MLA ಪ್ರದೀಪ್ ಈಶ್ವರ್ ಬಿಗ್ ಬಾಸ್ ಮನೆಗೆ ಹೋಗುತ್ತಾರಾ? ಈ ಬಾರಿ ಯಾರೆಲ್ಲ ಸ್ಪರ್ಧಿಗಳು ಇದ್ದಾರೆ ಗೊತ್ತಾ

 | 
ಹಿಗೀ

ಈ ಬಾರಿ ಬಿಗ್ ಬಾಸ್ ಕನ್ನಡದ 10ನೇ ಸೀಸನ್. ಈ ಕಾರಣಕ್ಕೆ ಹಿಂದೆ ಬಂದ ಬಿಗ್ ಬಾಸ್‌ಗಿಂತ ಈ ಬಾರಿ ವಿಶೇಷವಾಗಿರುತ್ತೆ ಅನ್ನೋ ಮಾತು ಕೇಳಿ ಬರುತ್ತಿದೆ. ಈಗಾಗಲೇ ಹೊರಬಿಟ್ಟಿರೋ ಬಿಗ್ ಬಾಸ್ ಸೀಸನ್ 10ರ ಚಿಕ್ಕದೊಂದು ತುಣುಕು ಇದನ್ನು ಸಾರಿ ಸಾರಿ ಹೇಳಿದೆ. ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10 ಮುಂದಿನ ತಿಂಗಳು ಅಕ್ಟೋಬರ್ 8ರಂದು ಆರಂಭ ಆಗುತ್ತಿದೆ. 

ಈಗಾಗಲೇ ಅದಕ್ಕೆ ಬೇಕಿರೋ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುತ್ತಿದೆ. ಬಿಗ್ ಬಾಸ್ ಸೀಸನ್ 10ರ ಬ್ಲ್ಯೂ ಪ್ರಿಂಟ್ ಕೂಡ ರೆಡಿಯಾಗಿದೆ ಎಂದು ಮೂಲಗಳು ಹೇಳುತ್ತಿವೆ. ಆದರೆ, ಈ ಬಾರಿ ಬಿಗ್ ಬಾಸ್ ಕನ್ನಡ ಸೀಸನ್ 10ಗೆ ಭಾಗವಹಿಸುವ ಸ್ಪರ್ಧಿಗಳು ಯಾರು ಅನ್ನೋದು ಮಾತ್ರ ಇನ್ನೂ ಗೊತ್ತಾಗಿಲ್ಲ. ಹೀಗಾಗಿ ಬಿಗ್ ಬಾಸ್ ಆರಂಭಕ್ಕೂ ಮುನ್ನ ಫಿಲ್ಮಿಬೀಟ್ ಕನ್ನಡ ಬಿಗ್ ಬಾಸ್ ಮನೆಯೊಳಗೆ ಯಾರೆಲ್ಲ ಇರಬೇಕು. 

ಯಾರನ್ನು ಮನೆಯೊಳಗೆ ನೋಡಲು ಜನರು ಭಯಸುತ್ತಿದ್ದಾರೆ? ಅನ್ನೋ ಮಾಹಿತಿಯನ್ನು ಕಲೆ ಹಾಕಿತ್ತು. ಜನರು ನಾಲ್ಕು ಹೆಸರುಗಳನ್ನು ಪ್ರಮುಖವಾಗಿ ಹೇಳಿದ್ದಾರೆ. ಕನ್ನಡ ಚಿತ್ರರಂಗದ ಹಾಸ್ಯ ನಟ ಬುಲೆಟ್ ಪ್ರಕಾಶ್ ಕೆಲವು ವರ್ಷಗಳ ಹಿಂದಷ್ಟೇ ಅಗಲಿದ್ದಾರೆ. ಈಗ ಅವರ ಪುತ್ರ ರಕ್ಷಕ್ ಬುಲೆಟ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುವುದಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. 

ಆದರೆ, ಅದಕ್ಕೂ ಮುನ್ನ ಯೂಟ್ಯೂನ್ ಚಾನೆಲ್‌ಗೆ ನೀಡಿದ ಅವರ ಸಂದರ್ಶನಗಳು ಟ್ರೋಲ್ ಆಗಿದ್ದವು. ಹೀಗಾಗಿ "ಬಿಗ್ ಬಾಸ್ ಮನೆಯೊಳಗೆ ಬುಲೆಟ್ ಪ್ರಕಾಶ್ ಮಗ ರಕ್ಷಕ್ ಬುಲೆಟ್ ಹೋಗಬೇಕು" ಅಂತ ಕೆಲವರು ಅಭಿಪ್ರಾಯ ಪಟ್ಟಿದ್ದಾರೆ. ಚಿಕ್ಕಬಳ್ಳಾಪುರದ ಶಾಸಕ ಪ್ರದೀಪ್ ಈಶ್ವರ್ ಯಾವಾಗಲೂ ಟ್ರೆಂಡಿಂಗ್‌ನಲ್ಲಿ ಇರುತ್ತಾರೆ. ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿಯ ಡಾ.ಕೆ ಸುಧಾಕರ್ ಅವರನ್ನು ಅಚ್ಚರಿಯೆಂಬಂತೆ ಮಣಿಸಿದ್ದರು. 

ಆ ಬಳಿಕ ಪ್ರದೀಪ್ ಈಶ್ವರ್ ಮೋಟಿವೇಷನಲ್ ಸ್ಪೀಚ್‌ಗಳು ಟ್ರೇಂಡ್ ಆಗಿದ್ದವು. ಕೆಲವೊಮ್ಮೆ ಪ್ರದೀಶ್ ಈಶ್ವರ್ ಮಾತುಗಳು ಕೂಡ ಟ್ರೋಲ್ ಆಗಿದ್ದೂ ಇದೆ. ಅದಕ್ಕೆ ಜನರು ಕೂಡ ಪ್ರದೀಪ್ ಈಶ್ವರ್ ಬಿಗ್ ಬಾಸ್ ಮನೆಯೊಳಗೆ ಹೋಗಬೇಕು ಎಂದಿದ್ದರು. ರಕ್ಷಕ್ ಬುಲೆಟ್, ಪ್ರದೀಶ್ ಈಶ್ವರ್ ಜೊತೆಗೆ ಡಾಕ್ಟರ್ ಬ್ರೋ ಬಿಗ್ ಬಾಸ್ ಮನೆಯೊಳಗೆ ಹೋಗಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ. "ಕಿಚ್ಚ ಸುದೀಪ್ ಅವರನ್ನು ನೋಡುವುದಕ್ಕೆ ಕಾಯುತ್ತಿದ್ದೇವೆ. 

ಅವರ ಸ್ಟೈಲ್ ಎಲ್ಲಾ ಇಷ್ಟ ಆಗುತ್ತೆ. ನನ್ನ ಪ್ರಕಾರ, ಈ ಬಾರಿ ಡಾ. ಬ್ರೋ ಬಿಗ್ ಬಾಸ್ ಮನೆಗೆ ಹೋಗಬೇಕು. ಬೇರೆ ಬೇರೆ ದೇಶಕ್ಕೆ ಹೋಗಿ ಎಲ್ಲಾ ನೋಡಿಕೊಂಡು ಬಂದಿರೋದ್ರಿಂದ ನಮಗೆ ಅವರನ್ನು ಕಂಡರೆ ಖುಷಿ ಎಂದು ಜನರು ಅಭಿಪ್ರಾಯ ಪಟ್ಟಿದ್ದಾರೆ. ಸಮಾಜದಲ್ಲಿ ವಿಶಿಷ್ಟ ಪ್ರತಿಭೆಯುಳ್ಳವರನ್ನು, ಇಲ್ಲ ಹೆಸರು ಮಾಡಿದವರನ್ನು ಬಿಗ್ ಬಾಸ್ ಆಯ್ಕೆ ಮಾಡುತ್ತೆ. ಕಳೆದ ಬಾರಿನೇ ಬಿಗ್ ಬಾಸ್‌ ಮನೆಯೊಳಗೆ ಕಾಫಿನಾಡು ಚಂದು ಹೋಗುತ್ತಾರೆ ಎಂದು ನಿರೀಕ್ಷೆ ಮಾಡಲಾಗಿತ್ತು. 

ಆದರೆ, ಹೋಗಿರಲಿಲ್ಲ. ಈ ಬಾರಿ ಚಿಕ್ಕಮಗಳೂರಿನ ಕಾಫಿನಾಡು ಚಂದು ಹೋಗಬೇಕು.. ಎಂದು ಅಭಿಪ್ರಾಯ ಪಟ್ಟಿದ್ದಾರೆ. ಈ ನಾಲ್ಕು ಬಿಗ್ ಬಾಸ್ ಮನೆಯೊಳಗೆ ಇದ್ದರೆ ಮನರಂಜನೆ ಗ್ಯಾರಂಟಿ ಅಂತಿದ್ದಾರೆ. ಇದನ್ನೆಲ್ಲ ನೋಡ್ತಾ ಇದ್ದರೆ ಈ ಸಲ ಪ್ರದೀಪ್ ಈಶ್ವರ್ ಅವರು ಬಿಗ್ಬಾಸ್ ಪ್ರವೇಶ ಮಾಡೋದು ಗ್ಯಾರಂಟಿ ಅನಿಸುತ್ತಿದೆ. ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.