ದರ್ಶನ್ ಸುದೀಪ್ ಮತ್ತೆ ಒಂದಾಗುತ್ತಾರಾ, ವಿಜಯಲಕ್ಷ್ಮಿ ಮಹದಾಸೆ ಏನು ಗೊತ್ತಾ

 | 
Bx

ಅಭಿಮಾನಿಗಳ ಪಾಲಿನ ಡಿ ಬಾಸ್ ದರ್ಶನ್ ಅವರು ಕಳೆದ ಕೆಲವು ದಿನಗಳಿಂದ ತಮ್ಮಿಂದ ನೋವಾಗಿರುವವರ ಬಳಿ ಕ್ಷಮೆ ಕೇಳಿ, ನಡುವೆ ಸೃಷ್ಟಿಯಾಗಿದ್ದಂತಹ ಗೋಡೆಯನ್ನು ಒಡೆದು ಹಾಕುವ ಪ್ರಯತ್ನದಲ್ಲಿ ಇದ್ದಾರೆ.
ಹೌದು ಗೆಳೆಯರೇ ಕರಿಯ ಸಿನಿಮಾದ ನಂತರ ಜೋಗಿ ಪ್ರೇಮ್ ದರ್ಶನ್ ಅವರ ನಡುವೆ ಮುನಿಸು ಮೂಡಿದೆ ಮತ್ತೆಂದು ಒಟ್ಟಿಗೆ ಕೆಲಸ ಮಾಡುವುದಿಲ್ಲ ಎಂಬ ಸುದ್ದಿ ಹಬ್ಬಿತ್ತು.

ಅದರಂತೆ ಬರೋಬ್ಬರಿ 20 ವರ್ಷಗಳ ಕಾಲ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಜೋಗಿ ಪ್ರೇಮ್ ಅವರ ಕಾಂಬಿನೇಷನ್ ನಲ್ಲಿ ಯಾವ ಸಿನಿಮಾಗಳು ಬಂದಿರಲಿಲ್ಲ. ಆದರೆ ಈಗ ಮುನಿಸು ಮರೆತು ಒಂದಾಗಿರುವ ಪ್ರೇಮ್ ಮತ್ತು ದರ್ಶನ್ ಕೆವಿಎನ್ ಪ್ರೊಡಕ್ಷನ್ ನಲ್ಲಿ ಕೆಲಸ ಮಾಡಲಿದ್ದಾರೆ ಎಂಬ ಮಾಹಿತಿ ಸದ್ಯ ಸ್ಯಾಂಡಲ್ವುಡ್ನಲ್ಲಿ ಜೋರಾಗಿ ಚರ್ಚೆಗೊಳಗಾಗುತ್ತಿದೆ. 

ಇನ್ನು ಎರಡನೆಯದಾಗಿ ದರ್ಶನ್ ಮತ್ತು ಮಾಧ್ಯಮದವರ ನಡುವೆ ಸೃಷ್ಟಿಯಾಗಿದ್ದಂತಹ ವಿವಾದಕ್ಕೆ ಕ್ಷಮಾಪಣ ಪತ್ರವನ್ನು ಹಂಚಿಕೊಳ್ಳುವ ಮೂಲಕ ಸ್ವತಃ ದರ್ಶನ್ ಅವರೆ ತಮ್ಮಿಂದ ಆದಂತಹ ತಪ್ಪಿಗೆ ಕ್ಷಮೆ ಇರಲಿ ಎಂದು ಕೇಳಿಕೊಂಡಿದ್ದರು. ಅಲ್ಲದೆ ಈ ಹಿಂದೆ ರಾಕ್ ಲೈನ್ ವೆಂಕಟೇಶ್ ಮತ್ತು ಕನ್ನಡದ ಹಿರಿಯ ಸಂಪಾದಕರು ಮತ್ತು ದರ್ಶನ್ ಒಟ್ಟಾಗಿ ಸೇರಿ ಸಭೆಯನ್ನು ಏರ್ಪಡಿಸಿ ಕುಳಿತು ಆದ ವಿಚಾರಗಳನ್ನೆಲ್ಲ ವಿವರಿಸಿ ದರ್ಶನ್ ಮಾಧ್ಯಮದವರಿಗೆ ಕ್ಷಮೆ ಕೇಳಿದರಂತೆ.

ಇದೀಗ ಎಲ್ಲವೂ ಅಂದುಕೊಂಡಂತೆ ಆದರೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರ ಸಾರಥ್ಯದಲ್ಲಿ ಕಿಚ್ಚ ಸುದೀಪ್ ಮತ್ತು ದರ್ಶನ್ ಅವರ ಸಂಧಾನ ನಡಿಗೆಯಲ್ಲಿರುವ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ. ಇನ್ನು ಈ ಕುರಿತಾಗಿ ಮಾತನಾಡಿದ ಪತ್ನಿ ವಿಜಯಲಕ್ಷ್ಮಿ ಅವರು ಇದರಿಂದ ಬಹಳ ಸಂತೋಷ ವಾಗಿದೆ. ನಾನು ಮತ್ತು ಪ್ರಿಯಾ ಎಂದೆಂದಿಗೂ ಬೆಸ್ಟ್ ಫ್ರೆಂಡ್ಸ್ ಅದರಂತೆ ಇವರಿಬ್ಬರು ಒಟ್ಟಾಗಿ ನಡೆದರೆ ಕನ್ನಡ ಚಿತ್ರರಂಗದ ಹೆಸರೂ ಬೇರೆ ಲೇವಲ್ ಅಲ್ಲಿ ಬೆಳಗುತ್ತದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.