ಸೋಲುವ ಸಿನಿಮಾಗಳಿಗೆ ನಾನ್ಯಾಕೆ ಹಾಡು ಹಾಡಬೇಕು, ಗುರುಕಿರಣ್
Mar 29, 2025, 15:53 IST
|

ಇತ್ತೀಚಿಗೆ ಸಂದರ್ಶನ ಒಂದರಲ್ಲಿ ಮಾತನಾಡಿದ ಅವರು, ದೇವರ ಲೆಕ್ಕದಲ್ಲಿ ನನ್ನ ರನ್ ರೇಟ್ ಚೆನ್ನಾಗಿದೆ. ನಾನು ಮಾಡಿದ ನೂರು ಸಿನಿಮಾದಲ್ಲಿ ನೆಲವತ್ತಾರು ಸಿನಿಮಾಗಳು ನೂರು ದಿನ ಓಡಿವೆ. ಆ ರೀತಿಯ ಗುಣಮಟ್ಟವನ್ನು ಯಾರೂ ಕೊಡಲು ಸಾಧ್ಯವಿಲ್ಲ. ಯಾಕೆಂದರೆ ನನ್ನ 50 ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಮಾಡಿದ ಸಿನಿಮಾಗಳ ಸಕ್ಸೆಸ್ ರೇಟ್ ಜಾಸ್ತಿ ಇದೆ. ಈಗ ಏನಾಗುತ್ತದೆ ಅಂದರೆ ಸಿನಿಮಾದ ಕಥೆಗಳು ಸ್ಫೂರ್ತಿ ನೀಡಲ್ಲ. ಯಾವುದೇ ಒಂದು ಟ್ಯೂನ್ ಮಾಡಬೇಕು ಅಂದರೂ ಕಥೆ ನಮ್ಮನ್ನು ಸೆಳೆಯಬೇಕು ಎಂದರು.
ಕೆಲವೊಮ್ಮೆ ಹೊಸಬರು ಹೆಂಗಾದರೂ ಸಿನಿಮಾ ಮಾಡಿ ಮುಗಿಸೋಣ ಎಂದು ನೋಡುತ್ತಾರೆ. ಇದು ಸರಿಯಲ್ಲ. ಒಂದು ಸಿನಿಮಾವನ್ನು ಎಷ್ಟು ಚೆನ್ನಾಗಿ ಮಾಡಬಹುದು ಎಂದು ಯೋಚಿಸಬೇಕು. ಅದನ್ನು ಬಿಟ್ಟು ಹೇಗಾದರೂ ಮುಗಿಸೋಣ ಎಂದುಕೊಳ್ಳಬಾರದು. ಈಗ ಸಿನಿಮಾ ಮಾಡುವ ಮಾದರಿ ಬದಲಾಗಿ ಹೋಗಿದೆ. ಸಿನಿಮಾಗೆ ಈಗ ಬ್ಯುಸಿನೆಸ್ ಮಾಡಲು ಬರುತ್ತಾರೆ.
ಇನ್ನು ಸರಿಯಾಗಿ ಹೇಳಬೇಕೆಂದರೆ ಮೊದಲೆಲ್ಲಾ ಕಲೆಗೆ ಬೆಲೆ ಕೊಡುತ್ತಿದ್ದ ನಿರ್ಮಾಪಕರ ಬಳಗ ಇತ್ತು. ಆದರೆ ಈಗ ಹೇಗಾಗಿದೆ ಅಂದರೆ ಒಂದು ಸಿನಿಮಾಗೆ ಇಷ್ಟು ಬಂಡವಾಳ ಹಾಕಿ ಇಷ್ಟು ಲಾಭ ಎತ್ತಬೇಕು ಎಂದು ಯೋಚಿಸುತ್ತಾರೆ. ಇಲ್ಲಾ ಇಷ್ಟು ಹಣದಲ್ಲಿ ಸಿನಿಮಾ ಮುಗಿಸಬೇಕು ಎಂದು ಯೋಚಿಸುತ್ತಾರೆ. ಪರಿಸ್ಥಿತಿ ಹೀಗಿದ್ದಾಗ ಒಳ್ಳೆಯ ಸಿನಿಮಾಗಳನ್ನು ಮಾಡುವುದು ಕಷ್ಟವಾಗುತ್ತಿದೆ ಎಂದು ಹೇಳಿದರು.
ಜೀವನವನ್ನು ಎಂಜಾಯ್ ಮಾಡಬೇಕು, ಜೊತೆಗೆ ಮಾಡುವ ಕೆಲಸವನ್ನು ಕೂಡ ಎಂಜಾಯ್ ಮಾಡಬೇಕು. ಮೊದಲಿನಿಂದಲೂ ನಾನು ಅದನ್ನೇ ಮಾಡಿಕೊಂಡು ಬಂದಿರುವುದು. ಆ ರೀತಿಯ ಸಿನಿಮಾಗಳು ಮತ್ತೆ ಬರಬೇಕು. ಆ ರೀತಿಯ ಪ್ರಾಜೆಕ್ಟ್‌ಗಳು ಬಂದಾಗ ಖಂಡಿತಾ ಮಾಡುತ್ತೇನೆ. ಯಾವ ಪ್ರಾಜೆಕ್ಟ್‌ಗಳನ್ನೂ ಮಾಡುವುದೇ ಇಲ್ಲ ಅಂತಾ ನಾನು ಕುಳಿತಿಲ್ಲ.
ಒಳ್ಳೆಯ ಸಿನಿಮಾಗಳನ್ನು ಮಾಡುತ್ತೇನೆ. ಯಾವ ಸಿನಿಮಾಗಳನ್ನು ಬೇಕಾದರೂ ಮಾಡುತ್ತೇನೆ ಅಂದರೆ ಎಪ್ಪತ್ತೈದು ಸಿನಿಮಾಗಳಲ್ಲಿ ಇಪ್ಪತ್ತೈದು ಸಿನಿಮಾ ನನಗೆ ಬರುವುದಿಲ್ವಾ? ಸಿನಿಮಾಗಳನ್ನು ಮಾಡುವ ಹಸಿವು ಇದೆ. ಆದರೆ ಒಳ್ಳೆಯ ಸಿನಿಮಾಗಳನ್ನು ಮಾಡೋಣ ಅಂತಾ ಕಾಯುತ್ತಿದ್ದೇನೆ ಎಂದು ಹೇಳಿದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023