ಕುಂಡಲಿನಿ ಶಕ್ತಿ ಹೊಂದಿರುವ ಸಾಯಿ ಬಾಬಾ ಅವರನ್ನು ಕೊ.ಲೆ ಮಾಡಿದ್ದು ಯಾ.ರು, ದೇವ ಮನುಷ್ಯನ ಸಾ.ವಿನ ಕ್ಷಣ
ಶಿರಡಿಯ ಸಾಯಿ ಬಾಬಾರಿಗೆ ಜಗತ್ತಿನಾದ್ಯಂತ ಭಕ್ತಗಣವಿದೆ. ಪ್ರತಿಯೊಬ್ಬರೂ ಸಾಧ್ಯವಾದಷ್ಟು ಸಹಾಯ ಮಾಡುತ್ತಾ, ತಾವೂ ಬೆಳೆದು ಇತರರನ್ನೂ ಬೆಳೆಸಬೇಕು ಎಂದು ಸಾರಿದವರು ಸಾಯಿ ಬಾಬಾ. ಧ್ಯಾನ ಹಾಗೂ ಆಧ್ಯಾತ್ಮದ ಶಕ್ತಿಯನ್ನು ಸಾರಿದ ಸಾಯಿಬಾಬಾ ಯಾವುದೇ ಧರ್ಮವನ್ನು ಪ್ರತಿಪಾದಿಸಲಿಲ್ಲ. ಬದಲಿಗೆ ದೇವರೊಬ್ಬನೇ, ಆತ ಸರ್ವಶಕ್ತ ಎಂದರು. ಸಾಯಿ ಬಾಬಾ ಭಕ್ತರು ಅವರ ಆದರ್ಶಗಳು, ಪಾಠಗಳಿಗೆ ಮಂತ್ರ ಮುಗ್ಧರಾಗಿದ್ದಾರೆ. ಇಂಥಾ ಈ ಬಾಬಾ ಕುರಿತ ಕೆಲ ಆಸಕ್ತಿಕರ ವಿಷಯಗಳು ಇಲ್ಲಿವೆ.
ಸಾಯಿಬಾಬಾ ಬಗ್ಗೆ ನಿಮಗೆ ಗೊತ್ತಿರಬಹುದು. ಆದರೆ ಅವರ ನಿಜ ನಾಮಧೇಯ ಖಂಡಿತಾ ಗೊತ್ತಿರಲಿಕ್ಕಿಲ್ಲ. ನಿಮಗಷ್ಟೇ ಅಲ್ಲ, ಯಾರಿಗೂ ಸಾಯಿ ಬಾಬಾ ನಿಜ ಹೆಸರು ತಿಳಿದಿಲ್ಲ. ಅವರ ಮೂಲ ಧರ್ಮವಾಗಲೀ, ಬದುಕಿನ ಮೊದಲ ವರ್ಷಗಳ ಬಗ್ಗೆಯಾಗಲೀ, ಮೂಲ ಹೆಸರಾಗಲೀ ತಿಳಿದವರು ಯಾರೂ ಇಲ್ಲ. ಸನ್ಯಾಸಿಯಾಗಿ ಶಿರಡಿಗೆ ಬಂದರು, ಶಿಷ್ಯವರ್ಗವನ್ನು ಗಳಿಸಿದರು. ಅವರ ಶಿಷ್ಯರು ಅವರನ್ನು ಸಾಯಿ ಬಾಬಾ ಎಂದರು. ಅವರ ಜೀವನದ ಹಿನ್ನೆಲೆ ತಿಳಿದಿಲ್ಲವಾದರೂ ಫಕೀರರೊಬ್ಬರು ತನ್ನ ಬೆಳೆಸಿದ್ದಾಗಿ ಸಾಯಿಬಾಬಾ ಹೇಳಿದ್ದಾರೆ.
ಸಾಯಿ ಬಾಬಾ ಯಾವುದೋ ಒಂದು ಧರ್ಮದ ಪ್ರತಿಪಾದಕರಲ್ಲ. ಅವರು ಈಶ್ವರನೂ ಹೌದು, ಅಲ್ಲಾನೂ ಹೌದೆಂದರು. ದೇವರೊಬ್ಬನೇ. ದೇವರಿದ್ದಾನೆ ಎಂದು ನಂಬಿದರೆ ಸಾಕೆಂದು ಭಕ್ತರಿಗೆ ಹೇಳುತ್ತಿದ್ದರು. ಮಂದಿರ, ಮಸೀದಿ ಎರಡಕ್ಕೂ ಭೇಟಿ ನೀಡಿ ಮಂತ್ರ ಹೇಳುತ್ತಿದ್ದರು. ಇದರಿಂದ ಹಿಂದೂಗಳು ಹಾಗೂ ಮುಸ್ಲಿಮರೆಲ್ಲರೂ ಸಾಯಿ ಬಾಬಾರನ್ನು ದೇವರೆನ್ನುತ್ತಾರೆ. ಸಾಯಿ ದರ್ಬಾರ್‌ನಲ್ಲಿ ಜಾತಿ, ಮತ, ಧರ್ಮದ ಹೆಸರಿನಲ್ಲಿ ಬೇಧವಿಲ್ಲದೆ, ಎಲ್ಲರನ್ನೂ ಒಂದೇ ರೀತಿ ಕಾಣಲಾಗುತ್ತದೆ.
ಸಾಯಿ ಬಾಬಾ ತಮ್ಮ ಬದುಕಿನ ಐದು ವರ್ಷಗಳ ಕಾಲ ಶಿರಡಿಯ ಸುತ್ತಮುತ್ತ ಓಡಾಡುತ್ತಾ, ಬೇವಿನ ಮರದ ಕೆಳಗೆ ಧ್ಯಾನಸ್ಥರಾಗಿ ಕೂರುತ್ತಿದ್ದರು. ತಮ್ಮ ಜೀವನದ ಅಂತಿಮ ಉದ್ದೇಶ ಪ್ರೀತಿಯನ್ನು ಹರಡುವುದಾಗಿದೆ ಎಂದು ನಂಬಿದ್ದರು. ಸಾಯಿಬಾಬಾ ಭಕ್ತರಲ್ಲಿ ಅನೇಕರು ಇಂದಿಗೂ ಅವರನ್ನು ಶಿವನ ಅವತಾರವೆಂದೇ ನಂಬುತ್ತಾರೆ. 1918ರಲ್ಲಿ ಬಾಬಾ ವಿಧಿವಶರಾಗುವ ಮುಂಚೆ ತಾವು 8 ವರ್ಷಗಳ ಬಳಿಕ ಒಬ್ಬ ಬಾಲಕನಾಗಿ ಮತ್ತೆ ಬರುವುದಾಗಿ ಹೇಳಿದ್ದರು.
ಪುಣ್ಯ ಪುರುಷ, ದೈವೀ ಸಂಭೂತರಾದ ಶ್ರೀಸಾಯಿಬಾಬಾರು 1918 ರ ದಸರಾ ದಿನದಂದು ಮಧ್ಯಾಹ್ನ ಶಿರಡಿಯಲ್ಲಿ ತಮ್ಮ ಕೊನೆಯುಸಿರೆಳೆದರು ಎಂದು ಹೇಳಲಾಗುತ್ತದೆ. ಸಾಯಿಬಾಬಾರು ಮರಣ ಹೊಂದುವ ಮೊದಲೇ ತನ್ನ ಭಕ್ತರಿಗೆ ಕೊನೆಯುಸಿರೆಳೆಯಲು ದಸರಾ ಉತ್ತಮ ದಿನವೆಂದು ಹೇಳಿದ್ದರು. ಆಹಾರ ಮತ್ತು ನೀರನ್ನು ತ್ಯಜಿಸಿ, ಅವರು ತಮ್ಮ ಮರ್ತ್ಯ ದೇಹವನ್ನು ತ್ಯಜಿಸಿ ಬ್ರಾಹ್ಮಣರಾದರು. ಆ ದಿನವೇ ವಿಜಯದಶಮಿ / ದಸರಾ ದಿನ ಎನ್ನುವುದು ವಿಶೇಷವಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.