ಅಯೋಧ್ಯೆ ರಾಮ ಜನ್ಮ ಭೂಮಿಗೆ ಗ್ರಾಂಡ್ ಎಂಟ್ರಿ ಕೊಡುತ್ತಾರಾ ಸೋನಿಯಾ ಗಾಂಧಿ? ರಾಮನಿಗೆ ಮತ್ತಷ್ಟು ಬಲ

 | 
Hd

ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರ ಬಹುತೇಕ ಪೂರ್ಣಗೊಂಡಿದೆ. ಕೊನೆಯ ಹಂತದ ಸಿದ್ಧತೆಗಳು ನಡೆಯುತ್ತಿದ್ದು, ಇದೇ ಜನವರಿ 22ರಂದು ಭವ್ಯ ರಾಮಮಂದಿರ  ಲೋಕಾರ್ಪಣೆಗೊಳ್ಳಲಿದೆ. ಲಕ್ಷಾಂತರ ಹಿಂದೂಗಳ ಕನಸು ನನಸಾಗಲಿದೆ. ರಾಮ ಮಂತ್ರಾಕ್ಷತೆ ಮನೆ ಮನೆಯನ್ನು ಸಹ ತಲುಪಿದೆ.

ದೇಶಾದ್ಯಂತ ಗಣ್ಯಾತಿಗಣ್ಯರಿಗೆ ಅಯೋಧ್ಯಾ ರಾಮಮಂದಿರದ ಉದ್ಘಾಟನೆಗೆ ಆಹ್ವಾನ ನೀಡಲಾಗುತ್ತಿದ್ದು, ಇದೀಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಅವರನ್ನೂ ರಾಮಮಂದಿರದ ಉದ್ಘಾಟನೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಅವರಿಗೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅವರಿಗೆ ಆಹ್ವಾನ ಕಳುಹಿಸಿದೆ ಎಂದು ಮೂಲಗಳು ತಿಳಿಸಿದ್ದು, ಆದರೆ ಅಯೋಧ್ಯಾ ರಾಮಮಂದಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕರು  ಹಾಗೂ ಸೋನಿಯಾ ಗಾಂಧಿ ಭಾಗವಹಿಸದಿರುವ ಕುರಿತು ಕೇಳಿ ಬಂದಿದೆ.

ಹೌದು ಇದು ಹಿಂದೂಗಳ ಹಬ್ಬವಲ್ಲ. ಇದು ಅಷ್ಟಕ್ಕೂ ರಾಮ ಮಂದಿರದ ಹೆಸರು ಹೇಳಿ ಬಿಜೆಪಿ ನಾಯಕರು ಮಾಡುತ್ತಿರುವ ಕುತಂತ್ರ ಹಾಗಾಗಿ ನಾವು ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ. ಇನ್ನೂ ಸಂಪೂರ್ಣವಾಗದ ಮಂದಿರದಲ್ಲಿ ರಾಮಲಲ್ಲಾ ನನ್ನು ಕೂರಿಸುವ ಹಠವೇಕೆ ಎಂದು ಪ್ರಶ್ನಿಸಿದ್ದಾರೆ ಕೂಡ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.