ಸತ್ತ ಆತ್ಮಗಳಿಗೆ ಹೆಣ್ಣುಮಕ್ಕಳ ದೇಹ ಯಾಕೆ ಯಾಕೆ ಇಷ್ಟ ಗೊ.ತ್ತಾ, ಅವರ ಮೈಮೇಲೆ ಯಾಕೆ ಬೇಗನೇ ಹೋ.ಗುತ್ತದೆ

 | 
Dd

ನಮ್ಮ ವೇದ ಉಪನಿಷತ್ತುಗಳಲ್ಲಿ. ಮನುಷ್ಯನೊಳಗಿರುವ ಅನಂತ ಮತ್ತು ಅವಿನಾಶಿ ಚೇತನವನ್ನು ಆತ್ಮ ಎಂದು ಕರೆಯಲಾಗಿದೆ. ಆತ್ಮಕ್ಕೆ ದೇಹ ಮತ್ತು ಮನಸ್ಸು ಉಪಕರಣಗಳು.‌ ಜೀವಂತವಿದ್ದಾಗ ದೇಹ ಮತ್ತು ಮನಸ್ಸು ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡುತ್ತವೆ. ಸತ್ತ ಮೇಲೆ ದೇಹ ಮತ್ತು ಮನಸ್ಸು ಅಳಿಯುತ್ತವೆ. ಆತ್ಮ ದೇಹದಿಂದ ಹೊರ ಬರುತ್ತದೆ. 

ಆತ್ಮಗಳ ಲೋಕವನ್ನು ಸೇರುತ್ತದೆ. ಸಮಯ ನೋಡಿಕೊಂಡು ಪುನರ್ಜನ್ಮ ಪಡೆದು, ಹೊಸ ದೇಹ ಮತ್ತು ಮನಸ್ಸನ್ನು ಹೊಂದುತ್ತದೆ ಎಂದು ನಂಬಲಾಗುತ್ತದೆ. ಹಲವು ಸಂದರ್ಭಗಳಲ್ಲಿ ಹಲವು ಕಾರಣಗಳಿಂದ, ಆತ್ಮವು ಆತ್ಮಲೋಕವನ್ನು ಸೇರದೆ ಪುನರ್ಜನ್ಮವನ್ನು ಪಡೆಯದೆ, ತ್ರಿಶಂಕುವಿನಂತೆ ಪ್ರೇತವಾಗಿ ಉಳಿದುಕೊಳ್ಳುತ್ತದೆ. 

ಅಲೆಮಾರಿಯಾಗುತ್ತದೆ ಎನ್ನಲಾಗುತ್ತದೆ. ದುರಂತ, ಅಸಹಜ ಸಾವು, ರೋಗ, ಆತ್ಮಹತ್ಯೆ, ಅಪಘಾತದಲ್ಲಿ ಅಕಾಲಿಕ ಮರಣ ಹೊಂದಿದ ವ್ಯಕ್ತಿಗಳು ದೆವ್ವಗಳಗುತ್ತಾರೆ.ತಮ್ಮ ಆಸೆ ಬಯಕೆಗಳನ್ನು ಪೂರೈಸಿಕೊಳ್ಳದ ಅಥವಾ ಪೂರೈಸಿಕೊಳ್ಳಲಾಗದವರು, ತಮ್ಮ ಪ್ರೀತಿಪಾತ್ರರನ್ನು, ತಾವು ಗಳಿಸಿದ ಆಸ್ತಿ ಹಣ-ಬೆಲೆಬಾಳುವ ವಸ್ತುಗಳ ಮೇಲೆ ಮೋಹವಿರುವವರು ಸತ್ತ ಮೇಲೂ ದೆವ್ವಗಳಾಗಿ ಉಳಿಯುತ್ತಾರೆ. 

ಎಂಬ ನಂಬಿಕೆ ಬಹಳ ಜನಪ್ರಿಯ. ಈ ಪ್ರೇತಾತ್ಮಗಳು, ತಮ್ಮ ದೇಹ ಸತ್ತ ಜಾಗದಲ್ಲಿ ವಾಸಿಸುತ್ತವೆ. ಅದರಲ್ಲೂ ಹೆಣ್ಣು ಜೀವಗಳನ್ನು ಕಾಡುವುದು ಹೆಚ್ಚು ಎಂಬ ಮಾತಿದೆ ಅದಕ್ಕೆ ಯೋಗಗುರು ರಂಗರಾಜು ಅವರು ಸುಕನ್ಯಾ ಎಂಬ ಮಹಿಳೆಯ ಕಥೆಯನ್ನು ಕೂಡ ಸಂದರ್ಶನ ಒಂದರಲ್ಲಿ ಹೇಳಿದ್ದಾರೆ. ದೆವ್ವಗಳ ಕುರಿತಾಗಿ ಅವರು ಸಾಕಷ್ಟು ಮಾಹಿತಿಗಳನ್ನು ಕೂಡ ಬಿಚ್ಚಿಟ್ಟಿದ್ದಾರೆ.

ಅನಿರೀಕ್ಷಿತವಾಗಿ, ಅಕಾಲಿಕವಾಗಿ ಆತ್ಮೀಯರೊಬ್ಬರನ್ನು ಕಳೆದುಕೊಂಡಾಗ, ಆ ವ್ಯಕ್ತಿಯ ಮನೆಯವರಿಗೆ ಮಾನಸಿಕ ಆಘಾತ ಉಂಟಾಗುತ್ತದೆ. ಅಸಹಜ ಸಾವು, ಕೊಲೆ, ಆತ್ಮಹತ್ಯೆ, ಅಪಘಾತ, ದುರಂತದಿಂದ ಆದ ಸಾವು ತೀವ್ರ ದುಃಖ ಭಾವೋದ್ವೇಗವನ್ನು ಮಾಡುತ್ತದೆ. ಭ್ರಮೆಗಳನ್ನು ಸೃಷ್ಟಿಸುತ್ತದೆ ಉದಾಹರಣೆಗೆ.
ಮಗುವನ್ನು ಕಳೆದುಕೊಂಡ ತಾಯಿಗೆ, ಮಗು ಸತ್ತಿಲ್ಲ, ಎಲ್ಲೋ ಹೋಗಿದೆ ಬರುತ್ತದೆ ಎನಿಸಲು ಪ್ರಾರಂಭವಾಗುತ್ತದೆ.

ಮಗು ಅತ್ತಂತೆ, ಅಮ್ಮ ಹಸಿವು ತಿನ್ನಲು ಕೊಡು ಎಂದು ಕೇಳಿದಂತೆ, ಅಂಗಳದಲ್ಲಿ ಆಟವಾಡುತ್ತಿರುವಂತೆ ಕಾಣುತ್ತದೆ. ಪತಿಯನ್ನು ಕಳೆದುಕೊಂಡ ಹೆಂಡತಿಗೆ, ಗಂಡ ತನ್ನ ಹೆಸರನ್ನು ಕೂಗಿದಂತೆ, ಬಾಗಿಲು ತೆಗಿ ಬಂದಿದ್ದೇನೆ ಎಂದಂತೆ, ಹಾಲಿನಲ್ಲಿ ಕುಳಿತು ಪೇಪರ್ ಓದುತ್ತಾ ಕಾಫಿ ಕೊಡು ಎಂದು ಕೇಳಿದಂತೆ ಭಾಸವಾಗಬಹುದು, ಸತ್ತ ತಂದೆ, ರೂಮಿನಲ್ಲಿ ಓಡಾಡಿದಂತೆ, ನನ್ನನ್ನು ವಾಕಿಂಗ್ ಕರೆದುಕೊಂಡು ಹೋಗಿ ಎಂದು ಕೇಳಿದಂತೆ, ಮಗ / ಮಗಳಿಗೆ ಕೇಳಿಸಬಹುದು, ಅಥವಾ ಕಣ್ಣಿಗೆ ಕಾಣಿಸಿಕೊಂಡು ಸಂಭಷಿಸಿದಂತೆ ಭ್ರಮೆಯಾಗುತ್ತದೆ.

ಸತ್ತ ವ್ಯಕ್ತಿಗಳು ಕನಸಿನಲ್ಲಿ ಬರುವುದು ಬಹುತೇಕ ಜನರ ಅನುಭವ. ಅಪಘಾತದಲ್ಲಿ ಸತ್ತ ವ್ಯಕ್ತಿ ನೋವಿನಿಂದ ಚೀರಾಡಿದಂತೆ ನನ್ನನ್ನು ಕಾಪಾಡಿ ಎಂದು ಬೇಡಿ ಕೊಂಡಂತೆ ಇತರರಿಗೆ ಭಾಸವಾಗಬಹುದು , ಹೀಗಾಗಿ ಸತ್ತ ವ್ಯಕ್ತಿಗಳ ಆತ್ಮಗಳು ಕೆಲವಾರು ದಿವಸಗಳು ಮನೆಯವರ ಕಣ್ಣಿಗೆ ಕಾಣಿಸಿಕೊಳ್ಳುತ್ತಾರೆ. ಮಾತಾಡಿದಂತೆ ಅನುಭವವಾಗುವುದನ್ನು ಸಾಕಷ್ಟು ಜನ ಹೇಳುತ್ತಾರೆ, ಇದೇ ದೆವ್ವದ ಕಲ್ಪನೆಗೆ ನಾಂದಿ ಹಾಡಿರುವ ವಿದ್ಯಮಾನ, “ನನಗೆ ಅನ್ಯಾಯ ಮಾಡಿದವರನ್ನೆಲ್ಲ, ನಾನು ಸುಮ್ಮನೆ ಬಿಡುವುದಿಲ್ಲ, ಸತ್ತರು ದೆವ್ವವಾಗಿ ಕಾಡುತ್ತೇನೆ, ಶಿಕ್ಷೆ ಕೊಟ್ಟು ನರಳುವಂತೆ ಮಾಡುತ್ತೇನೆ” ಎಂದು ಜನ ಹೇಳುತ್ತಾರೆ!

ಮೈಮೇಲೆ ದೆವ್ವ ಬರುವ ಪ್ರಕರಣಗಳು ಪ್ರಪಂಚದಾದ್ಯಂತ, ನಮ್ಮ ನಿಮಾನ್ಸ್ ಸಂಸ್ಥೆಯ ಮುಖಾಂತರ ಮೈಮೇಲೆ ದೆವ್ವ - ಭೂತ ಬರುವ ಪ್ರಕರಣಗಳ ಅಧ್ಯಯನ ಮಾಡಲಾಗಿದೆ. ಶೇಕಡ 75ರಷ್ಟು ಪ್ರಕರಣಗಳಲ್ಲಿ ಸ್ತ್ರೀಯರ ಮೇಲೆಯೇ ದೆವ್ವಗಳ ಆವಾಹನೆಯಾಗುತ್ತದೆ . 15 ರಿಂದ 40 ವರ್ಷದೊಳಗಿನ ಸ್ತ್ರೀಯರಲ್ಲಿ ಇದು ಕಂಡುಬರುತ್ತದೆ. ಒಂದು ಸಾಮಾನ್ಯ ಚಿತ್ರವೆಂದರೆ, ಸ್ತ್ರೀಯ ದೇಹ ತೂಗಾಡಲು ಶುರುವಾಗುತ್ತದೆ, ಆಕೆ ತಲೆಯನ್ನು ಕೆದರಿಕೊಳ್ಳುತ್ತಾಳೆ . 

ಮೈಮೇಲಿನ ಬಟ್ಟೆಗಳ ಬಗ್ಗೆ ಆಕೆಗೆ ಗಮನವಿರುವುದಿಲ್ಲ, ಹೂಂಕರಿಸುತ್ತಾಳೆ. ಜೋರಾಗಿ ಕಿರುಚುತ್ತಾಳೆ ಇಲ್ಲವೇ ನರಳುತ್ತಾಳೆ, ಅದನ್ನು ಕಂಡವರು ದೆವ್ವ ಬಂದಿದೆ ಎಂದು ಊಹಿಸಿ ಹೇಳುವುದು ನಾವು ಚಲನಚಿತ್ರ ಗಳಲ್ಲಿ ನೋಡುವ ಸಂಗತಿಯಾಗಿದೆ. ಆದರೆ ನಿಜವಾಗಿಯೂ ಇವೆಲ್ಲ ಕಟ್ಟುಕಥೆ ಎಂದು ಸ್ತ್ರೀಯರು ತಮ್ಮ ಕಷ್ಟ ಸಂಕಟ ನೋವನ್ನು ಈ ರೀತಿಯಲ್ಲಿ ಹೊರಹಾಕುತ್ತಾರೆ. ಅವರ ಸುಪ್ತ ಮನಸ್ಸು ದೆವ್ವ ಮೈಮೇಲೆ ಬರುವ ನಂಬಿಕೆಯನ್ನು ಈ ರೀತಿ ಬಳಸಿಕೊಳ್ಳುತ್ತದೆ, ಪ್ರತಿಭಟನೆ ಮಾಡಿ, ಸಹಾನುಭೂತಿ ಗಳಿಸುತ್ತಾರೆಂದು ರಂಗರಾಜರು ಹೇಳಿದ್ದಾರೆ.