ವಿಷ್ಣುವರ್ಧನ್ ದತ್ತು ಪಡೆದ ಮಗಳು ಯಾರದ್ದು, ವಿಷ್ಣುವರ್ಧನ್ ನಂತೆಯೇ ರೂಪ ಹೊಂದಲು ಇದೆಯಂತೆ ರ ಹಸ್ಯ

 | 
Vhi
ಸೆಲೆಬ್ರಿಟಿಗಳ ಬದುಕು ಚಂದ ಆದರೆ ನಾವಂದು ಕೊಂಡಷ್ಟು ಅಲ್ಲವೇ ಅಲ್ಲ.ನಟ ವಿಷ್ಣುವರ್ಧನ್ ಮತ್ತು ಭಾರತಿ ಅವರಿಗೆ ಕೀರ್ತಿ ಮತ್ತು ಚಂದನ ಎಂಬ ಹೆಸರಿನ ಇಬ್ಬರು ದತ್ತು ಪುತ್ರಿಯರಿದ್ದಾರೆ. ಅಂದಹಾಗೆ ಕೀರ್ತಿ ಅವರು ವಿಷ್ಣುವರ್ಧನ್‌ ಅವರ ಮನೆಗೆ ಬಂದಿದ್ದೇಗೆ? ವಿಷ್ಣುವರ್ಧನ್‌ ಮತ್ತು ಭಾರತಿಯವರು ಕೀರ್ತಿ ಅವರನ್ನು ದತ್ತು ಪಡೆದಿದ್ದು ಹೇಗೆ? ಸ್ವಂತ ತಂದೆ-ತಾಯಿ ಯಾರು? ಅನ್ನೋದರ ಬಗ್ಗೆ ಅವರು ಇದೀಗ ಮಾತನಾಡಿದ್ದಾರೆ.
ಹೌದು ಕೀರ್ತಿ ವಿಷ್ಣುವರ್ಧನ್‌ ಅವರು ಭಾರತಿ ಅವರ ಸಹೋಹರಿಯ ಮಗಳು. ಈ ಬಗ್ಗೆ ಮಾತನಾಡುತ್ತಾ, ನನ್ನ ತಾಯಿ ಭಾರತಿ ವಿಷ್ಣುವರ್ಧನ್‌ ಅವರ ಸಹೋದರಿ ಮಗಳು ನಾನು. ಅಪ್ಪ ಮತ್ತು ಅಮ್ಮಗೆ ನನ್ನ ರಿಯಲ್‌ ತಂದೆ-ತಾಯಿ ತುಂಬಾ ಹತ್ತಿರದ ಸಂಬಂಧ. ಹಾಗಾಗಿ ನನ್ನನ್ನು ದತ್ತು ತೆಗೆದುಕೊಂಡರು. ನನ್ನ ಅಮ್ಮ ಭಾರತಿ ಮತ್ತು ಅಪ್ಪ ವಿಷ್ಣುವರ್ಧನ್ ಅವರು ನನ್ನ ರಿಯಲ್‌ ತಾಯಿ ಜಯಶ್ರೀ ಅವರು ಮದುವೆಯಾಗುವಾಗಲೇ, ನಿನಗೆ ಯಾವ ಮಗು ಮೊದಲು ಹುಟ್ಟುತ್ತೋ ಅದು ನನಗೆ ಬೇಕು ಎಂದು ಮಾತು ತೆಗೆದುಕೊಂಡಿದ್ದರು ಎಂದಿದ್ದಾರೆ ಕೀರ್ತಿ ವಿಷ್ಣುವರ್ಧನ್.
ನಾನು ಹುಟ್ಟಿದ ತಕ್ಷಣವೇ ನನ್ನ ಅಪ್ಪ-ಅಮ್ಮ ನಿಗೆ ವಿಷ್ಣುವರ್ಧನ್‌ ಹಾಗೂ ಭಾರತಿ ಅವರು ನನಗೆ ಆ ಮಗು ಬೇಕು ಅಂತ ಕೇಳಿದ್ದರು. ವಿಷ್ಣು ಅಪ್ಪ ಮತ್ತು ಭಾರತಿ ಅಮ್ಮ ಮದುವೆಯಲ್ಲಿ ನಾನು ಅವರ ತೊಡೆ ಮೇಲೆ ಕೂತಿದ್ದೆ. ನಾನು ಹುಟ್ಟಿದಾಗ ಅಪ್ಪ-ಅಮ್ಮ ಸಿನಿಮಾಗಳಲ್ಲಿ ತುಂಬಾ ಬ್ಯುಸಿಯಾಗಿದ್ದುದರಿಂದ ಕೆಲ ವರ್ಷಗಳ ಕಾಲ ನಾನು ನಮ್ಮ ಅಜ್ಜಿ ಜೊತೆ ಇದ್ದೆ. ನನ್ನ ಹದಿಮೂರನೇ ವಯಸ್ಸಿಗೆ ನಾನು ಅಪ್ಪ-ಅಮ್ಮ ಜೊತೆ ಬಂದೆ. ನನ್ನ ರಿಯಲ್‌ ತಂದೆ-ತಾಯಿ ಕೂಡ ಬೆಂಗಳೂರಿಗರೇ ಎಂದು ಕಲಾಮಾಧ್ಯಮ ಯೂಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಕೀರ್ತಿ ಮಾಹಿತಿ ಹಂಚಿಕೊಂಡಿದ್ದಾರೆ.
ನಮ್ಮ ಸಮಾಜದಲ್ಲಿ ಈ ರೀತಿ ದತ್ತು ತೆಗೆದುಕೊಳ್ಳೋದು ಇದೆಲ್ಲವನ್ನೂ ಸ್ವೀಕರಿಸುವುದಿಲ್ಲ. ನನ್ನ ತಂದೆ-ತಾಯಿ ಹೇಳಿದ್ದು ಒಂದೇ ಮಾತು, ಬೇರೆ ಯಾರು ಏನು ಹೇಳ್ತಾರೋ, ಯಾವತ್ತೂ ಕೂಡ ತಲೆ ಕೆಡಿಸಿಕೊಳ್ಳಬಾರದು. ನಾನು ವಿಷ್ಣುವರ್ಧನ್‌ ಆಗಿ ನಿನ್ನನ್ನು ದತ್ತು ತೆಗದುಕೊಂಡಿದ್ದೇನೆ. ನೀನೇ ನಮ್ಮ ಮಗಳು, ಯಾರೂ ಏನಂದರು ಅದರ ಬಗ್ಗೆ ತಲೆಕೆಡಿಸಿಕೊಳ್ಳಬೇಡ. ನಾವು ನಿನ್ನನ್ನು ಪ್ರೀತಿ ಮಾಡ್ತೇವೆ. 
ನೀನು ನಮ್ಮನ್ನು ಪ್ರೀತಿ ಮಾಡ್ತೀಯಾ ಅಷ್ಟೇ. ನಾನು ಆಗ 13 ವರ್ಷ ವಯಸ್ಸಿನವಳಾಗಿದ್ದಾಗ ಅಪ್ಪ ನನಗೆ ಈ ಮಾತನನ್ನು ಹೇಳಿದ್ದರು. ಸಮಾಜದಲ್ಲಿ ಒಂದು ಮಗುವಾಗಿ ಜೊತೆಗೆ ತಂದೆ-ತಾಯಿಯಾಗಿ ಮಾತುಗಳನ್ನು ಕೇಳೋದು ತುಂಬಾ ಕಷ್ಟ ಎಂದರು ಕೀರ್ತಿ ವಿಷ್ಣುವರ್ಧನ್. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.