ಈ ಮುದ್ದಾದ IAS ಅಧಿಕಾರಿಗೆ ಇಷ್ಟು ಡಿಮಾಂಡ್ ಯಾಕೆ, ಕೆಲಸಕ್ಕಾಗಿ ಮದುವೆ ತ್ಯಾಗ ಮಾಡಿದ್ದ ಆಫೀಸರ್

 | 
ರ್ರ್ರ

ಇತ್ತೀಚಿಗೆ ಕಲಬುರಗಿ ಡಿಸಿಯಾಗಿದ್ದ ಯಶವಂತ ವಿ. ಗುರುಕರ್ ವರ್ಗಾವಣೆ ಮಾಡಿ ಅವರ ಸ್ಥಾನಕ್ಕೆ 2015ನೇ ಬ್ಯಾಚ್ ಐಎಎಸ್ ಅಧಿಕಾರಿ ಫೌಜಿಯಾ ತರನ್ನುಮ್ ನೇಮಕ ಮಾಡಲಾಗಿದೆ. ಫೌಜಿಯಾ ತರನ್ನುಮ್ ಕರ್ನಾಟಕ ಲೋಕಸೇವಾ ಆಯೋಗ ಕೆಪಿಎಸ್‌ಸಿ ಪರೀಕ್ಷಾ ನಿಯಂತ್ರಕರಾಗಿದ್ದರು.ಅಷ್ಟಕ್ಕೂ ಅವರ ಸಾಹಸಗಾಥೆ ಕೇಳಿದ್ರೆ ನಿಬ್ಬೆರಗಾಗ್ತೀರಿ.

ನೂತನ ಜಿಲ್ಲಾಧಿಕಾರಿಯಾಗಿ ನೇಮಕಗೊಂಡಿರುವ ಫೌಜಿಯಾ ತರನ್ನುಮ್‌ ಅವರಿಗೆ ಕಲಬುರಗಿ ಹೊಸದಲ್ಲ. 2019ರಲ್ಲಿ ಅವರು ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತರಾಗಿ ಕಾರ್ಯ ನಿರ್ವಹಣೆ ಮಾಡಿದ್ದರು. ಈಗ ಜಿಲ್ಲಾಧಿಕಾರಿಯಾಗಿ ಮತ್ತೆ ಜಿಲ್ಲೆಗೆ ಆಗಮಿಸಿದ್ದಾರೆ.
ಫೌಜಿಯಾ ತರನ್ನುಮ್‌ ಚಿಕ್ಕಬಳ್ಳಾಪುರ ಮತ್ತು ಕೊಪ್ಪಳ ಜಿಲ್ಲಾ ಪಂಚಾಯತ್ ಸಿಒಇ ಆಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.

ಕೊಪ್ಪಳ ಜಿಲ್ಲಾ ಪಂಚಾಯತಿಯಿಂದ ಅವರು ಕೆಪಿಎಸ್‌ಸಿ ಪರೀಕ್ಷಾ ನಿಯಂತ್ರಕರಾಗಿ ವರ್ಗಾವಣೆಗೊಂಡಿದ್ದರು.
ಕಲಬುರಗಿ ಜಿಲ್ಲೆಯಲ್ಲಿ ಎಗ್ಗಿಲ್ಲದೇ ಸಾಗುತ್ತಿರುವ ಅಕ್ರಮ‌ ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆಗೆ ಕಡಿವಾಣ ಹಾಕಲು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ ಗಟ್ಟಿ ಗಿತ್ತಿ ಈ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಏಕೆಂದರೆ ಅಕ್ರಮ ಮರಳು ಮಾಫಿಯಾ ಕೆಲವು ತಿಂಗಳ ಹಿಂದೆ ಪೊಲೀಸ್ ಅಧಿಕಾರಿಯನ್ನು ಜಿಲ್ಲೆಯಲ್ಲಿ ಹತ್ಯೆ ಮಾಡಿತ್ತು.

2019-20ನೇ ಸಾಲಿನ ವಾರ್ಷಿಕ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಇಡೀ ರಾಜ್ಯದಲ್ಲಿಯೇ ಚಿಕ್ಕಬಳ್ಳಾಪುರ ಜಿಲ್ಲೆಗೆ ಜಿಲ್ಲೆಯ ಶೈಕ್ಷಣಿಕ ಇತಿಹಾಸದಲ್ಲಿ ಪ್ರಥಮ ಸ್ಥಾನ ತಂದುಕೊಟ್ಟು ಇತಿಹಾಸವನ್ನೇ ಸೃಷ್ಟಿಸಿದ್ದ ಜನಮೆಚ್ಚಿದ ಜಿಲ್ಲಾ ಪಂಚಾಯಿತಿ ಸಿಇಒ ಇವರಾಗಿದ್ದರು. ಇನ್ನು ನರೇಗಾ ಕಾಮಗಾರಿಯ ವಿಷಯದಲ್ಲೂ ಕೂಡ 
ನರೇಗಾ ಯೋಜನೆಯ ಜಂಟಿ ಖಾತೆಗಳನ್ನು ರದ್ದುಗೊಳಿಸಿ, ಕೂಲಿ ಕಾರ್ಮಿಕರ ವೈಯಕ್ತಿಕ ಖಾತೆಗಳನ್ನು ತುರ್ತಾಗಿ ತೆರೆಯಬೇಕು. 

ಕಾಲ ಕಾಲಕ್ಕೆ ಸರಕಾರದಿಂದ ಬಿಡುಗಡೆ ಆಗುವ ಹಣ ತ್ವರಿತವಾಗಿ ಫಲಾನುಭವಿಗಳ ಖಾತೆಗೆ ಜಮೆ ಮಾಡಬೇಕು ಎಂದು ಜಿಪಂ ಸಿಇಒ ಬಿ.ಫೌಜಿಯಾ ತರನ್ನುಮ್‌ ಆದೇಶ ಹೊರಡಿಸಿ ಹಣ ಕೈಗೆ ಸಿಗುವಂತೆ
ಮಾಡಿದ್ದರು. ಹಾಗಾಗಿ ಇವರನ್ನು ಪ್ರತಿಯೊಂದು ಜಿಲ್ಲೆಯ ಜನರೂ ತಮ್ಮ ಜಿಲ್ಲೆಯ ಜಿಲ್ಲಾಧಿಕಾರಿ ಆಗಲಿ ಎಂದು ಬಯಸುತ್ತಾರೆ. ಅಷ್ಟು ಧಕ್ಷ ಹಾಗೂ ಉತ್ತಮ ಆಫೀಸರ್ ಎಂಬ ಕೀರ್ತಿ ಇವರದು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.