'ಸೋನು ಗೌಡ ಮೊಬೈಲ್ ನಿಂದ ವಿಡಿಯೋ ಲೀಕ್ ಮಾಡಿದ್ದು ಯಾರು ಗೊ ತ್ತಾ' ಡಿವೋರ್ಸ್ಗೆ ಕಾರಣ ಬಿಚ್ಚಿಟ್ಟ ನ.ಟಿ

 | 
ರಿ೭ೀ

ಪೊಲೀಸ್ ಕ್ವಾಟ್ರಸ್, 'ದ್ಯಾವ್ರೇ', 'ಹಾಫ್ ಮೆಂಟ್ಲು', 'ಗುಲ್ಟು', 'ಐ ಲವ್‌ ಯು' ಹೀಗೆ ಹಲವು ಸಿನಿಮಾಗಳಲ್ಲಿ ನಟಿಸಿದ ಸೋನು ಯಾರಿಗೆ ಗೊತ್ತಿಲ್ಲಾ ಹೇಳಿ.ಸದ್ಯ ಆಕೆಯ ಕೈಯಲ್ಲಿ ದೊಡ್ಡ ಅವಕಾಶಗಳು ಇಲ್ಲ. 'ಮರೀಚಿ' ಚಿತ್ರದಲ್ಲಿ ಇತ್ತೀಚೆಗೆ ನಟಿಸಿದ್ದರು. ಇನ್ನು ಸೋನು ಸಹೋದರಿ ನೇಹಾ ಕೂಡ ಬಣ್ಣದ ಲೋಕದಲ್ಲಿ ಗುರ್ತಿಸಿಕೊಂಡಿದ್ದಾರೆ. ಚಿತ್ತಾರ ಯೂಟ್ಯೂಬ್‌ ಚಾನಲ್‌ನಲ್ಲಿ ಸೋನು ಗೌಡ ತಮ್ಮ ಮದುವೆ ಹಾಗೂ ಡಿವೋರ್ಸ್‌ ವಿಚಾರವನ್ನು ಬಿಚ್ಚಿಟ್ಟಿದ್ದಾರೆ.

ಕೆಲವೊಮ್ಮೆ ಯಾಕೆ ಇಷ್ಟೆಲ್ಲಾ ಆಯ್ತು ಅನ್ನಿಸುತ್ತದೆ. ನನಗೆ ಯಾಕೆ ಅಂತಲೂ ಅಂದುಕೊಳ್ಳುತ್ತೇನೆ. ಆದರೂ ಎಲ್ಲವನ್ನು ಮರೆತು ಮುಂದೆ ಸಾಗಬೇಕು. ನನ್ನ ಪಾಸ್ಟ್ ಬದಲಿಸಲು ಸಾಧ್ಯವಿಲ್ಲ. ಅದರ ಬಗ್ಗೆ ಕೊರಗುತ್ತಾ ಕೂರಲು ಆಗಲ್ಲ. ಇವತ್ತಿಗೂ ಅದರ ಬಗ್ಗೆ ಕೆಲವರು ಪ್ರಶ್ನೆ ಕೇಳುತ್ತಿರುತ್ತಾರೆ. ಆದರೆ ಆ ಸಮಯದಲ್ಲಿ ನಾನು ಒಬ್ಬೊಂಟಿ ಎನಿಸಿತ್ತು. ಪೋಷಕರು ಬೆಂಬಲಕ್ಕೆ ನಿಂತರೂ ಅದರಿಂದ ಹೊರ ಬರಲು ಸಾಧ್ಯವಾಗಲಿಲ್ಲ. ನನಗೆ ಮಾತ್ರವಲ್ಲ, ನಾನು ಮದುವೆ ಆಗಿದ್ದ ವ್ಯಕ್ತಿ ಕೂಡ ಖಿನ್ನತೆಗೆ ಒಳಗಾಗಿದ್ದರು. ಇಬ್ಬರಿಗೂ ಅದನ್ನು ಹೇಗೆ ಬ್ಯಾಲೆನ್ಸ್ ಮಾಡಬೇಕು ಎಂದು ಗೊತ್ತಾಗಲಿಲ್ಲ.

ಇವತ್ತಿಗೂ ನಾವಿಬ್ಬರು ಸ್ನೇಹಿತರ ರೀತಿ ಇದ್ದೀವಿ. ಆಗಾಗ್ಗೆ ಮಾತನಾಡುತ್ತಿರುತ್ತೀವಿ. ಜಗಳ ನಮ್ಮ ನಡುವೆ ನಡೆಯಲಿಲ್ಲ. ಅದು ನನಗೆ ಇಷ್ಟವೂ ಇಲ್ಲ. ಅವರಿಗೂ ಅದನ್ನೇ ಹೇಳಿದ್ದೆ. ತಮ್ಮ ಬಗ್ಗೆ ಅವ್ರು ಹೇಳಿದ್ರು. ಆ ವಯಸ್ಸಲ್ಲಿ ಏನು ತಪ್ಪು ಆಯ್ತೋ ಅದು ಆಯ್ತು. ನಾನು ಪ್ರೀತಿಸಿದ ವ್ಯಕ್ತಿ ಕೂಡ ಒಳ್ಳೆಯವರು. ಮಾಧ್ಯಮದಲ್ಲಿ ಏನೇನೋ ಬಂತು. ನಿಜ ಹೇಳಬೇಕು ಅಂದ್ರೆ, ಯಾರೋ ಹ್ಯಾಕರ್ ಅದನ್ನು ಮಾಡಿದ್ದು. ಆತ ಮಾಡಿದ್ದಲ್ಲ. ಅಂತಹ ಸಮಯದಲ್ಲಿ ಅವ್ರು ನನ್ನ ಬೆಂಬಲಕ್ಕೆ ನಿಲ್ಲಲಿಲ್ಲ. ನಾನು ಕುಗ್ಗಿ ಹೋಗಿದ್ದೆ.

ಎಲ್ಲರೂ ನನ್ನನ್ನು ದೂಷಿಸಲು ಆರಂಭಿಸಿದರು. ನಾನು ಹೊರಗಡೆ ಹೋದರೆ ಹುಡುಗರು ಬಗ್ಗೆಯೇ ಮಾತನಾಡುತ್ತಿದ್ದರು. ಆ ಸಮಯಲ್ಲಿ ನಾನು ಸತ್ತು ಹೋಗಬೇಕು ಎನ್ನುವಷ್ಟು ಹಿಂಸೆ ಆಗುತ್ತಿತ್ತು. ಅಷ್ಟು ಹೀನಾಯವಾಗಿ ಮಾತನಾಡುತ್ತಿದ್ದರು. ಅದು ನನ್ನ ಪತಿಗೆ ಅರ್ಥವಾಗುತ್ತಿಲ್ಲವಲ್ಲ ಎಂದು ನಾನು ತಪ್ಪು ತಿಳಿದುಕೊಳ್ಳುತ್ತಿದ್ದೆ. ಆದರೆ ಅವರು ಬೇರೆ ಸಮಸ್ಯೆಗಳಿಂದ ಬಳಲುತ್ತಿದ್ದರು. ಆದರೆ ಡಿವೋರ್ಸ್ ಬಳಿಕ ಅವರ ಜೊತೆ ಮಾತನಾಡಿದೆ. ಅವ್ರು ತಮ್ಮ ವರ್ಷನ್ ಹೇಳಿದರು. ಆಗ ನಾವಿಬ್ಬರು ತಪ್ಪು ಮಾಡಿದ್ದೀವಿ ಅನಿಸಿತು. ಇವತ್ತೂ ಇಬ್ಬರೂ ಆರಾಮಾಗಿ ಖುಷಿ ಖುಷಿಯಾಗಿ ಇದ್ದೀವಿ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.