಾ ಚಿತ್ರದ ಸಂದರ್ಭದಲ್ಲಿ ಎನ್ನಲಾಗುತ್ತಿದೆ. ನಂತರದಲ್ಲಿ ಇವರ ಸ್ನೇಹ ಬೆಳೆಯುತ್ತಾ ಹೋಯಿತು ಎನ್ನಲಾಗಿದೆ. ಈ ಮೊದಲು ಕೆಲವು ಸಿನಿಮಾ ಮಾಡಿದ್ದರು ಅಷ್ಟು ಹಿಟ್ ಆಗಿರಲಿಲ್ಲ. ಆ ಸಮಯದಲ್ಲಿಯೇ ಜಗ್ಗು ದಾದಾ ಆಡಿಷನ್ ಕೊಡಲು ಪವಿತ್ರಾ ಗೌಡ ಹೋಗಿದ್ದರು.
ಅಲ್ಲಿಯೇ ದರ್ಶನ್ ಅವರನ್ನ ಪರಿಚಯ ಮಾಡಿಕೊಂಡು ಭೇಟಿಯಾಗಿದ್ದರು ಎನ್ನಲಾಗಿದೆ.ಅಷ್ಟೆ ಅಲ್ಲದೆ ಇನ್ನೊಂದು ಮೂಲದ ಪ್ರಕಾರ ದರ್ಶನ್ ಹಾಗೂ ಪವಿತ್ರಾ ಗೌಡ ಛತ್ರಿಗಳು ಸಾರ್ ಛತ್ರಿಗಳ ಚಿತ್ರದ ಸಂದರ್ಭದಲ್ಲಿ ಇತ್ತು ಎನ್ನಲಾಗಿದೆ. ಒಟ್ಟಿನಲ್ಲಿ ಈ ಸ್ನೇಹ ಇಂದು ದರ್ಶನ್ ಪತ್ನಿ ದ್ವೇಷ ಮಾಡುವವರೆಗೆ ತಲುಪಿದೆ. ಈ ವಿಚಾರಕ್ಕೆ ದರ್ಶನ್ ಪತ್ನಿ ಗರಂ ಆಗಿದ್ದು ವ್ಯಕ್ತಿಯೊಬ್ಬ ವಿವಾಹಿತನೆಂದು ತಿಳಿದಿದ್ದರೂ ಕೂಡ ಈಕೆ ತನ್ನ ವೈಯಕ್ತಿಕ ಪೂರೈಕೆಗಾಗಿ ಹಾಗೂ ಲಾಭಕ್ಕಾಗಿ ಆತನಿಗೆ ಹತ್ತಿರವಾಗುತ್ತಾಳೆ.
ಪವಿತ್ರಾ ಮತ್ತು ಸಂಜಯ್ ಸಿಂಗ್ ಅವರ ಮಗಳು ಖುಷಿ ಗೌಡ ಎಂಬುದನ್ನು ಈ ಫೋಟೊಗಳು ಸ್ಪಷ್ಟವಾಗಿ ಸಾಬೀತು ಮಾಡುತ್ತವೆ ಎಂದು ಬರೆದುಕೊಂಡಿದ್ದರು. ಅದೇ ರೀತಿ ಪವಿತ್ರಾ ಗೌಡ ಹಾಗೂ ಅವರ ಪತಿ ಸಂಜಯ್ ಸಿಂಗ್ರ ಹಳೆಯ ಚಿತ್ರಗಳನ್ನು ವಿಜಯಲಕ್ಷ್ಮಿ ದರ್ಶನ್ ತಮ್ಮ ಸಂದೇಶದೊಂದಿಗೆ ಹಂಚಿಕೊಂಡಿದ್ದಾರೆ.
ಫೋಟೋ ವೈರಲ್ ಆಗುತ್ತಿದ್ದಂತೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ನಟಿ ಪವಿತ್ರಾ ವಿರುದ್ಧ ಮಾತನಾಡಿದ್ದಾರೆ. ಈ ಬೆನ್ನಲ್ಲೆ ಪವಿತ್ರಾಗೌಡ ಮತ್ತೊಮ್ಮೆ ಪೋಸ್ಟ್ ಮಾಡಿ ಸ್ಪಷ್ಟ ನೆ ನೀಡಿದ್ದಾರೆ. ನಾನು ಪವಿತ್ರ ಗೌಡ, ನನ್ನ ಮಗಳು ಖುಷಿ ಗೌಡ.
ನಾನು ಸಂಜಯ್ ಎಂಬ ವ್ಯಕ್ತಿಯನ್ನು ಮದುವೆಯಾಗಿದ್ದು ನಂತರ ಖುಷಿ ಗೌಡ ಹುಟ್ಟಿರುತ್ತಾಳೆ. ಖುಷಿ ದರ್ಶನ್ ಮಗಳು ಎಂದು ಹೇಳಿಲ್ಲ. ನಾನು ಯಾವುದೇ ವೈಯಕ್ತಿಕ ಉದ್ದೇಶದಿಂದ ಹೇಳಿಲ್ಲ. ಪ್ರೀತಿ ಮತ್ತು ಆರೈಕೆಯಿಂದ 10 ವರ್ಷ ಜೊತೆಗೆ ಇರುವುದು ಸುಲಭವಲ್ಲ ಎಂದು ಪೋಸ್ಟ್ ಮಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.