'ನನ್ನ ಅಪ್ಪ ಎರಡನೇ ಮದುವೆಯಾಗಿರುವಾಗ ನಾನ್ಯಾಕೆ ಮತ್ತೊಂದು ಆಗಬಾರದು; ನ ಟಿ ವಿಜಯಲಕ್ಷ್ಮಿ
ಕನ್ನಡದ ಮಾಣಿಕ್ಯ ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡ
ಬಹುಭಾಷಾ ನಟಿ ವರಲಕ್ಷ್ಮೀ ಶರತ್‌ಕುಮಾರ್ ಸದ್ಯ ಶಬರಿ ಸಿನಿಮಾ ಬಿಡುಗಡೆಯ ಗುಂಗಿನಲ್ಲಿದ್ದಾರೆ. ನಾಯಕಿ ಪ್ರಧಾನ ಈ ಸಿನಿಮಾ ಇದೇ ಮೇ 3ರಂದು ಬಿಡುಗಡೆ ಆಗುತ್ತಿದೆ. ಅನಿಲ್ ಕಾಟ್ಜ್ ನಿರ್ದೇಶನದಲ್ಲಿ ಮೂಡಿಬಂದಿರುವ ಶಬರಿ ಸಿನಿಮಾ ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.
ಮಹಾ ಮೂವೀಸ್ ಬ್ಯಾನರ್‌ನಲ್ಲಿ ಮಹೇಂದ್ರನಾಥ್ ಕೊಂಡ್ಲಾ ಎಂಬುವವರು ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ವರಲಕ್ಷ್ಮೀ, ವೈಯಕ್ತಿಕ ವಿಚಾರಗಳ ಬಗ್ಗೆಯೂ ಮಾತನಾಡಿದ್ದಾರೆ. ಅಷ್ಟಕ್ಕೂ ವರಲಕ್ಷ್ಮೀ ಶರತ್‌ಕುಮಾರ್ ಇತ್ತೀಚೆಗಷ್ಟೇ ನಿಕೋಲಾಯ್ ಸಚ್‌ದೇವ್ ಜತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
ಈ ವಿಚಾರ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಅದಾಗಲೇ ಒಂದು ಮದುವೆಯಾಗಿ, ಆಕೆಯಿಂದ ಡಿವೋರ್ಸ್ ಪಡೆದ ವ್ಯಕ್ತಿಯನ್ನು ವರಲಕ್ಷ್ಮೀ ಮದುವೆಯಾಗುತ್ತಿದ್ದಾರಾ? ಎಂದೇ ಕೆಲವರು ಅಣಕ ಮಾಡಿದ್ದರು. ಇದೇ ವಿಚಾರಕ್ಕೆ ಟ್ರೋಲ್ ಸಹ ಆಗಿದ್ದರು. ಈಗ ಇದೇ ನಿಕೋಲಾಯ್ ಮತ್ತು ಅವರನ್ನು ಮದುವೆ ಆಗುತ್ತಿರುವ ಬಗ್ಗೆ ವರಲಕ್ಷ್ಮೀ ಸಂದರ್ಶನದಲ್ಲಿ ಕೊಂಚ ಬಿರುಸಾಗಿಯೇ ಮಾತನಾಡಿದ್ದಾರೆ.
ನನಗೆ ಸಂತೋಷದಿಂದ ಇರುವುದಷ್ಟೇ ಮುಖ್ಯ. ನಾನು ನೆಗೆಟಿವ್ ಕಾಮೆಂಟ್‌ಗಳತ್ತ ಗಮನ ಹರಿಸಲ್ಲ. ಇನ್ನು ಮದುವೆ ಬಗ್ಗೆ ಹೇಳುವುದಾದರೆ, ನನ್ನ ತಂದೆಯೂ ಎರಡು ಬಾರಿ ಮದುವೆಯಾದರು; ಅದರಲ್ಲಿ ಏನೂ ತಪ್ಪಿಲ್ಲ. ಯಾಕೆಂದರೆ ಅವರೀಗ ಖುಷಿಯಿಂದ ಇದ್ದಾರೆ. ನಿಕ್ ಬಗ್ಗೆ ಜನರು ಹೇಗೆ ಮಾತನಾಡುತ್ತಾರೆ ಎಂಬುದನ್ನು ನಾನು ನೋಡಿದ್ದೇನೆ.
ಅವನು ನನ್ನ ಹ್ಯಾಂಡ್‌ಸಮ್. ನಮ್ಮಿಬ್ಬರ ಸಂಬಂಧದ ಬಗ್ಗೆ ಕೆಟ್ಟ ಕಾಮೆಂಟ್ ಮಾಡುವವರ ಬಗ್ಗೆ ನಾನು ಹೆದರುವುದಿಲ್ಲ. ನಾನ್ಯಾಕೆ ಅವರಿಗೆ ಉತ್ತರ ಕೊಡಬೇಕು ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.