ಭಾವನಾ ಪ್ರೆಗ್ನೆನ್ಸಿ ಹಿಂದೆ ಇದ್ದವರು ಯಾ ರು, ಎಲ್ಲರ ಕುತೂಹಲಕ್ಕೆ ಸ್ಪಷ್ಟತೆ ಕೊಟ್ಟ ಭಾವನಾ
Jul 5, 2025, 18:46 IST
|

ನಟಿ ಮತ್ತು ನೃತ್ಯಗಾರ್ತಿ ಭಾವನಾ ರಾಮಣ್ಣ ಈಗ ತಾಯ್ತನದ ಸಂಭ್ರಮದಲ್ಲಿದ್ದಾರೆ. ತಾಯಿಯಾಗುವ ತಮ್ಮ ಆಳವಾದ ಬಯಕೆಯನ್ನು ಭಾವನಾ ರಾಮಣ್ಣ ಇದೀಗ ಪೂರೈಸಿಕೊಳ್ಳುತ್ತಿದ್ದಾರೆ. 40ರ ಹರೆಯದಲ್ಲಿ ಐವಿಎಫ್ ಮೂಲಕ ಭಾವನಾ ರಾಮಣ್ಣ ಗರ್ಭ ಧರಿಸಿದ್ದಾರೆ. ಮದುವೆಯಾಗದೆ ಸಿಂಗಲ್ ಪೇರೆಂಟ್ ಆಗಿ ಅವಳಿ ಮಕ್ಕಳ ನಿರೀಕ್ಷೆಯಲ್ಲಿದ್ದಾರೆ ಭಾವನಾ ರಾಮಣ್ಣ.
ನಾನು ಯಾವಾಗಲೂ ಮಕ್ಕಳೊಂದಿಗೆ ಇರಲು ಇಷ್ಟಪಡುತ್ತಿದ್ದೆ, ಆದರೆ ನನ್ನ ಸ್ವಂತ ಮಕ್ಕಳನ್ನು ಹೊಂದುವ ಆಲೋಚನೆ ನನ್ನ ಇಪ್ಪತ್ತರ ಹರೆಯದಲ್ಲಿ ಎಂದಿಗೂ ಬೇರೂರಲಿಲ್ಲ. ನನ್ನ ಮೂವತ್ತರ ಹರೆಯದಲ್ಲಿ, ನಾನು ಪ್ರೀತಿಗೆ ಸಿದ್ಧಳಾಗಿದ್ದೆ, ಆದರೆ ಆಗಲೂ, ತಾಯ್ತನವು ನಾನು ಪರಿಗಣಿಸುವ ವಿಷಯವಾಗಿರಲಿಲ್ಲ. ನಾನು 40 ವರ್ಷಕ್ಕೆ ಕಾಲಿಟ್ಟಾಗ ತಾಯಿಯಾಗುವ ಬಯಕೆಯನ್ನು ನಿರ್ಲಕ್ಷಿಸಲು ಸಾಧ್ಯವಾಗಲಿಲ್ಲ. ನಾನು ಈಗ ಆ ಆಳವಾದ ಬಯಕೆಯನ್ನು ಪೂರೈಸಿಕೊಳ್ಳುತ್ತಿದ್ದೇನೆ. ನಾನೀಗ ಆರು ತಿಂಗಳ ಗರ್ಭಿಣಿ. ಅವಳಿ ಮಕ್ಕಳನ್ನು ನಿರೀಕ್ಷಿಸುತ್ತಿದ್ದೇನೆ ಎಂದು ಸಂದರ್ಶನದಲ್ಲಿ ಭಾವನಾ ರಾಮಣ್ಣ ಹೇಳಿದ್ದಾರೆ.
ಭಾವನಾ ಅವರು ಮೊದಲು ಸಾಂಪ್ರದಾಯಿಕ ರೀತಿಯಲ್ಲಿ ತಾಯಿಯಾಗಲು ಬಯಸಿದ್ದರು. ಆದರೆ, ಮದುವೆಯಾಗದ ಕಾರಣ ಸಹಾಯಕ ಸಂತಾನೋತ್ಪತ್ತಿ ಸೇರಿದಂತೆ ಇತರ ಸಾಧ್ಯತೆಗಳೆಡೆಗೆ ಅವರು ಗಮನ ಹರಿಸಬೇಕಾಯಿತು. ತಾಯ್ತನವನ್ನು ಆಯ್ಕೆ ಮಾಡುವ ಸಿಂಗಲ್ ಅಥವಾ ಮದುವೆಯಾಗದ ಮಹಿಳೆಯರಿಗೆ ದೀರ್ಘಕಾಲದವರೆಗೆ ಕಾನೂನಿನ ಬೆಂಬಲವಿರಲಿಲ್ಲ. ಆದ್ರೀಗ ಕಾನೂನಿನ ಚೌಕಟ್ಟಿನಲ್ಲಿ ಬದಲಾವಣೆಗಳಾಗಿವೆ. ಹೀಗಾಗಿ, ನಾನು ಐವಿಎಫ್ ಕ್ಲಿನಿಕ್‌ಗಳನ್ನು ಸಂಪರ್ಕಿಸಲು ಪ್ರಾರಂಭಿಸಿದೆ. ಆದರೆ, ಹಲವು ಐವಿಎಫ್ ಕ್ಲಿನಿಕ್‌ಗಳು ನನ್ನನ್ನ ರಿಜೆಕ್ಟ್ ಮಾಡಿದವು. ನಾನು ಸಿಂಗಲ್ ಮತ್ತು ಮದುವೆಯಾಗದ ಮಹಿಳೆ ಎಂದು ತಿಳಿದ ತಕ್ಷಣ ಅನೇಕ ವೈದ್ಯರು ಫೋನ್ ಕಟ್ ಮಾಡಿದರು ಎಂದು ಭಾವನಾ ರಾಮಣ್ಣ ತಿಳಿಸಿದ್ದಾರೆ.
ಕೆಲವೇ ತಿಂಗಳುಗಳ ಹಿಂದೆಯಷ್ಟೇ ನಾನು ಮನೆಗೆ ಹತ್ತಿರವಿದ್ದ ಕ್ಲಿನಿಕ್‌ಗೆ ಹೋದೆ. ದಾನಿಯನ್ನು ಆರಿಸಿಕೊಂಡು, ಚಿಕಿತ್ಸೆಯನ್ನು ಪ್ರಾರಂಭಿಸಿದೆ. ನನ್ನ ವೈದ್ಯರು ತುಂಬಾ ಬೆಂಬಲ ನೀಡಿದ್ದಾರೆ. ನನ್ನ ಪ್ರೆಗ್ನೆನ್ಸಿ ಪ್ರಯಾಣದ ಪ್ರತಿಯೊಂದು ಹಂತದಲ್ಲೂ ನನ್ನ ವೈದ್ಯರು ನನ್ನ ಜೊತೆಗಿದ್ದಾರೆ. ನಾನು ಅದೃಷ್ಟವಂತೆ: ಮೊದಲ ಪ್ರಯತ್ನದಲ್ಲಿಯೇ ನಾನು ಗರ್ಭಿಣಿಯಾದೆ. ನಾನು ಮನೆಗೆ ಬಂದು ನನ್ನ ತಂದೆಗೆ ನಾನು ಐವಿಎಫ್ ಚಿಕಿತ್ಸೆಯನ್ನು ಪ್ರಾರಂಭಿಸಿದ್ದೇನೆ ಎಂದು ಹೇಳಿದ್ದು ನನಗೆ ನೆನಪಿದೆ. ಅವರು ತುಂಬಾ ಸಂತೋಷಪಟ್ಟರು. ಎಂದು ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.