ಕೆಂಡಸಂಪಿಗೆ ಧಾರಾವಾಹಿ ಅಧ೯ಕ್ಕೆ ಬಿಟ್ಟು ಈ ಪಾತ್ರ ಒಪ್ಪಿಕೊಂಡಿದ್ಯಾಕೆ ನಟಿ ಕಾವ್ಯಾ

 | 
ರ್
 ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳ ಪೈಕಿ ಕೆಂಡಸಂಪಿಗೆ ಕೂಡ ಒಂದು. ಕೆಂಡಸಂಪಿಗೆ ಧಾರಾವಾಹಿಯಲ್ಲಿ ಕಥಾನಾಯಕಿ ಸುಮನಾ ಪಾತ್ರಕ್ಕೆ ಮೊದಲು ಬಣ್ಣ ಹಚ್ಚಿದವರು ನಟಿ ಕಾವ್ಯ ಶೈವ. ಕೆಂಡಸಂಪಿಗೆ ಸೀರಿಯಲ್ ಮುಖಾಂತರ ನಟಿ ಕಾವ್ಯ ಶೈವ ಕನ್ನಡಿಗರ ಮನೆ ಮಾತಾದರು. ಕರ್ನಾಟಕದಾದ್ಯಂತ ಜನಪ್ರಿಯತೆ ಪಡೆದರು.
ಕೆಂಡಸಂಪಿಗೆ ಸೀರಿಯಲ್‌ ಕುತೂಹಲಕರ ಘಟ್ಟದಲ್ಲಿ ಇರುವಾಗಲೇ ಸುಮನಾ ಪಾತ್ರಕ್ಕೆ ನಟಿ ಕಾವ್ಯ ಶೈವ ಗುಡ್ ಬೈ ಹೇಳಿದರು. ‘ಕೆಂಡಸಂಪಿಗೆ’ ತಂಡದಿಂದ ಕಾವ್ಯ ಶೈವ ಹೊರನಡೆದರು. ದಿಢೀರ್ ಅಂತ ‘ಕೆಂಡಸಂಪಿಗೆ’ ತಂಡದಿಂದ ಕಾವ್ಯ ಶೈವ ಔಟ್ ಆಗಿದ್ಯಾಕೆ ಎಂಬುದಕ್ಕೆ ಖಚಿತ ಮಾಹಿತಿ ಇಲ್ಲ. ಆದರೆ, ‘ಕೆಂಡಸಂಪಿಗೆ’ ಸೀರಿಯಲ್‌ನಿಂದ ಹೊರಬಂದ್ಮೇಲೆ ಕೊಂಚ ಬ್ರೇಕ್‌ನ ಬಳಿಕ ಹೊಸ ಪ್ರಾಜೆಕ್ಟ್‌ಗೆ ಕಾವ್ಯ ಶೈವ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ನಟಿ ಕಾವ್ಯ ಶೈವ ಸದ್ಯ ಸ್ಕೂಲ್‌ ಯೂನಿಫಾರ್ಮ್‌ನಲ್ಲಿ ಪ್ರತ್ಯಕ್ಷರಾಗಿದ್ದಾರೆ. ಎರಡು ಜಡೆ ಹಾಕಿಕೊಂಡು, ಸ್ಕೂಲ್‌ ಯೂನಿಫಾರ್ಮ್ ಧರಿಸಿಕೊಂಡು ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ಸ್ಕೂಲ್ ಯೂನಿಫಾರ್ಮ್ ಧರಿಸಿದ್ದೇ ತಡ ನಟಿ ಕಾವ್ಯ ಶೈವ ಅವರಿಗೆ ತಮ್ಮ ಶಾಲಾ ದಿನಗಳು ನೆನಪಾಗಿವೆ. ಸ್ಕೂಲ್‌ ಯೂನಿಫಾರ್ಮ್ ಹಾಕಿದ್ದೇ ಹಾಕಿದ್ದು. ಸ್ಕೂಲ್‌ ಡೇಸ್‌ ರಪ್‌ ಅಂತ ಪಾಸ್ ಆದ್ವು! ಎಂದು ಸೋಷಿಯಲ್ ಮೀಡಿಯಾದಲ್ಲಿ ಕಾವ್ಯ ಶೈವ ಬರೆದುಕೊಂಡಿದ್ದಾರೆ.
ಕೆಂಡಸಂಪಿಗೆ’ ಬಳಿಕ ನಟಿ ಕಾವ್ಯ ಶೈವ ಮುಂದಿನ ಪ್ರಾಜೆಕ್ಟ್‌ಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅಪ್‌ಕಮಿಂಗ್ ಪ್ರಾಜೆಕ್ಟ್‌ನಲ್ಲಿ ಸ್ಕೂಲ್‌ ಹುಡುಗಿಯಾಗಿ ಕಾವ್ಯ ಶೈವ ಕಾಣಿಸಿಕೊಳ್ತಿದ್ದಾರೆ. ಹೀಗಾಗಿ, ಯೂನಿಫಾರ್ಮ್‌ ಧರಿಸಿ ಕ್ಯಾಮರಾಗೆ ಕಾವ್ಯ ಶೈವ ಪೋಸ್ ಕೊಟ್ಟಿದ್ದಾರೆ. ಅಂದ್ಹಾಗೆ, ಸ್ಕೂಲ್ ಹುಡುಗಿಯಾಗಿ ತಾವು ಕಾಣಿಸಿಕೊಳ್ತಿರುವ ಮುಂಬರುವ ಪ್ರಾಜೆಕ್ಟ್‌ ಬಗ್ಗೆ ಕಾವ್ಯ ಶೈವ ಹೆಚ್ಚಿನ ಮಾಹಿತಿ ಹಂಚಿಕೊಂಡಿಲ್ಲ. ಈ ಲುಕ್‌ ನನ್ನ ಮುಂಬರುವ ಪ್ರಾಜೆಕ್ಟ್‌ದು. ಸದ್ಯದಲ್ಲೇ ಅದನ್ನ ರಿವೀಲ್ ಮಾಡ್ತೀನಿ ಎಂದಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.