'ನನ್ನ ಮದುವೆ ಆಗ್ತೀಯಾ; ತನಿಷಾ ಬಳಿ‌ ಬೇಡಿಕೊಂಡ ವರ್ತೂರ್ ಸಂತು

 | 
ಬಹ

ಬಿಗ್‌ಬಾಸ್‌ ಸ್ಪರ್ಧಿಯಾಗಿದ್ದ ವರ್ತೂರು ಸಂತೋಷ್‌ ಹಳ್ಳಿಕಾರ್‌ ಒಡೆಯ ಎಂದೇ ಸಖತ್‌ ಫೇಮಸ್‌ ಆಗಿದ್ದಾರೆ. ದೊಡ್ಡ ಕುಟುಂಬದಲ್ಲಿ ಬೆಳೆದ ಇವರು 38 ಎಕರೆ ಆಸ್ತಿಯನ್ನು ಹೊಂದಿದ್ದಾರೆ. ಇನ್ನು ವರ್ತೂರು ಸಂತೋಷ್‌ ವಿದ್ಯಾರ್ಹತೆಯನ್ನು ನೋಡುವುದಾದರೇ ಬಾಲ್ಯದಿಂದಲೂ ಇಂಗ್ಲೀಷ್‌ ಮಿಡಿಯಂನಲ್ಲೇ ಓದಿದ ಇವರು MBA ಪದವಿಯನ್ನು ಮಾಡಲು ಬಯಸಿದ್ದರಂತೆ ಆದರೆ ಕಾರಣಾಂತರಗಳಿಂದ ಅರ್ಧದಲ್ಲೇ ಕಾಲೇಜ್‌ ಡ್ರಾಪ್‌ಔಟ್‌ ಮಾಡಿದ್ದಾರೆ.

ಹದಿನೈದು ವರ್ಷದವರೆಗೂ ಕೂಡು ಕುಂಟಬದಲ್ಲಿಯೇ ಬೆಳೆದ ವರ್ತೂರು ಸಂತೋಷ್‌ ಬೇರೆಯಾದ ಮೇಲೆ 15 ಎಕರೆ ಜಮೀನಿನ ಒಡೆಯನಾಗುತ್ತಾರೆ. ಇವರ ಮನೆಯಲ್ಲಿ 400 ಗ್ರಾಂ ಚಿನ್ನಾಭರಣವಿದೆ ಎನ್ನಲಾಗಿದೆ. ಚಿಕ್ಕ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡ ವರ್ತೂರು ಸಂತೋಷ್‌ ಸದ್ಯ ಕೋಟಿ ಬಾಳುವ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ.

ಇನ್ನು ಇತ್ತೀಚೆಗೆ ಸಂತೋಷ್‌ ರಾಜಕೀಯಕ್ಕೆ ಪ್ರವೇಶ ಮಾಡ್ತಾರೆ ಎನ್ನಲಾಗಿತ್ತು. ಆದರೆ ಈ ಬಗ್ಗೆ ಹೇಳಿಕೊಂಡಿದ್ದ ಅವರು ನಾನು ಪಕ್ಕಾ ರೈತ. ಅದನ್ನು ಬಿಟ್ಟು ಬೇರೆ ಏನು ಇಲ್ಲ. ನಾನು ಯಾವ ರಾಜಕೀಯಕ್ಕೂ ಬರುವುದಿಲ್ಲ ಎಂದು ಹೇಳುವ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದರು. ಸದ್ಯ ಒಬ್ಬ ರೈತನಾಗಿ ಏನೆಲ್ಲಾ ಸಾಧನೆ ಮಾಡಬಹುದು ಎನ್ನುವುದಕ್ಕೆ ಉತ್ತಮ ಉದಾಹರಣೆಯಾಗಿ ನಿಂತುಕೊಂಡಿರುವ ವರ್ತೂರು ಸಂತೋಷ್‌ ಕೋಟಿ ಕೋಟಿಯ ಒಡೆನಾಗಿದ್ದಾರೆ. 

ಇವರ ವೈವಾಹಿಕ ಜೀವನವನ್ನು ನೋಡುವುದಾದರೇ ಇವರಿಗೆ ಈಗಾಗಲೇ ಮದುವೆಯಾಗಿದ್ದು ವೈಮನಸ್ಯೆದಿಂದಾಗಿ ಪತ್ನಿಯಿಂದ ದೂರ ಉಳಿದಿದ್ದಾರೆ ಎಂದು ಹೇಳಲಾಗುತ್ತಿದೆ. ಅದರ ಬೆನ್ನಲ್ಲೇ ತನಿಶಾ ಅವರನ್ನು ಮದುವೆ ಆಗುತ್ತಾರೆ ಎಂಬ ಸುದ್ದಿ ಎಲ್ಲೆಡೆ ವೈರಲ್ ಆಗಿತ್ತು. ಇನ್ನು ರಿಯಾಲಿಟಿ ಶೋ ಒಂದರಲ್ಲಿ ಪ್ರಪೋಸ್ ಮಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.